ಈರುಳ್ಳಿ ಬೆಲೆ ಹೆಚ್ಚಳ; ಕೇಂದ್ರ ಸರ್ಕಾರದಿಂದ ಸಬ್ಸಿಡಿ ಮೂಲಕ ಈರುಳ್ಳಿ ವಿತರಣೆ; ಎಲ್ಲಿ ಗೊತ್ತಾ?

ರಾಜ್ಯದಲ್ಲಿ ಒಂದು ಕಡೆ ಜನ ಗ್ಯಾರಂಟಿ ಯೋಜನೆ ಲಾಭ ಪಡೆದ್ರೆ, ಮತ್ತೊಂದು ಕಡೆ ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಈ ಮದ್ಯೆ ಇಲ್ಲೊಂದು ಕಡೆ ಸಬ್ಸಿಡಿಯಲ್ಲಿ ಈರುಳ್ಳಿ ವಿತರಣೆ ಮಾಡಲಾಗುತ್ತಿದೆ. ಹೌದು, ಹುಬ್ಬಳ್ಳಿಯಲ್ಲಿ ಈ ಕಾರ್ಯ ನಡೆಯುತ್ತಿದ್ದು, ಈರುಳ್ಳಿ ಬಂದ ತಕ್ಷಣ ಜನರು ಮುಗಿಬೀಳುತ್ತಿದ್ದಾರೆ. ಏನಿದು ಈರುಳ್ಳಿ ಸಬ್ಸಡಿ ಕಥೆ ಅಂತೀರಾ? ಇಲ್ಲಿದೆ ನೋಡಿ.

ಈರುಳ್ಳಿ ಬೆಲೆ ಹೆಚ್ಚಳ; ಕೇಂದ್ರ ಸರ್ಕಾರದಿಂದ ಸಬ್ಸಿಡಿ ಮೂಲಕ ಈರುಳ್ಳಿ ವಿತರಣೆ; ಎಲ್ಲಿ ಗೊತ್ತಾ?
ಹುಬ್ಬಳ್ಳಿಯಲ್ಲಿ ಅರ್ಧಬೆಲೆಗೆ ಈರುಳ್ಳಿ ವಿತರಿಸಿದ ಕೇಂದ್ರ ಸರ್ಕಾರ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 10, 2023 | 3:50 PM

ಹುಬ್ಬಳ್ಳಿ, ನ.10: ಕಳೆದ ಕೆಲ ತಿಂಗಳ ಹಿಂದೆ ಕೆಂಪು ಸುಂದರಿ ಟೊಮೆಟೋ ಶತಕ ಬಾರಿಸಿದ್ರೆ,ಇದೀಗ ಈರುಳ್ಳಿ ಶತಕದತ್ತ ದಾಪುಗಾಲು ಹಾಕಿದೆ. ಈ ಹಿನ್ನಲೆ ವಾಣಿಜ್ಯ ನಗರಿ ಹುಬ್ಬಳ್ಳಿ(Hubballi)ಯಲ್ಲಿ ಸಬ್ಸಿಡಿ ಮೂಲಕ ಈರುಳ್ಳಿ(Onion) ವಿತರಣೆ ಮಾಡಲಾಗುತ್ತಿದೆ. ಹೌದು, ರಾಜ್ಯದಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾದ ಹಿನ್ನಲೆ ಕೇಂದ್ರ ಸರ್ಕಾರವು ಎರಡು ಸಂಸ್ಥೆಗಳಾದ NCCF ಹಾಗೂ NAAFD ಜೊತೆಗೆ ಸೇರಿ ಜನರಿಗೆ ಅನಕೂಲ ಆಗಲಿ ಎನ್ನುವ ಕಾರಣಕ್ಕೆ ಈರುಳ್ಳಿಯನ್ನು ಸಬ್ಸಿಡಿ ಮೂಲಕ ವಿತರಣೆ ಮಾಡುತ್ತಿದೆ. ಮಾರುಕಟ್ಟೆಯಲ್ಲಿ 70 ರಿಂದ 80 ರೂಪಾಯಿ ಈರುಳ್ಳಿ ಬೆಲೆ ಇದೆ. ಆದ್ರೆ, ಕೇಂದ್ರ ಸರ್ಕಾರ 50 ರೂಪಾಯಿಗೆ ಎರಡು ಕೆಜಿ ಈರುಳ್ಳಿಯನ್ನು ಕೊಡುತ್ತಿದೆ.

ವಿವಿಧ ಪ್ರದೇಶಕ್ಕೆ ತೆರಳಿ ಈರುಳ್ಳಿ ಮಾರಾಟ

ವಾಹನದ ಮೂಲಕ  ನಗರದ ವಿವಿಧ ಪ್ರದೇಶಕ್ಕೆ ತೆರಳಿ, ಸಬ್ಸಿಡಿ ಆಧಾರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಇಂದು ಹುಬ್ಬಳ್ಳಿಯ ನವನಗರದಲ್ಲಿ ಈರುಳ್ಳಿ ಮಾರಾಟ ಮಾಡಲು‌ ಸೂಚನೆ ನೀಡಲಾಗಿತ್ತು. ಅದರಂತೆ ಈರುಳ್ಳಿ ವಾಹನ ಬರುತ್ತಲೇ ಜನ‌ರು ಈರುಳ್ಳಿಗೆ ಮುಗಿಬಿದ್ದಿದ್ದು, ಸರತಿ ಸಾಲಿನಲ್ಲಿ ನಿಂತು ಜನ 50 ರೂಪಾಯಿ ಕೊಟ್ಟು ಎರಡು ಕೆಜಿ ಈರುಳ್ಳಿ ಪಡೆದುಕೊಂಡರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಭಾವ ತಗ್ಗಿಸಲು ಕೇಂದ್ರ ಸರ್ಕಾರ ಸಬ್ಸಿಡಿ ಮೂಲಕ ಈರುಳ್ಳಿ ವಿತರಣೆಗೆ ಮುಂದಾಗಿದೆ. ಲೋಕಸಭೆ ಚುನಾವಣೆ ಹೊತ್ತಿಗೆ ಬೆಲೆ ಏರಿಕೆ ಬಿಸಿಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದೆ.

ಇದನ್ನೂ ಓದಿ:ಗಗನಕ್ಕೇರಿದ ಈರುಳ್ಳಿ ಬೆಲೆ, ರೈತರಿಗೆ ದೊರೆಯುತ್ತಿಲ್ಲ ಪ್ರಯೋಜನ: ಮಧ್ಯವರ್ತಿಗಳು, ವ್ಯಾಪಾರಿಗಳಿಗಷ್ಟೇ ಲಾಭ

5 ವಾಹನಗಳ ಮೂಲಕ ಈರುಳ್ಳಿ ವಿತರಣೆ

ಧಾರವಾಡ ಜಿಲ್ಲೆಯಲ್ಲಿ ಒಟ್ಟು ಐದು ವಾಹನಗಳ ಮೂಲಕ ಈರುಳ್ಳಿ ವಿತರಣೆ ಮಾಡಲಾಗುತ್ತಿದೆ. ಇನ್ನುಇದರ ಟೆಂಡರ್​​ ಹುಬ್ಬಳ್ಳಿಯ ಎಮ್ ಎಮ್ ಬ್ಯಾಹಟ್ಟಿ ಅವರಿಗೆ ಆಗಿದ್ದು, ಅವರಿಗೆ ಔಟ್ ಲೆಟ್ ಹಾಗೂ ವಾಹನದಲ್ಲಿ ಈರುಳ್ಳಿ ಮಾರಾಟ ಮಾಡಲು ಸೂಚಿಸಿದೆ. ವಾಹನದಲ್ಲಿ ಕೇಂದ್ರ ಸರ್ಕಾರದ ಬ್ಯಾನರ್ ಕೂಡಾ ಹಾಕಲಾಗಿದೆ. ಡಿಪಾರ್ಟಮೆಂಟ್ ಆಪ್ ಕಂಜ್ಯೂಮರ್ ಅಫೇರ್ಸ್, Govt of India concessional Rate by the onion sale ಎಂದು ಬರೆಯಲಾಗಿದೆ.

ಎರಡು ಕೆಜಿ ಈರುಳ್ಳಿಗೆ 50 ರೂ

ಸಂಸ್ಥೆಗಳು ತಿಳಿಸಿದ ಜಾಗದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದು, ದಿನವೊಂದಕ್ಕೆ ಹೆಚ್ಚು ಕಡಿಮೆ ಐದು ಟನ್ ಈರುಳ್ಳಿ ಮಾರಾಟವಾಗುತ್ತಿದ್ದು, ಒಂದು ಕೆಜಿಗೆ 25 ರೂಪಾಯಿಯಂತೆ ಎರಡು ಕೆಜಿ ಪಾಕೆಟ್​ಗೆ 50 ರೂಪಾಯಿ ಪಡೆದು ಈರುಳ್ಳಿ ವಿತರಣೆ ಮಾಡಲಾಗುತ್ತಿದೆ. ವಾಹನ ಬರುತ್ತಲೇ ಗ್ರಾಹಕರು‌ ಮುಗಿಬೀಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ 80 ರೂಪಾಯಿ ಇರುವ ಈರುಳ್ಳಿ ಕೇವಲ 25 ರೂಪಾಯಿಗೆ ಸಿಗುತ್ತಿರುವುದರಿಂದ ಜನ ಖುಷಿಯಾಗಿದ್ದಾರೆ. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗೆ ಸೆಡ್ಡು ಹೊಡೆಯಲು ಕೇಂದ್ರ ಸರ್ಕಾರ ಸಬ್ಸಡಿ ಮೂಲಕ ಈರುಳ್ಳಿ ವಿತರಣೆ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಟೊಮೆಟೊ ಬೆಲೆಗೆ ಕಂಗೆಟ್ಟಿದ ಜನರಿಗೆ, ಈರುಳ್ಳಿ ಕಣ್ಣೀರು ತರಸಿತ್ತು. ಆದ್ರೆ, ಇದೀಗ ಮನೆ ಬಾಗಿಲಲ್ಲಿ ಕಡಿಮೆ ಹಣಕ್ಕೆ ಕೇಂದ್ರ ಸರ್ಕಾರ ಈರುಳ್ಳಿ ವಿತರಣೆ ಮಾಡುತ್ತಿರುವುದು ಜನರಿಗೆ ತುಸು ನೆಮ್ಮದಿ ತರಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್