AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sigandur Bridge: ಸಿಂಗಾರಗೊಂಡು ಕಂಗೊಳಿಸುತ್ತಿದೆ ಸಿಗಂದೂರು ಸೇತುವೆ, ವಿಡಿಯೋ ಇಲ್ಲಿದೆ

Sigandur Bridge: ಸಿಂಗಾರಗೊಂಡು ಕಂಗೊಳಿಸುತ್ತಿದೆ ಸಿಗಂದೂರು ಸೇತುವೆ, ವಿಡಿಯೋ ಇಲ್ಲಿದೆ

Ganapathi Sharma
|

Updated on: Jul 14, 2025 | 9:13 AM

Share

ಕರ್ನಾಟಕದ ಅತೀ ದೊಡ್ಡ ಕೇಬಲ್‌ ಸೇತುವೆಯಾಗಿರುವ ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆಯು ಇಂದು ಲೋಕಾರ್ಪಣೆಯಾಗುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇತುವೆ ಉದ್ಘಾಟಿಸುತ್ತಿದ್ದು, ಶರಾವತಿ ಮಡಿಲ ಮಕ್ಕಳ 6 ದಶಕಗಳ ಕನಸು ನನಸಾಗುತ್ತಿದೆ. ಲೋಕಾರ್ಪಣೆಗಾಗಿ ಸಿಂಗಾರಗೊಂಡು ನಿಂತಿರುವ ಸಿಗಂದೂರು ಸೇತುವೆಯ ವಿಡಿಯೋ ಇಲ್ಲಿದೆ.

ಶಿವಮೊಗ್ಗ, ಜುಲೈ 14: ಶಿವಮೊಗ್ಗ ಜನರ ಬಹು ವರ್ಷಗಳ ಕನಸಾಗಿರುವ ಸಿಗಂದೂರು ಸೇತುವೆ ಇಂದು ಲೋಕಾರ್ಪಣೆಯಾಗುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇತುವೆಯನ್ನು ಇಂದು ಲೋಕಾರ್ಪಣೆಗೊಳಿಸುತ್ತಿದ್ದು, ಹೀಗಾಗಿ ಸೇತುವೆಯನ್ನು ಅಲಂಕೃತಗೊಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಇದಾಗಿದ್ದು, ದೇಶದ ಅತಿದೊಡ್ಡ ಕೇಬಲ್ ಆಧಾರಿತ ಬ್ರಿಡ್ಜ್​ಗಳಲ್ಲಿ ಒಂದಾಗಿದೆ. ಸೇತುವೆಯ ವಿಡಿಯೋ ನೋಟ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ