Video: ಕೆನಡಾದ ರಸ್ತೆ ಪಕ್ಕದಲ್ಲಿ ನಿಂತು ಕಸ ಎಸೆದ್ರಾ ಭಾರತ ಮೂಲದ ದಂಪತಿ?
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಭಾರತ ಮೂಲದ ದಂಪತಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ ಅವರು ಎಸೆದಿದ್ದು ಕಸವೇ ಅಥವಾ ಪ್ರಾಣಿ, ಪಕ್ಷಿಗಳಿಗೆ ಆಹಾರವನ್ನು ನೀಡಿದ್ದರೇ ಎನ್ನುವ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋವನ್ನು ನೋಡಿದ ಕೆಲವರು ಭಾರತವನ್ನು ಮಾತನಾಡಿದ್ದು, ಅವರು ಭಾರತವನ್ನು ನಾಶಮಾಡಿದ್ದಾರೆ, ಕೆನಡಾವನ್ನು ನಾಶ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ. ವಿ
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಭಾರತ ಮೂಲದ ದಂಪತಿ ಕಸ ಎಸೆದಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ ಅವರು ಎಸೆದಿದ್ದು ಕಸವೇ ಅಥವಾ ಪ್ರಾಣಿ, ಪಕ್ಷಿಗಳಿಗೆ ಆಹಾರವನ್ನು ನೀಡಿದ್ದಾರೆಯೇ ಎನ್ನುವ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಈ ವಿಡಿಯೋವನ್ನು ನೋಡಿದ ಕೆಲವರು ಆಕ್ರೋಶ ಹೊರಹಾಕಿದ್ದು , ಅವರು ಭಾರತವನ್ನು ನಾಶಮಾಡಿದ್ದಾರೆ, ಕೆನಡಾವನ್ನು ನಾಶ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ . ವಿಡಿಯೋದಲ್ಲಿ ಏನಿದೆ? ದಂಪತಿ ಕಾರಿನಲ್ಲಿ ಬಂದಿದ್ದು, ವಸ್ತುಗಳು ತುಂಬಿದ್ದ ಒಂದೊಂದೇ ಪ್ಲಾಸ್ಟಿಕ್ ಬ್ಯಾಗ್ ಅನ್ನು ಇಳಿಸಿ ರಸ್ತೆ ಪಕ್ಕಕ್ಕೆ ಎಸೆಯುತ್ತಿರುವ ವಿಡಿಯೋ ಇದಾಗಿದೆ. ಇವರು ಭಾರತದ ಮರ್ಯಾದೆ ತೆಗೆದಿದ್ದಾರೆ.
ಯಾವುದೇ ಕಾರಣಕ್ಕೂ ಇಂಥಾ ಕೆಲಸವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಒಬ್ಬರು ಹೇಳಿದ್ದರೆ, ಕೆಲವರು ಅವರು ಪ್ರಾಣಿಗಳಿಗೆ ಆಹಾರ ನೀಡುತ್ತಿರಬಹುದು. ಬ್ಯಾಗ್ನಲ್ಲಿ ಬ್ರೆಡ್ ಅಥವಾ ಇನ್ನಿತರೆ ಆಹಾರ ಪದಾರ್ಥಗಳಿರಬಹುದು. ಏಕೆಂದರೆ ಅವರು ಪ್ಲಾಸ್ಟಿಕ್ ಕವರ್ ಅನ್ನು ಎಸೆಯಲಿಲ್ಲ. ಅದರಲ್ಲಿದ್ದ ವಸ್ತುಗಳನ್ನು ಮಾತ್ರ ಎಸೆದಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

