B Saroja Devi Passes Away; ಈ ವಯಸ್ಸಲ್ಲೂ ಎಂಥ ಚೆಲುವಿನ ಒಡತಿ ಸರೋಜಮ್ಮ! ಮಾಲಾಶ್ರೀ
ಅವರ ಜೊತೆ ಕಳೆದ ಒಂದೊಂದು ಕ್ಷಣವೂ ಕಲಿಕೆಯ ಅನುಭವದಂತಿರುತಿತ್ತು, ಲೊಕೇಶನ್ ಬಂದಾಗ ಉತ್ಸಾಹದ ಬಗ್ಗೆಯಾಗಿರುತ್ತಿದ್ದರು, ಈ ವಯಸ್ಸಲ್ಲೂ ಅದೆಂಥ ಚೆಲುವೆ ಅವರು! ನಿಜ ಅರ್ಥದಲ್ಲಿ ಅವರು ಸಿನಿಮಾ ಕ್ಷೇತ್ರದ ಸೂಪರ್ ಸ್ಟಾರ್ ಆಗಿದ್ದರು, ಅವರು ಮಾಡಿಕೊಳ್ಳುತ್ತಿದ್ದ ಮೇಕಪ್, ಉಡುತ್ತಿದ್ದ ಸೀರೆ, ಎಲ್ಲ ಒಂದಕ್ಕಿಂತ ಒಂದು ಚಂದ ಎಂದು ಮಾಲಾಶ್ರೀ ಹೇಳಿದರು.
ಬೆಂಗಳೂರು, ಜುಲೈ 14: ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ದಕ್ಷಿಣ ಭಾರತದ ಸಿನಿಮಾ ರಂಗದ ಜೊತೆ ಬಾಲಿವುಡ್ನಲ್ಲೂ ಅತ್ಯಂತ ಜನಪ್ರಿಯ ನಟಿ ಎನಿಸಿಕೊಂಡಿದ್ದ ಬಿ ಸರೋಜಾದೇವಿಯವರ ನಿಧನಕ್ಕೆ ಹಿರಿಯ ನಟಿ ಮಾಲಾಶ್ರೀ ಅತ್ಯಂತ ಭಾವುಕರಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಜೊತೆ ಸ್ಕ್ರೀನ್ ಹಂಚಿಕೊಳ್ಳುವ ಸೌಭಾಗ್ಯವಂತೂ ತನ್ನದಾಗಲಿಲ್ಲ, ಆ ಕೊರಗು ಸದಾ ಕಾಡುತ್ತದೆ, ಗೌಡತಿಯಾಗಿದ್ದ ಅವರ ತಾನು ಗೌಡತಿಯಾದ ಬಗ್ಗೆ ಛೇಡಿಸುತ್ತಿದ್ದರು ಎಂದು ಮಾಲಾಶ್ರೀ ಹೇಳಿದರು. ಬದುಕಿನಲ್ಲಿ ಭಾರೀ ಶಿಸ್ತುಗಾತಿಯಾಗಿದ್ದ ಸರೋಜಮ್ಮ, ಮನೆಗೆ ಹೋದವರಿಗೆ ಮಾಡುತ್ತಿದ್ದ ಅತಿಥಿ ಸತ್ಕಾರವನ್ನು ಮಾತುಗಳಲ್ಲಿ ಹೇಳಲಾಗದು, ಹಣವನ್ನು ಹೇಗೆ ಉಪಯೋಗಿಸಬೇಕು, ಹೇಗೆ ಉಳಿತಾಯ ಮಾಡಬೇಕು ಅಂತೆಲ್ಲ ಸಲಹೆಗಳನ್ನು ನೀಡುತ್ತಿದ್ದರು ಎಂದು ಮಾಲಾಶ್ರೀ ಹೇಳಿದರು.
ಇದನ್ನೂ ಓದಿ: ‘ಪುನೀತ್ ನನ್ನ ಮಗು ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದಿದ್ದರು ಬಿ. ಸರೋಜಾದೇವಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

