Anganwadi Goes High Tech: ಖಾಸಗಿ ಶಾಲೆಯನ್ನೂ ಮೀರಿಸುತ್ತೆ ಈ ಹೈಟೆಕ್ ಅಂಗನವಾಡಿಗಳು, ಇಲ್ಲಿಗೆ ಭೇಟಿ ಕೊಟ್ರೆ ಖಾಸಗಿ ಶಾಲೆ ಅನುಭವವಾಗುತ್ತೆ

| Updated By: ಆಯೇಷಾ ಬಾನು

Updated on: Jan 28, 2022 | 11:40 AM

ಸರ್ಕಾರಿ ಅಂಗನವಾಡಿ ಕೇಂದ್ರಗಳು ಅಂದ್ರೆ ಬಡ ಮಕ್ಕಳ ತಾಣ ಅನ್ನೋರಿಗೆ ಈ ಅಂಗನವಾಡಿ ಅಪವಾದ. ಪಿಡಿಓ ಪಂಚಾಯತ್ ಸದಸ್ಯರು, ಅಧ್ಯಕ್ಷರ ಕಾಳಜಿಯಿಂದ ಹೈಟೆಕ್ ಮಾದರಿ ಅಂಗನವಾಡಿ ಕೇಂದ್ರ ರೆಡಿಯಾಗಿದೆ.

Anganwadi Goes High Tech:  ಖಾಸಗಿ ಶಾಲೆಯನ್ನೂ ಮೀರಿಸುತ್ತೆ ಈ ಹೈಟೆಕ್ ಅಂಗನವಾಡಿಗಳು, ಇಲ್ಲಿಗೆ ಭೇಟಿ ಕೊಟ್ರೆ ಖಾಸಗಿ ಶಾಲೆ ಅನುಭವವಾಗುತ್ತೆ
ಖಾಸಗಿ ಶಾಲೆಯನ್ನೂ ಮೀರಿಸುತ್ತೆ ಈ ಹೈಟೆಕ್ ಅಂಗನವಾಡಿಗಳು, ಇಲ್ಲಿಗೆ ಭೇಟಿ ಕೊಟ್ರೆ ಖಾಸಗಿ ಶಾಲೆ ಅನುಭವವಾಗುತ್ತೆ
Follow us on

ಬೀದರ್: ಅಂಗನವಾಡಿ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ ಅನ್ನೋ ಆರೋಪ ಇದೆ. ಇದಕ್ಕೆ ಆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಮಾತ್ರ ಅಪವಾದ. ಇಲ್ಲಿನ ಅಂಗನವಾಡಿಯಲ್ಲಿ ಎಲ್ಲಾ ಸೌಲಭ್ಯಗಳಿವೆ. ನೀವೊಮ್ಮೆ ಇಲ್ಲಿಗೆ ಭೇಟಿ ಕೊಟ್ರೆ, ಖಾಸಗಿ ಶಾಲೆಗೆ ಭೇಟಿ ನೀಡಿದ ಅನುಭವವಾಗುತ್ತೆ.

ಬೀದರ್ ಜಿಲ್ಲೆ ಔರಾದ್ ತಾಲೂಕಿನ ಬಾಬಳಿ ಹಾಗೂ ಜಿರ್ಗಾ ಗ್ರಾಮದಲ್ಲಿರೋ ಅಂಗನವಾಡಿ ಖಾಸಗಿ ಶಾಲೆಯನ್ನೂ ಮೀರಿಸುವಂತಿದೆ. ಗೋಡೆ ಮೇಲೆ ಕನ್ನಡ ಅಕ್ಷರ ಮಾಲೆ… ಜೊತೆಗೆ ಇಂಗ್ಲಿಷ್ನ ಓಲೆ… ಗಮನ ಸೆಳೆಯೋ ರಾಜರಾಣಿ ಚಿತ್ರ… ಪ್ರಾಣಿ ಪಕ್ಷಿಗಳು ಗೊಂಬೆಗಳು ಮಕ್ಕಳನ್ನ ಆಕರ್ಷಿಸುವಂತಿವೆ. ಹೀಗೆ ಖಾಸಗಿ ಕ್ವಾನೆಂಟ್ನಂತೆ ಈ ಹೈಟೆಕ್ ಅಂಗನವಾಡಿ ಕಂಗೊಳಿಸ್ತಿದೆ.

ಸರ್ಕಾರಿ ಅಂಗನವಾಡಿ ಕೇಂದ್ರಗಳು ಅಂದ್ರೆ ಬಡ ಮಕ್ಕಳ ತಾಣ ಅನ್ನೋರಿಗೆ ಈ ಅಂಗನವಾಡಿ ಅಪವಾದ. ಪಿಡಿಓ ಪಂಚಾಯತ್ ಸದಸ್ಯರು, ಅಧ್ಯಕ್ಷರ ಕಾಳಜಿಯಿಂದ ಹೈಟೆಕ್ ಮಾದರಿ ಅಂಗನವಾಡಿ ಕೇಂದ್ರ ರೆಡಿಯಾಗಿದೆ. ಮಕ್ಕಳು ಖುಷಿ ಖುಷಿಯಿಂದಲೇ ಅಂಗನವಾಡಿಯತ್ತ ಹೆಜ್ಜೆ ಹಾಕ್ತಿದ್ದಾರೆ.

ಖಾಸಗಿ ಶಾಲೆಯನ್ನೂ ಮೀರಿಸುತ್ತೆ ಈ ಹೈಟೆಕ್ ಅಂಗನವಾಡಿಗಳು

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಮನಮುಟ್ಟುವಂತೆ ಚಾರ್ಟ್‌ಗಳನ್ನ ಬಿಡಿಸಲಾಗಿದೆ. ಜೊತೆಗೆ ಕೋಲಾಟ, ಗೀತೆಗಳನ್ನೂ ಹೇಳಿಕೊಡಲಾಗುತ್ತೆ. ಈ ಎರಡು ಅಂಗನವಾಡಿ ಕೇಂದ್ರಗಳಲ್ಲಿ 75 ಮಕ್ಕಳಿದ್ದು, ಪ್ರತಿ ಮಗುವಿಗೂ ಕೂರಲು ಕುರ್ಚಿ ಇದೆ. ಧುಪತಮಹಾಗಾಂವ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಅಂಗನವಾಡಿ ಕೇಂದ್ರಗಳು ಜಿಲ್ಲೆಯಲ್ಲಿಯೇ ಮಾದರಿ ಅಂಗವಾಡಿಗಳಾಗಿವೆ.

ಈ ಎರಡು ಅಂಗನವಾಡಿ ಕೇಂದ್ರಕ್ಕೆ ಸೂಪರ್ ಅಂಗನವಾಡಿ ಕೇಂದ್ರ ಅಂತಾ ಹೆಸರಿಡಲಾಗಿದ್ದು, ಸಂಪೂರ್ಣ ಸೋಲಾರ್ ಮಯವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಅಂಗವಾಡಿ ಕೇಂದ್ರದಲ್ಲೇ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಪ್ರತಿ ದಿನ ಮಕ್ಕಳಿಗೆ ರುಚಿ ಹಾಗೂ ಶುಚಿಯಾದ ಆಹಾರ ನೀಡುತ್ತೇವೆ. ಫಿಲ್ಟರ್‌ನಿಂದ ಶುದ್ಧ ಕುಡಿವ ನೀರು, ನಿಯಮಿತ ವೇಳೆಯಲ್ಲಿ ಹಾಲು, ಆಹಾರ ವಿತರಿಸಲಾಗ್ತಿದ್ದು, ಪಿಡಿಓ ಅವರ ಶ್ರಮವೇ ಕಾರಣ ಎನ್ನುತ್ತಾರೆ ಗ್ರಾಮಸ್ಥರು.

ಒಟ್ನಲ್ಲಿ ಅಂಗನವಾಡಿ ಕೇಂದ್ರಗಳು ಅಂದ್ರೆ ಸಾಕು ಜನ ಮೂಗು ಮುರಿಯುತ್ತಿದ್ರು. ಆದ್ರೀಗ, ಇಂಥಾ ಹೈಟೆಕ್ ಅಂಗನವಾಡಿ ಕೇಂದ್ರ ಕಂಡು ನಾಮುಂದು ತಾಮುಂದು ಅಂತಾ ಮಕ್ಕಳನ್ನ ಸೇರಿಸೋಕೆ ಓಡೋಡಿ ಬರ್ತಿದ್ದಾರೆ. ರಾಜ್ಯದ ಎಲ್ಲಾ ಅಂಗನವಾಡಿಗಳೂ ಇದೇ ರೀತಿ ಆದ್ರೆ, ಖಾಸಗಿ ಕಾನ್ವೆಂಟ್ಗಳಿಗೆ ಲಕ್ಷ ಲಕ್ಷ ಫೀಸ್ ಕೊಟ್ಟೋದು ತಪ್ಪುತ್ತೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಹೈಟೆಕ್ ಅಂಗನವಾಡಿ

ಇದನ್ನೂ ಓದಿ: ಬಳ್ಳಾರಿ: ಜಿಲ್ಲೆಯಾದ್ಯಂತ ಅಂಗನವಾಡಿ, ನರ್ಸರಿ, ಪ್ರಿ ನರ್ಸರಿ ಬಂದ್; ಜಿಂದಾಲ್ ಸುತ್ತಮುತ್ತ 1-8ನೇ ತರಗತಿಗೆ ರಜೆ