ಮುಖ್ಯಮಂತ್ರಿಯವರಿಂದ ಸನ್ಮಾನಕ್ಕೊಳಗಾಗಿದ್ದು ಪೂರ್ವಜನ್ಮದ ಪುಣ್ಯ: 500ನೇ ಕೋಟಿ ಟಿಕೆಟ್ ಪಡೆದ ಮಹಿಳೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 500ನೇ ಕೋಟಿ ಟಿಕೆಟ್ ಪಡೆದು ಅವರಿಂದ ಸನ್ಮಾನವನ್ನೂ ಮಾಡಿಸಿಕೊಂಡ ವಿಅರ್ ಲತಾ ಹೆಸರಿನ ಪ್ರಯಾಣಿಕರು, ಇಷ್ಟೆಲ್ಲ ಆದೀತು ಅಂತ ಅಂದುಕೊಂಡಿರಲಿಲ್ಲ, ಮುಖ್ಯಮಂತ್ರಿಯವರಿಂದ ಸನ್ಮಾನ ಮಾಡಿಸಿಕೊಂಡಿದ್ದು ತನ್ನ ಅದೃಷ್ಟ ಮತ್ತು ಯಾವುದೋ ಜನ್ಮದ ಪುಣ್ಯ ಅಂತಲೇ ಹೇಳಬೇಕು ಎಂದರು. ಸಿಎಂ ತನಗೆ ವಿತರಿಸಿದ ಟಿಕೆಟ್ ಅನ್ನು ಅವರು ಹೆಮ್ಮೆ ಮತ್ತು ಖುಷಿಯಿಂದ ಪ್ರದರ್ಶಿಸಿದರು.
ಬೆಂಗಳೂರು, ಜುಲೈ 14: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ, ಇಂದು ಬಿಎಂಟಿಸಿ ಬಸ್ಸೊಂದರಲ್ಲಿ ಶಕ್ತಿ ಯೋಜನೆಯ 500 ನೇ ಕೋಟಿಯ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರೊಂದಿಗಿದ್ದರು. ಚಲಿಸುವ ಬಸ್ಸಲ್ಲೇ ಮಾಧ್ಯಮಗಳೊಂದಿಗೆ ಮಾತಾಡಿದ ಸೌಮ್ಯ, ಮಹಿಳೆಯರು 500 ಕೋಟಿ ಸಲ ಬಸ್ಸುಗಳಲ್ಲಿ ಪ್ರಯಾಣಿಸಿರುವುದು ಹೆಮ್ಮೆಯ ಸಂಗತಿ, ಮಹಿಳೆಯರು ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕು ನಡೆಸಲಿ ಎಂಬ ಉದ್ದೇಶದಿಂದ ತಮ್ಮ ಸರ್ಕಾರ ಶಕ್ತಿಯೋಜನೆಯನ್ನು ಜಾರಿಗೊಳಿಸಿದೆ, ವಿಜಯಪುರದ ಮಹಿಳೆಯೊಬ್ಬರು ರೊಟ್ಟಿಗಳನ್ನು ಮಾಡಿಕೊಂಡು ಇಲ್ಲಿಗೆ ತಂದು ಮಾರಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ, ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಯೋಜನೆಯನ್ನು ಆರಂಭಿಸಿರುವ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದರು.
ಇದನ್ನೂ ಓದಿ: ಶಕ್ತಿ ಯೋಜನೆಯಡಿ 500 ಕೋಟಿ ಪ್ರಯಾಣ: ಟಿಕೆಟ್ ವಿತರಿಸಿದ ಸಿಎಂ ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗು ಕ್ಲಿಕ್ ಮಾಡಿ
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
