ಮನೆ ಮುಂದೆ ಆಟವಾಡ್ತಿದ್ದ ಮಗು ಅಪಹರಣ; ಮೂರೇ ದಿನದಲ್ಲಿ ಪತ್ತೆ ಹಚ್ಚಿದ ಬೀದರ್​ ಪೊಲೀಸ್

| Updated By: ಕಿರಣ್ ಹನುಮಂತ್​ ಮಾದಾರ್

Updated on: May 07, 2024 | 6:46 PM

ಮೇ 4 ರಂದು ಬೀದರ್​ನ ಓಲ್ಡ್ ಸಿಟಿಯ ನಯಾಕಮಾನ್​ನಲ್ಲಿ ಮನೆಯ‌ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಅರವಿಂದ್ ಎಂಬ ಮಗು‌ವನ್ನು ಮಹಿಳೆಯೊಬ್ಬಳು ಅಪಹರಿಸಿಕೊಂಡು ‌ಹೋಗಿದ್ದಳು. ಇದೀಗ ಅಪಹರಣಕ್ಕೊಳಗಾದ ಮಗವನ್ನ ಮೂರು ದಿನದಲ್ಲಿಯೇ ಬೀದರ್(Bidar)​ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮನೆ ಮುಂದೆ ಆಟವಾಡ್ತಿದ್ದ ಮಗು ಅಪಹರಣ; ಮೂರೇ ದಿನದಲ್ಲಿ ಪತ್ತೆ ಹಚ್ಚಿದ ಬೀದರ್​ ಪೊಲೀಸ್
ಬೀದರ್​
Follow us on

ಬೀದರ್, ಮೇ.07: ಅಪಹರಣಕ್ಕೊಳಗಾದ ಮಗವನ್ನ ಮೂರು ದಿನದಲ್ಲಿಯೇ ಬೀದರ್(Bidar)​ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೇ 4 ರಂದು ಬೀದರ್​ನ ಓಲ್ಡ್ ಸಿಟಿಯ ನಯಾಕಮಾನ್​ನಲ್ಲಿ ಮನೆಯ‌ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಅರವಿಂದ್ ಎಂಬ ಮಗು‌ವನ್ನು ಮಹಿಳೆಯೊಬ್ಬಳು ಅಪಹರಿಸಿಕೊಂಡು ‌ಹೋಗಿದ್ದಳು. ಈ ಕುರಿತು ನಗರ ಪೊಲೀಸ್ ‌ಠಾಣೆಯಲ್ಲಿ‌ ಮೇ 4ರಂದು ಪ್ರಕರಣ ‌ದಾಖಲಾಗಿತ್ತು. ಈ ಹಿನ್ನಲೆ ತಕ್ಷಣ ‌ಎಚ್ಚೆತ್ತುಕೊಂಡ ಎಸ್ಪಿ ಚೆನ್ನಬಸವಣ್ಣ ಅವರು ಮಗು ಪತ್ತೆಗಾಗಿ 3 ಪೋಲೀಸ್ ತಂಡವನ್ನು ರಚನೆ ಮಾಡಿದ್ದರು. ಇದೀಗ ಪೊಲೀಸರು ಹೈದ್ರಾಬಾದ್​ನಲ್ಲಿ ಮಗುವನ್ನ ರಕ್ಷಣೆ ಮಾಡಿ ತಾಯಿಯ ಮಡಿಲನ್ನು ಸೇರಿಸಿದ್ದಾರೆ.

ಮತ ಹಾಕಲು ತೆರಳಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವು

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದ ಬಳಿ ಮತ ಹಾಕಲು ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಭದ್ರಾವತಿ ನಿವಾಸಿ ಬೈಕ್ ಸವಾರ ಮಂಜುನಾಥ್ (32) ಮೃತ ರ್ದುದೈವಿ. ಚುರ್ಚಿಗುಂಡಿಯಿಂದ ಭದ್ರಾವತಿಗೆ ತೆರಳುವಾಗ ಖಾಸಗಿ ಬಸ್​ಗೆ ಡಿಕ್ಕಿಯಾಗಿ ಬೈಕ್​ ಸವಾರ ಸಾವನ್ನಪ್ಪಿದ್ದಾರೆ. ಈ ಕುರಿತು ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ದಾವಣಗೆರೆಯಲ್ಲಿ ಕಳ್ಳತನವಾಗಿದ್ದ ಗಂಡು ಮಗುವನ್ನ ಪೊಲೀಸರ ಕೈಗೆ ನೀಡಿ, ಅಪಹರಣ ಪ್ರಕರಣ ಅಂತ್ಯ ಹಾಡಿದ ಗೌರಮ್ಮಗೆ ಸನ್ಮಾನ

ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಸಾವು

ರಾಯಚೂರು: ಜಿಲ್ಲೆಯ ಅರಕೇರಾ ತಾಲೂಕಿನ ಜಾಗಿರ ಜಾಡಲದಿನ್ನಿ ಗ್ರಾಮದಲ್ಲಿ ಬಿಎಲ್​​ಒ ಆಗಿ ನಿಯೋಜನೆಗೊಂಡಿದ್ದ ಬಸವರಾಜ ಜಗ್ಲಿ(53) ಎಂಬುವವರು ಚುನಾವಣಾ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೆಡ್​ ಮಾಸ್ಟರ್ ಆಗಿದ್ದ ಬಸವರಾಜ, ಸರ್ಕಾರಿ ಶಾಲೆಯ ಬೂತ್​ಗೆ ಬಿಎಲ್​​ಒ ಆಗಿ ನಿಯೋಜನೆಗೊಂಡಿದ್ದರು. ಮಧ್ಯಾಹ್ನ ಬಿಪಿ ಲೋ ಆಗಿ ಕುಸಿದುಬಿದ್ದಿದ್ದ ಬಸವರಾಜ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಈ ಘಟನೆ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Tue, 7 May 24