ತುಮಕೂರು ಬಸ್ ನಿಲ್ದಾಣದ ಕ್ಯಾಂಟೀನಲ್ಲಿ ಗ್ರಾಹಕರಿಗೆ ಸರ್ವ್ ಮಾಡಿದ ಸಚಿವ ಪರಮೇಶ್ವರ್
ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ್ ಕ್ಯಾಂಟೀನಲ್ಲಿ ಬೋಂಡ ಮತ್ತು ಟೀ ಸವಿದ ಬಳಿಕ ನಗರದ ಆಟೋರಿಕ್ಷಾ ಚಾಲಕರ ಜೊತೆ ಮಾತುಕತೆ ನಡೆಸಿದರು. ಆಟೋಚಾಲಕರ ಮೇಲೆ ಸುಖಾಸುಮ್ಮನೆ ದಂಡ ವಿಧಿಸಬಾರದು ಅಂತ ಪೊಲೀಸರಿಗೆ ಸೂಚನೆ ನೀಡಿದ ಪರಮೇಶ್ವರ್ ಬಸ್ ನಿಲ್ದಾಣ ಬಳಿಯ ಆಟೋ ಸ್ಟ್ಯಾಂಡ್ ಅನ್ನು ವಿಸ್ತರಿಸುವ ಬಗ್ಗೆ ಯೋಚಿಸುವುದಾಗಿ ಹೇಳಿದರು.
ತುಮಕೂರು, ಜುಲೈ 14: ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಸಿದ್ದಾರ್ಥ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರದಿದ್ದರೆ ಮತ್ತು ರಾಜಕಾರಣಿಯಾಗಿರದಿದ್ದರೆ ನಿಸ್ಸಂದೇಹವಾಗಿ ಹೋಟೆಲ್ ಉದ್ಯಾಮಿಯಾಗಿರುತ್ತಿದ್ದರು ಎಂದು ವಿಡಿಯೋ ನೋಡಿದವರಿಗೆ ಅನಿಸಬಹುದು. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ಸಸ್ಯಾಹಾರಿ ಉಪಹಾರ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿ ಹೋಟೆಲ್ ಮಾಲೀಕ ಮತ್ತು ಮ್ಯಾನೇಜರೊಂದಿಗೆ ಆತ್ಮೀಯವಾಗಿ ಮಾತಾಡಿದ ಬಳಿಕ ಅವರು ತಿಂಡಿ ತಿನ್ನಲು ಬಂದ ಗ್ರಾಹಕರಲ್ಲಿ ಕೆಲವರಿಗೆ ತಾವೇ ತಿಂಡಿಗಳನ್ನು ತಟ್ಟೆಗೆ ಹಾಕಿಕೊಟ್ಟರು. ರಾಜ್ಯದ ಗೃಹ ಸಚಿವನಿಂದ ಸರ್ವ್ ಮಾಡಿಸಿಕೊಂಡ ಗ್ರಾಹಕರೇ ಅದೃಷ್ಟವಂತರು!
ಇದನ್ನೂ ಓದಿ: ನಮ್ಮತ್ರ ದುಡ್ಡಿಲ್ಲ, ಸಿದ್ದರಾಮಣ್ಣನತ್ರ ದುಡ್ಡಿಲ್ಲ: ಗೃಹ ಸಚಿವ ಪರಮೇಶ್ವರ್ ಶಾಕಿಂಗ್ ಹೇಳಿಕೆ, ವಿಡಿಯೋ ನೋಡಿ
ವಿಡಿಯೋ ಸುದ್ದಿಗಳಿಗಾಗು ಕ್ಲಿಕ್ ಮಾಡಿ