ಪ್ರತಿ ಟನ್ ಕಬ್ಬಿಗೆ 2,400 ರೂ. ನೀಡುವಂತೆ ಆಗ್ರಹಿಸಿ ಸಚಿವರ ಕಚೇರಿ ಎದುರು ರೈತರ ಧರಣಿ

| Updated By: ಆಯೇಷಾ ಬಾನು

Updated on: Aug 16, 2021 | 9:31 AM

ದೇಶದ ಬೆನ್ನೆಲುವುಗಳಾಗಿರುವ ರೈತರು ತಮಗೆ ಬೆಳೆಗಳಿಗೆ ಉತ್ತಮ ಬೆಲೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಪ್ರತಿ ಟನ್ ಕಬ್ಬಿಗೆ 2,400 ರೂ. ನೀಡುವಂತೆ ಆಗ್ರಹಿಸಿ ಬೀದರ್ನ ಅಂಬೇಡ್ಕರ್ ವೃತ್ತದ ಬಳಿಯಿರುವ ಸಚಿವ ಪ್ರಭು ಚೌಹಾನ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ.

ಪ್ರತಿ ಟನ್ ಕಬ್ಬಿಗೆ 2,400 ರೂ. ನೀಡುವಂತೆ ಆಗ್ರಹಿಸಿ ಸಚಿವರ ಕಚೇರಿ ಎದುರು ರೈತರ ಧರಣಿ
ಕಬ್ಬು
Follow us on

ಬೀದರ್‌: ಪ್ರತಿ ಟನ್ ಕಬ್ಬಿಗೆ 2,400 ರೂ. ನೀಡುವಂತೆ ಆಗ್ರಹಿಸಿ ಬೀದರ್‌ನಲ್ಲಿ ಇಂದಿನಿಂದ ರೈತರು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ. ರೈತ ಮುಖಂಡ ದಯಾನಂದ ಸ್ವಾಮಿ ನೇತೃತ್ವದಲ್ಲಿ ಸಚಿವ ಪ್ರಭು ಚೌಹಾಣ್ ಕಚೇರಿ ಎದುರು ರೈತರು ಧರಣಿ ನಡೆಸಲಿದ್ದಾರೆ.

ದೇಶದ ಬೆನ್ನೆಲುವುಗಳಾಗಿರುವ ರೈತರು ತಮಗೆ ಬೆಳೆಗಳಿಗೆ ಉತ್ತಮ ಬೆಲೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಪ್ರತಿ ಟನ್ ಕಬ್ಬಿಗೆ 2,400 ರೂ. ನೀಡುವಂತೆ ಆಗ್ರಹಿಸಿ ಬೀದರ್ನ ಅಂಬೇಡ್ಕರ್ ವೃತ್ತದ ಬಳಿಯಿರುವ ಸಚಿವ ಪ್ರಭು ಚೌಹಾನ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ.

ಸದ್ಯ ಈಗ ಪ್ರತಿ ಟನ್ ಕಬ್ಬಿಗೆ 1,950 ರೂಪಾಯಿ ಮಾತ್ರ ಕೊಡಲಾಗುತ್ತಿದೆ. ಹೀಗಾಗಿ ಈ ದರವನ್ನು ಹೆಚ್ಚಿಸಿ ಪ್ರತಿ ಟನ್ ಕಬ್ಬಿಗೆ‌ 2400 ರೂಪಾಯಿ ಕೊಡುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಹತ್ತಾರು ಬಾರಿ ರೈತರು ಕಾರ್ಖಾನೆಗಳ ಮಾಲೀಕರ ಜೊತೆ ಮೀಟಿಂಗ್ ನಡೆಸಿದ್ದಾರೆ. ಆದರೂ ರೈತರಿಗೆ 2,400 ರೂಪಾಯಿ ಕೊಡಲು ಕಾರ್ಖಾನೆಗಳು ನಿರಾಕರಿಸಿವೆ. ಹೀಗಾಗಿ ರೈತರು ಸಚಿವರ ಮೊರೆ ಹೋಗಿದ್ದು ಕಚೇರಿ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ತುಮಕೂರಿನಲ್ಲಿ ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಜಿಂಕೆ; ಸವಾರ ಸ್ಥಳದಲ್ಲೇ ಸಾವು