ಅನುಮತಿ ಪಡೆಯದೆ ಬೀದರ್​ನಲ್ಲಿ ನಾಯಿಕೊಡೆಗಳಂತೆ ಮೊಬೈಲ್ ಟವರ್​ಗಳು ನಿಂತಿವೆ!

| Updated By: sandhya thejappa

Updated on: Aug 21, 2021 | 5:40 PM

ಮೊಬೈಲ್ ಟವರ್​ಗಳು ಅಕ್ರಮವಾಗಿ ತಲೆ ಎತ್ತುವ ಮೂಲಕ ಮೊಬೈಲ್ ಟವರ್ ನಿರ್ಮಾಣ ದೊಡ್ಡ ಮಾಫಿಯಾದಂತೆ ಬೆಳೆದಿದೆ. ಪೈಪೋಟಿಯ ಮೇಲೆ ಟವರ್ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಟವರ್ ನಿರ್ಮಾಣಕ್ಕಿರುವ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗುತ್ತಿದೆ.

ಅನುಮತಿ ಪಡೆಯದೆ ಬೀದರ್​ನಲ್ಲಿ ನಾಯಿಕೊಡೆಗಳಂತೆ ಮೊಬೈಲ್ ಟವರ್​ಗಳು ನಿಂತಿವೆ!
ಬೀದರ್ ನಗರದಲ್ಲಿ ಮೊಬೈಲ್ ಟವರ್​ಗಳು
Follow us on

ಬೀದರ್: ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ಮೊಬೈಲ್ ಟವರ್​ಗಳು (Mobile Tower) ಎದ್ದು ನಿಂತಿವೆ. ಕೆಲವು ಮೊಬೈಲ್ ಕಂಪನಿಯವರು ಅನುಮತಿ ಪಡೆದರೆ ಇನ್ನೂ ಕೆಲವು ಕಂಪನಿ ಅನುಮತಿಯನ್ನೇ ಪಡೆದಿಲ್ಲ. ಜೊತೆಗೆ ಮೊಬೈಲ್ ಟವರ್​ಗಳು ಸರಕಾರದ ಕಾನೂನು ಮಾರ್ಗಸೂಚಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಟವರ್ ಅಳವಡಿಸಲಾಗಿದೆ. ಸರಕಾರದ ನಿಯಮಗಳನ್ನ ಗಾಳಿಗೆ ತೂರಿ ಟವರ್ ನಿರ್ಮಾಣ ಮಾಡಿದ್ದರ ಪರಿಣಾಮ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಬೀದರ್ ಜಿಲ್ಲೆಯಲ್ಲಿ ಅನಧಿಕೃತ ಹಾಗೂ ಅಕ್ರಮವಾಗಿ ಎಲ್ಲಿಂದರಲ್ಲಿ ಬೇಕಾಬಿಟ್ಟಿ ನಾಯಿಕೊಡೆಗಳಂತೆ ಆಕಾಶದೆತ್ತರಕ್ಕೆ ಮೊಬೈಲ್ ಟವರ್​ಗಳು ತಲೆ ಎತ್ತುತ್ತಿವೆ. ಸರಕಾರದ ಕಾನೂನು ನಿಯಮಾವಳಿಗಳನ್ನು ಅಕ್ಷರಶಃ ಪಾಲಿಸದೇ ಇರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಸಾಕಷ್ಟು ಪ್ರಾಣಿಸಂಕುಲ ಅವಸಾನದಂಚಿಗೆ ಸಾಗುತ್ತಿದೆ. ಅಲ್ಲದೇ ಇದರ ಜೊತೆಯಲ್ಲಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಐನೂರಕ್ಕಿಂತಲೂ ಹೆಚ್ಚು ಮೊಬೈಲ್ ಟವರ್​ಗಳಿದ್ದು, ಅದರಲ್ಲಿ ಶೇಕಡಾ 90ರಷ್ಟು ಮೊಬೈಲ್ ಟವರ್ ಅಳವಡಿಸಲು ಅನುಮತಿಯನ್ನೇ ಪಡೆದುಕೊಂಡಿಲ್ಲ.

ಪೈಪೋಟಿಯ ಮೇಲೆ ಹೆಚ್ಚುತ್ತಿವೆ
ಮೊಬೈಲ್ ಟವರ್​ಗಳು ಅಕ್ರಮವಾಗಿ ತಲೆ ಎತ್ತುವ ಮೂಲಕ ಮೊಬೈಲ್ ಟವರ್ ನಿರ್ಮಾಣ ದೊಡ್ಡ ಮಾಫಿಯಾದಂತೆ ಬೆಳೆದಿದೆ. ಪೈಪೋಟಿಯ ಮೇಲೆ ಟವರ್​ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಟವರ್ ನಿರ್ಮಾಣಕ್ಕಿರುವ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗುತ್ತಿದೆ. ಆದರೆ, ಅಕ್ರಮವಾಗಿ ಟವರ್​ಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಯಾರು ಕೇಳಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್ ಟವರ್ ನಿರ್ಮಿಸಬೇಕಾದರೆ, ಸ್ಥಳೀಯ ಸಂಸ್ಥೆಯಾದ ನಗರ ಸಭೆ, ಪುರಸಭೆ, ಅಗ್ನಿಶಾಮಕ ದಳ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ (ಎನ್ಒಸಿ) ಪಡೆಯುವುದು ಕಡ್ಡಾಯ. ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ಮೊಬೈಲ್ ಕಂಪೆನಿಗಳು ಟವರ್ ನಿರ್ಮಿಸಿಕೊಳ್ಳುತ್ತಿವೆ. ಇದೊಂದು ದೊಡ್ಡ ಮಾಫಿಯಾವಾಗಿದೆ. ಜೊತೆಗೆ ಹೀಗೆ ಅಕ್ರಮವಾಗಿ ಮೊಬೈಲ್ ಟವರ್ ಅಳವಡಿಸಿದ್ದರ ಪರಿಣಾಮವಾಗಿ ಸರಕಾರದ ಬೊಕ್ಕಸಕ್ಕೂ ಲಕ್ಷಾಂತರ ರೂಪಾಯಿ ಟ್ಯಾಕ್ಸ್ ವಂಚನೆಯಾಗುತ್ತಿದೆ ಅಂತ ಜಿಲ್ಲೆಯ ಜನರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಕೇವಲ ರಿಲಯನ್ಸ್ ಹಾಗೂ ಬಿಎಸ್ಎನ್ಎಲ್ ಕಂಪನಿಯವರು ಮಾತ್ರ ನಗರದಲ್ಲಿ ಅಳವಡಿಸಿರುವ ಟವರ್​ಗೆ ನಗರ ಸಭೆಯಿಂದ ಪರವಾನಿಗೆ ಪಡೆದುಕೊಂಡು ಸರಕಾರದ ಮಾರ್ಗಸೂಚಿಯನ್ವಯ ಟವರ್ ಅಳವಡಿಸಿದ್ದಾರೆ. ಇನ್ನೂಳಿದ ಮೊಬೈಲ್ ಟವರ್ ಕಂಪನಿಯವರು ನಗರ ಸಭೆಯಿಂದ ಅನುಮತಿಯನ್ನೇ ಪಡೆದುಕೊಳ್ಳದೆ ನಗರದ ಎಲ್ಲೆಂದರಲ್ಲಿ ಟವರ್ ನಿರ್ಮಾಣ ಮಾಡಿದ್ದು, ನಗರ ಸಭೆಗೆ ಲಕ್ಷಾಂತರ ರೂಪಾಯಿ ತೆರಿಗೆಯನ್ನ ವಂಚಿಸುತ್ತಿದ್ದಾರೆ. ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಮೊಬೈಲ್ ಟವರ್​ಗಳನ್ನು ಘೋಷಿಸಿಕೊಳ್ಳದ ಟೆಲಿಕಾಂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಧೈರ್ಯ ಮಾಡುತ್ತಿಲ್ಲ. ಇದರಿಂದ ಸರಕಾಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಸಿಗುತ್ತಿಲ್ಲ.

ಏರ್​ಟೆಲ್, ವೊಡಾಫೋನ್, ರಿಲಯನ್ಸ್, ಬಿಎಸ್ಎನ್ಎಲ್ ಸೇರಿದಂತೆ ಇತರೆ ಟೆಲಿಕಾಂ ಕಂಪನಿಗಳು ಬೀದರ್ ನಗರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮೊಬೈಲ್ ಟವರ್​ಗಳನ್ನು ಅಳವಡಿಸಿವೆ. ಇವುಗಳಲ್ಲಿ 20 ಟವರ್​ಗಳಿಂದ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. ಉಳಿದ ಟವರ್​ಗಳ ಬಗ್ಗೆ ನಗರ ಸಭೆಯ ಬಳಿ ನಿಖರ ಮಾಹಿತಿಯೇ ಇಲ್ಲ. ಈ ಬಗ್ಗೆ ನಗರ ಸಭೆಯ ಆಯುಕ್ತರಾದ ರವಿಂದ್ರ ಅಂಗಡಿರನ್ನು ಕೇಳಿದರೆ ನಮ್ಮಲ್ಲಿ 20 ಟವರ್ ಮಾತ್ರ ಅನುಮತಿ ಪಡೆದಿದ್ದು, ಅವುಗಳಿವೆ ಟವರ್ ಅಳವಡಿಸಲು ಅನುಮತಿ ಕೊಡಲಾಗಿದೆ. ಆದರೆ ಯಾರು ಕೂಡಾ ಅನುಮತಿ ಪಡೆಯದೆ ಮೊಬೈಲ್ ಟವರ್ ಅಳವಡಿಸಿಲ್ಲ ಎಂದು ನಗರದ ಸಭೆಯ ಆಯುಕ್ತರು ಉತ್ತರ ಕೊಡುತ್ತಿದ್ದಾರೆ. ಬೀದರ್ ನಗರದಲ್ಲಿ ನೂರಕ್ಕೂ ಹೆಚ್ಚು ಮೊಬೈಲ್ ಟವರ್ಗಳಿದ್ದು, ಇಲ್ಲಿನ ಟವರ್​ಗಳಿಗೆ ರಿಲಾಯನ್ಸ್​ನವರು ಮಾತ್ರ ನಗರಸಭೆಯ ಅನುಮತಿಯನ್ನ ಪಡೆದಿದ್ದಾರೆ.

ಮೊಬೈಲ್ ಟವರ್ ಶಾಲೆ, ಆಸ್ಪತ್ರೆಗಳಿಂದ 50 ಮೀಟರ್ ಒಳಗಿರುವಂತಿಲ್ಲ. ಆದರೆ ಬೀದರ್ ಜಿಲ್ಲೆಯಲ್ಲಿ ಮಾತ್ರ ಸರಕಾರದ ಈ ಆದೇಶಕ್ಕೆ ಬೆಲೆನೇ ಇಲ್ಲವಾದಂತಾಗಿದೆ. ಟವರ್ ಅಳವಡಿಕೆಗೆ ಅನುಮತಿಗೆ ಅರ್ಜಿ ಸಲ್ಲಿಸುವ ವೇಳೆ ಸ್ಥಳ ನಕ್ಷೆ, ನಿವೇಶನ ನಕ್ಷೆ, ಸ್ಟ್ರಕ್ಚರಲ್ ಸ್ಟೆಬಿಲಿಟಿ ಸರ್ಟಿಫಿಕೇಟ್, ಮಾಲಿಕತ್ವ ಅಥವಾ ಗುತ್ತಿಗೆ ದಾಖಲೆಗಳು, ಅಳವಡಿಕೆಯಾಗುವ ಟವರ್, ಫ್ರೀಕ್ವೆನ್ಸಿ, ತೂಕ (ಟನ್​ಗಳಲ್ಲಿ) ಮಾಹಿತಿ ಒದಗಿಸಬೇಕು. ಜತೆಗೆ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣ ಪತ್ರ, ಎಆರ್​ಎಐನಿಂದ ವಿತರಿಸಿರುವ ದಾಖಲೆ ಪತ್ರ ಒದಗಿಸಬೇಕು. ಈಗಾಗಲೇ ಅಳವಡಿಕೆಯಾಗಿರುವ ಟವರ್​ಗಳು ಇವೆಲ್ಲಾ ಮಾಹಿತಿಯೊಂದಿಗೆ ಮೂರು ತಿಂಗಳ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದರೂ ಇದ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ.

ಇದನ್ನೂ ಓದಿ

Namma Metro: ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ಆಗಸ್ಟ್ 29 ಮಧ್ಯಾಹ್ನ 12 ಗಂಟೆಯಿಂದ ಮೆಟ್ರೋ ಸಂಚಾರ ಆರಂಭ

ಡಿಸೆಂಬರ್​ ಅಧಿವೇಶನ ಸುವರ್ಣಸೌಧದಲ್ಲಿ ನಡೆಸುವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

(Companies are not taken permission to install some mobile towers in Bidar)