ಕಾದು ಸಾಕಾಗಿ ಕೊನೆಗೆ KSRTC ಬಸ್​ ಚಲಾಯಿಸಿಕೊಂಡು ಊರಿಗೆ ಹೋದ ಭೂಪ

| Updated By: Digi Tech Desk

Updated on: Jun 07, 2023 | 4:15 PM

ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಅನ್ನು ಕುಡಕನೋರ್ವ ಚಲಾಯಿಸಿಕೊಂಡು ಹತ್ತಿರ ತನ್ನ ಊರಿಗೆ ಹೋದ ಘಟನೆ ಬೀದರ್​ ಜಿಲ್ಲೆಯ ಔರಾದ್‌ನಲ್ಲಿ ನಡೆದಿದೆ.

ಕಾದು ಸಾಕಾಗಿ ಕೊನೆಗೆ KSRTC ಬಸ್​ ಚಲಾಯಿಸಿಕೊಂಡು ಊರಿಗೆ ಹೋದ ಭೂಪ
ಈಶಾನ್ಯ ಕರ್ನಾಟಕ ಸಾರಿಗೆ
Follow us on

ಬೀದರ್​: ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ (KKRTC)​​ ಅನ್ನು ಕುಡಕನೋರ್ವ ಚಲಾಯಿಸಿಕೊಂಡು ಹತ್ತಿರದ ತನ್ನ ಊರಿಗೆ ಹೋದ ಘಟನೆ ಬೀದರ್​ ಜಿಲ್ಲೆಯ ಔರಾದ್‌ನಲ್ಲಿ ನಡೆದಿದೆ. ಔರಾದ್ ತಾಲೂಕಿನ ಕಾರಂಜಿ ಗ್ರಾಮದ ನಿವಾಸಿ ಯಶಪ್ಪ ಸೂರ್ಯವಂಶಿ ಸೋಮವಾರ (ಜೂನ್ 5) ಕುಡಿದು ಬಸ್‌ಗಾಗಿ ಕಾಯುತ್ತಿದ್ದನು. ಎಷ್ಟೋತ್ತಾದರೂ ತನ್ನ ಊರಿನ ಬಸ್​ ಬರದ ಹಿನ್ನೆಲೆ ಅಲ್ಲೇ ನಿಲ್ಲಿಸಿದ್ದ ಕೆಕೆಆರ್‌ಟಿಸಿಯ ಮತ್ತೊಂದು ಬಸ್ ಅನ್ನು ಚಲಾಯಿಸಿಕೊಂಡು ತನ್ನ ಊರಿನತ್ತ ಹೊರಟಿದ್ದನು.

ದಾರಿ ಮಧ್ಯೆ ಔರಾದ್‌ನಲ್ಲಿ ಬಸ್​​ ಅನ್ನು ಡಿವೈಡರ್‌ಗೆ ಗುದ್ದಿಸಿದ್ದಾನೆ. ಅಪಘಾತದ ವೇಳೆ ಬಸ್‌ನಲ್ಲಿ ಪ್ರಯಾಣಿಕರಿದ್ದರು. ಪ್ರಯಾಣಿಕರು ಕಿರುಚಲು ಪ್ರಾರಂಭಿಸಿ, ರಸ್ತೆಯಲ್ಲಿದ್ದ ಜನರನ್ನು ಸಹಾಯಕ್ಕಾಗಿ ಕರೆದರು. ಇದನ್ನು ಕಂಡ ಸ್ಥಳೀಯರು ಘಟನಾ ಸ್ಥಳಕ್ಕೆ ದೌಡಾಯಿಸಿ ಯಶಪ್ಪನನ್ನು ಬಸ್‌ನಿಂದ ಕೆಳಗಿಳಿಸಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯಶಪ್ಪ ಸೂರ್ಯವಂಶಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:  ಕರ್ನಾಟಕದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಹಳೆ ಬಸ್ ಪಾಸ್ ಅವಧಿ ವಿಸ್ತರಿಸಿದ KSRTC

ಸೋಮವಾರ ಬೆಳಗ್ಗೆ ಯಶಪ್ಪ ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ತೆರಳಿದೆ. ಬಹಳ ಹೊತ್ತು ಕಾದರೂ ಬಸ್ ಬರಲಿಲ್ಲ. ಇದರಿಂದ ಸಿಟ್ಟು ಬಂದು ಹತ್ತಿರ ನಿಂತಿದ್ದ ಬಸ್​​ ಅನ್ನು ಚಲಾಯಿಸಿಕೊಂಡು ಹೋದೆ ಎಂದು ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Wed, 7 June 23