ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು ಮತ್ತು ಕಳಸವಳ್ಳಿ ನಡುವೆ ನಿರ್ಮಿಸಲಾದ 430 ಕೋಟಿ ರೂ. ವೆಚ್ಚದ ಹೊಸ ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದಾರೆ. ಇದರಿಂದ ಈ ಪ್ರದೇಶದ ಜನರಿಗೆ ದಶಕಗಳ ಬವಣೆ ಕೊನೆಗೊಂಡಿದೆ. 100 ಕಿ.ಮೀ. ಸುತ್ತುವ ದೂರ ಈಗ ಅರ್ಧಕ್ಕೆ ಇಳಿದಿದೆ. ಏಳು ವರ್ಷಗಳಲ್ಲಿ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ.
ಶಿವಮೊಗ್ಗ, ಜುಲೈ 14: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ನಿರ್ಮಾಣ ಮಾಡಲಾಗಿರುವ ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು. ಶರಾವತಿ ಹಿನ್ನೀರ ಪ್ರದೇಶದ ಜನರ ಹಲವು ದಶಕಗಳ ಬವಣೆ ತಪ್ಪಿದೆ. ಸಾಗರದಿಂದ ತಮರಿ ಅಥವಾ ಸಿಗಂದೂರಿಗೆ ತೆರಳು ರಸ್ತೆ ಮಾರ್ಗವಾಗಿ 100 ಕಿಮೀ ಸುತ್ತಿಬಳಸಿ ಹೋಗಬೇಕಿತ್ತು. ಇಲ್ಲವೇ ಲಾಂಚ್ನಲ್ಲಿ ತೆರಳಬೇಕಿತ್ತು. ಹೊಸ ಸೇತುವೆಯಿಂದ ಅಂತರ ಅರ್ಧದಷ್ಟು ತಗ್ಗಿದೆ. ಸೇತುವೆ ಅಂದಾಜು 430 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಸೇತುವೆ ಕಾಮಗಾರಿ ಕೇವಲ ಏಳು ವರ್ಷಗಳಲ್ಲಿ ಪೂರ್ಣಗೊಂಡಿದೆ.
ಇದನ್ನೂ ನೋಡಿ: ಸಿಂಗಾರಗೊಂಡು ಕಂಗೊಳಿಸುತ್ತಿದೆ ಸಿಗಂದೂರು ಸೇತುವೆ, ವಿಡಿಯೋ ಇಲ್ಲಿದೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

