ಬೀದರ್: ಸಿನಿಮೀಯ ರೀತಿಯಲ್ಲಿ ಎಟಿಎಂ ದರೋಡೆ ಮಾಡಿದ್ದ ಗ್ಯಾಂಗ್​ ಅಂದರ್​; ಮೂವರು ಅರೆಸ್ಟ್, ನಾಲ್ವರು ಪರಾರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 13, 2024 | 6:38 PM

ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಬೀದರ್​, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಿನಿಮೀಯ ರೀತಿಯಲ್ಲಿ ಎಟಿಎಂ ಕಳ್ಳತನ ಮಾಡಿದ್ದ ಗ್ಯಾಂಗ್​ನ್ನು ಬೀದರ್​ ಪೊಲೀಸರು ಬಂಧಿಸಿದ್ದಾರೆ. ಗ್ಯಾಸ್ ಕಟರ್ ಬಳಸಿ ಎಟಿಎಂ ಕಳ್ಳತನ ಮಾಡುತ್ತಿದ್ದ ಇವರು, ಇದರಿಂದಲೇ ಬರೊಬ್ಬರಿ 1 ಕೋಟಿಗೂ ಅಧಿಕ ಹಣವನ್ನು ದರೋಡೆ ಮಾಡಿದ್ದರು.

ಬೀದರ್: ಸಿನಿಮೀಯ ರೀತಿಯಲ್ಲಿ ಎಟಿಎಂ ದರೋಡೆ ಮಾಡಿದ್ದ ಗ್ಯಾಂಗ್​ ಅಂದರ್​; ಮೂವರು ಅರೆಸ್ಟ್, ನಾಲ್ವರು ಪರಾರಿ
ಅಂತರ್ ರಾಜ್ಯ ಎಟಿಎಂ ಕಳ್ಳರ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸ್
Follow us on

ಬೀದರ್, ಫೆ.13: ಅಂತರ್ ರಾಜ್ಯ ಎಟಿಎಂ ಕಳ್ಳರನ್ನು ಬೀದರ್(Bidar) ಎಸ್ಪಿ ಚೆನ್ನಬಸವಣ್ಣ ಎಸ್.ಎಲ್. ಅವರ ಮಾರ್ಗದರ್ಶನದಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬೀದರ್ ಸೇರಿದಂತೆ  ಬೆಳಗಾವಿ, ವಿಜಯಪುರ, ಬೆಳೆಗಾವಿ ಹಾಗೂ ಮಹಾರಾಷ್ಟ್ರ ಸೇರಿದಂತೆ ಒಟ್ಟು 12 ಕಡೆಗಳಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂ ಕಳ್ಳತನ ಮಾಡಿದ್ದರು. ಇದರಿಂದ ಬರೊಬ್ಬರಿ 1 ಕೋಟಿಗೂ ಅಧಿಕ ಹಣವನ್ನು ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಭಾಗಿಯಾಗಿದ್ದು, ಅದರಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ನಾಲ್ವರು ಪರಾರಿಯಾಗಿದ್ದಾರೆ. ಶಾಹಿದ್ ಕಮಲಖಾನ್(45) ಅಲೀಂ ಅಕ್ಬರ್ ಖಾನ್ (26) ಇಲಿಯಾಸ್ ರೆಹಮಾನ್ ಬಂಧಿತ ಆರೋಪಿಗಳು.

ದೇವಸ್ಥಾನದಲ್ಲಿನ ಹುಂಡಿ ಹೊತ್ತಯ್ಯದ ಖದೀಮರು

ಬಳ್ಳಾರಿ: ಸಂಡೂರು ತಾಲೂಕಿನ ಡಿ.ಅಂತಾಪುರ ಗ್ರಾಮದ ತಾಯಮ್ಮ ದೇವಸ್ಥಾನದ ಕಾಣಿಕೆ ಹುಂಡಿಯನ್ನೇ ಖದೀಮರು ಹೊತ್ತಯ್ದಿದ್ದಾರೆ. ಹುಂಡಿಯಲ್ಲಿದ್ದ ಸುಮಾರು 2 ಲಕ್ಷ ರೂಪಾಯಿ ಹಣ ಕದ್ದು, ಬಳಿಕ ಹುಂಡಿಯನ್ನ ಊರಾಚೆ ಎಸೆದು ಹೋಗಿದ್ದಾರೆ. ಇನ್ನು ದೇವಸ್ಥಾನದ ಕಳ್ಳತನದಿಂದ ಜನ ಆತಂಕಗೊಂಡಿದ್ದು, ತೋರಣಗಲ್​​​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಎಸ್​ಬಿಐ ಎಟಿಎಂಗೆ ಬೆಂಕಿ ಹಾಕಿ 20 ಲಕ್ಷ ರೂ. ಕಳ್ಳತನ; ಸ್ಥಳಕ್ಕೆ ಎಸ್ಪಿ ಭೇಟಿ

ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಆವರಣಕ್ಕೆ ನುಗ್ಗಿದ ಪೋಲಿಸ್ ಜೀಪ್

ರಾಮನಗರ: ಬಸವನಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನದ ಆವರಣಕ್ಕೆ ಪೊಲೀಸ್ ವಾಹನ ನುಗ್ಗಿದ ಘಟನೆ ನಡೆದಿದೆ. ಕೋಲಾರ ಡಿವೈಎಸ್​ಪಿ ರಮೇಶ್ ಸಂಚರಿಸುತ್ತಿದ್ದ ಪೊಲೀಸ್ ಜೀಪ್ ಇದಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕ್ರೇನ್ ಮೂಲಕ ಜೀಪ್​ನ್ನು ತೆಗೆಯಲಾಗುತ್ತಿದೆ. ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:37 pm, Tue, 13 February 24