ದಾವಣಗೆರೆಯಲ್ಲಿ ಕಳ್ಳತನವಾಗಿದ್ದ ಗಂಡು ಮಗುವನ್ನ ಪೊಲೀಸರ ಕೈಗೆ ನೀಡಿ, ಅಪಹರಣ ಪ್ರಕರಣ ಅಂತ್ಯ ಹಾಡಿದ ಗೌರಮ್ಮಗೆ ಸನ್ಮಾನ

ದಾವಣಗೆರೆಯಲ್ಲಿ ಕಳ್ಳತನವಾಗಿದ್ದ ಗಂಡು ಮಗುವನ್ನ ಪೊಲೀಸರ ಕೈಗೆ ನೀಡಿ, ಅಪಹರಣ ಪ್ರಕರಣ ಅಂತ್ಯ ಹಾಡಿದ ಗೌರಮ್ಮಗೆ ಸನ್ಮಾನ
ಅಪಹರಣ ಪ್ರಕರಣ ಅಂತ್ಯ ಹಾಡಿದ ಗೌರಮ್ಮಗೆ ಸನ್ಮಾನ

ಕಳ್ಳತನವಾಗಿದ್ದ ಗಂಡು ಮಗುವನ್ನ ಪೊಲೀಸರಿಗೆ ನೀಡಿ ಕೂಲಿಕಾರ್ಮಿಕ ಮಹಿಳೆ ಗೌರಮ್ಮ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಗು ಕಳೆದುಕೊಂಡು ನಗುವನ್ನೇ ಮರೆತಿದ್ದ ತಾಯಿ ಮಡಿಲಿಗೆ ಮಗುವನ್ನು ಹಿಂತಿರುಗಿಸಿದ್ದಾರೆ.

TV9kannada Web Team

| Edited By: Ayesha Banu

Apr 12, 2022 | 1:23 PM

ದಾವಣಗೆರೆ: ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆದ ಎರಡು ಗಂಟೆಯಲ್ಲಿ ಗಂಡು ಮಗು ನಾಪತ್ತೆ ಆಗಿತ್ತು. ಇದು ಇಡೀ ರಾಜ್ಯದ ಗಮನ ಸೆಳೆದಿತ್ತು‌. ಸುಮಾರು 21 ದಿನಗಳ ಬಳಿಗೆ ಮಗು ಇರುವುದು ಪತ್ತೆಯಾಗಿದೆ. ಕಳ್ಳತನವಾಗಿದ್ದ ಗಂಡು ಮಗುವನ್ನ ಪೊಲೀಸರಿಗೆ ನೀಡಿ ಕೂಲಿಕಾರ್ಮಿಕ ಮಹಿಳೆ ಗೌರಮ್ಮ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಗು ಕಳೆದುಕೊಂಡು ನಗುವನ್ನೇ ಮರೆತಿದ್ದ ತಾಯಿ ಮಡಿಲಿಗೆ ಮಗುವನ್ನು ಹಿಂತಿರುಗಿಸಿದ್ದಾರೆ.

ಏಪ್ರಿಲ್ 6ರಂದು ದಾವಣಗೆರೆ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಮಗುವನ್ನ ಗೌರಮ್ಮನ ಕೈಗೆ ಕೊಟ್ಟು ಪರಾರಿ ಆಗಿದ್ದಳು. ದಾವಣಗೆರೆಯಲ್ಲಿ ಮಗು ಅಪಹರಣ ಆದ ಬಗ್ಗೆ ತಿಳಿದಿದ್ದ ಗೌರಮ್ಮ ನೇರವಾಗಿ ಮಗುವನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಂತಹ ಮಹಾನ್ ಕಾರ್ಯ ಮಾಡಿದ ಗೌರಮ್ಮನನ್ನು ಹೈಸ್ಕೂಲ್ ಮೈದಾನದ ವ್ಯಾಪಾರಿಗಳು ಸನ್ಮಾನಿಸಿ ಗೌರವಿಸಿದ್ದಾರೆ.

ಘಟನೆ ಹಿನ್ನೆಲೆ ಮಾರ್ಚ್ 16, 2022 ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಉಮೇಸಲ್ಮಾ ಎಂಬ ಮಹಿಳೆಗೆ ಹೆರಿಗೆಗಾಗಿ ದಾವಣಗೆರೆ ನಗರದ ಕೆಆರ್ ಮಾರ್ಕೆಟ್ ಬಳಿ ಇರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ನಾಲ್ಕು ಗಂಟೆಗೆ ಹೆರಿಗೆ ಆಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಸಂಜೆ ಆರು ಗಂಟೆಗೆ ಮಗು ನಾಪತ್ತೆ ಆಗಿತ್ತು. ಚೂಡಿ ಹಾಕಿ ತಲೆಗೆ ಬಿಳಿ ಸ್ಕಾರ್ಫ್ ಹಾಕಿದ್ದ ಮಹಿಳೆ ಮಗು ಅಪರಿಸಿದ್ದಳು. ಆದ್ರೆ ಈ ಪ್ರಕರಣ ಪತ್ತೆ ಆಗಲು 21 ದಿನ ಬೇಕಾಯಿತು. ಏಪ್ರಿಲ್ 6 ರಂದು ಮಗು ಪತ್ತೆ ಆಗಿತ್ತು. ಆದ್ರೆ ಆರೋಪಿ ಮಾತ್ರ ಸಿಕ್ಕಿರಲಿಲ್ಲ. ಮರುದಿನ ದಾವಣಗೆರೆ ಆಜಾದ್ ನಗರದ 12ನೇ ಕ್ರಾಸ್ ನಿವಾಸಿ ಗುಲ್ಜಾರ್ ಭಾನು ಮಗು ಕದ್ದು ಮಕ್ಕಳಿಲ್ಲದೆ ನೋವು ಅನುಭವಿಸುತ್ತಿದ್ದ ಬೆಂಗಳೂರಿನಲ್ಲಿ ಇದ್ದ ತನ್ನ ಮಗಳಿಗೆ ಕೊಟ್ಟಿದ್ದ ಬಗ್ಗೆ ಪೊಲೀಸ್ ತನಿಖೆಯಿಂದ ಮಾಹಿತಿ ಸಿಕ್ಕಿತ್ತು. ಆದ್ರೆ ಆರೋಪಿ ಗುಲ್ಜಾರ್ ಭಾನು ರಾತ್ರಿ ಗೌರಮ್ಮ ಕೈಗೆ ಮಗು ಕೊಟ್ಟು ಪರಾರಿ ಆಗಿದ್ದಾಳೆ‌. ಸದ್ಯ ಮಗುವನ್ನು ಗೌರಮ್ಮ ಪೊಲೀಸರಿಗೆ ಒಪ್ಪಿಸಿದ್ದಾರೆ.

25 ಸಾವಿರ ಬಹುಮಾನ ಗೌರಮ್ಮನಿಗೆ ನೀಡಿ ಆರೋಪಿ ಹಾಗೂ ಮಗುವಿನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ 25 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಹೀಗೆ ಘೋಷಣೆ ಮಾಡಿದಬಹುಮಾನ ಗೌರಮ್ಮಗೆ ನೀಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ; ಘಟನೆ ಬಗ್ಗೆ ಕೆ.ಎಸ್.ಈಶ್ವರಪ್ಪ ಏನ್ ಹೇಳಿದ್ರು? ಮೊದಲ ಪ್ರತಿಕ್ರಿಯೆ

Kuldeep Sen: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕ್ಷೌರಿಕನ ಮಗ: ಆರ್​ಆರ್​ ತಂಡದ ವೇಗಿ ಈಗ ಐಪಿಎಲ್ ಹೀರೋ

Follow us on

Related Stories

Most Read Stories

Click on your DTH Provider to Add TV9 Kannada