Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ; ಘಟನೆ ಬಗ್ಗೆ ಕೆ.ಎಸ್.ಈಶ್ವರಪ್ಪ ಏನ್ ಹೇಳಿದ್ರು? ಮೊದಲ ಪ್ರತಿಕ್ರಿಯೆ

ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ನನಗೆ ಮಾಹಿತಿಯಿಲ್ಲ. ಸಂತೋಷ್ ಪಾಟೀಲ್ ನನ್ನ ವಿರುದ್ಧ ಕಮಿಷನ್ ಆರೋಪ ಮಾಡಿದ್ದ. ಯಾಕೆ ಆರೋಪ ಮಾಡಿದೆ ಎಂದು ಕೇಳಲು ಇಂದು ಅವರೇ ಇಲ್ಲ. -ಕೆ.ಎಸ್.ಈಶ್ವರಪ್ಪ

ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ; ಘಟನೆ ಬಗ್ಗೆ ಕೆ.ಎಸ್.ಈಶ್ವರಪ್ಪ ಏನ್ ಹೇಳಿದ್ರು? ಮೊದಲ ಪ್ರತಿಕ್ರಿಯೆ
ಸಚಿವ ಕೆ ಎಸ್​ ಈಶ್ವರಪ್ಪ
Follow us
TV9 Web
| Updated By: ಆಯೇಷಾ ಬಾನು

Updated on:Apr 13, 2022 | 7:06 AM

ಮೈಸೂರು: ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ನನಗೆ ಮಾಹಿತಿಯಿಲ್ಲ. ಸಂತೋಷ್ ಪಾಟೀಲ್ ನನ್ನ ವಿರುದ್ಧ ಕಮಿಷನ್ ಆರೋಪ ಮಾಡಿದ್ದ. ಯಾಕೆ ಆರೋಪ ಮಾಡಿದೆ ಎಂದು ಕೇಳಲು ಇಂದು ಅವರೇ ಇಲ್ಲ. ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ನ್ಯಾಯಾಲಯ ಕೂಡ ಪ್ರಕರಣ ವಿಚಾರಣೆ ಅಂಗೀಕರಿಸಿತ್ತು ಎಂದಿದ್ದಾರೆ.

ಸಂತೋಷ್ ಪಾಟೀಲ್ ಯಾರು ಅನ್ನೋದು ನನಗೆ ಗೋತ್ತಿಲ್ಲ. ಟಿವಿ ಒಂದರ ಸಂದರ್ಶನದಲ್ಲಿ ನಾನು ಅವರ ಹೇಳಿಕೆಯನ್ನ ನೋಡಿದ್ದೆ. ದೆಹಲಿಯಲ್ಲಿ ಅಮಿತ್‌ ಶಾಗೆ ದೂರು ಕೊಡಲು ಬಂದಿದ್ದೇನೆ ಎಂದಿದ್ದರು.ಸಂದರ್ಶನ ಆಧಾರದ ಮೇಲೆ ನನ್ನ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದೆ. ಸಂತೋಷ್ ಪಾಟೀಲ್ ನನ್ನ ಮೇಲೆ ಏಕೆ ದೂರು ಕೊಟ್ರೆ ಗೋತ್ತಿಲ್ಲ. ನನ್ನ ಜೊತೆ ಸಾಕಷ್ಟು ಜನ ಪೋಟೋ ತೆಗಸಿಕೊಳ್ತಾರೆ. ನನ್ನ 80 ಬಾರಿ ಭೇಟಿಯಾಗಿದ್ದೆ ಎಂದಿದ್ದಾರೆ, ಒಂದು ಬಾರಿಯು ಭೇಟಿಯಾಗಿಲ್ಲ.ಮಾನ್ಯ ಮುಖ್ಯಮಂತ್ರಿಗಳು ಪೋನ್ ಮಾಡಿದ್ರು. ಅವರೆ ಹೇಳಿದ್ರು ನೀವು ಏನ್ ಹೆದರಬೇಡಿ ಎಂದಿದ್ದಾರೆ. ನಾನೇ ಸಿಎಂಗೆ ಹೇಳಿದ್ದೇನೆ ಇದನ್ನ ತನಿಖೆ ಮಾಡಲು ತಿಳಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಸಂತೋಷ್ ಪಾಟೀಲ್‌ ಸಾವಿನ ಹಿಂದೆ ಷಡ್ಯಂತ್ರ ನಡೆದಿದೆ ಸಂತೋಷ್ ಹಿಂದೆ ಯಾರದಾದ್ರು ಕೈವಾಡ ಇರಬೇಕು. ಕೋರ್ಟ್ ನಿಂದ ನೋಟಿಸ್ ಹೋದ ಮೇಲೆ ಏಕೆ ಆತ್ಮಹತ್ಯೆ ಮಾಡಿಕೊಂಡ್ರು ನನಗೆ ಗೋತ್ತಿಲ್ಲ. ಕೋರ್ಟ್‌ನಿಂದಲೇ ಫೇಸ್ ಮಾಡಬಹುದಾಗಿತ್ತು. ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಸಂತೋಷ್ ಪಾಟೀಲ್‌ ಸಾವಿನ ಹಿಂದೆ ಷಡ್ಯಂತ್ರ ನಡೆದಿದೆ. ವರ್ಕ್‌ ಅರ್ಡರ್ ಇಲ್ಲದೆ ಕೆಲಸ ಮಾಡಿದ್ದಾರೆ. ನಮ್ಮ ವಿಭಾಗದ ಅಧಿಕಾರಿಯೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇಲ್ಲಿ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ. ಪ್ರತಿಪಕ್ಷಗಳು ಕೇಳ್ತೀವೆ ಅಂತ ರಾಜೀನಾಮೆ ಕೊಡಬೇಕಾ. ಗಣಪತಿ ಪ್ರಕರಣ ಬೇರೆ ಈ ಪ್ರಕರಣ ಬೇರೆ. ಜಾರ್ಜ್ ಬಗ್ಗೆ ಗಣಪತಿಯವರೇ ಪತ್ರ ಬರೆದು ಸಹಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವನ ಹಿಂದೆ ಯಾರು ಇದ್ದು ಹೇಳಿಕೆ ಕೊಡಿಸಿರಬೇಕು ಇದು ತನಿಖೆ ಆಗಬೇಕು. ಸುಮ್ನೆ ನನ್ನ ವಿರುದ್ದ ಮಾಧ್ಯಮದಲ್ಲಿ ಹೇಳಿಕೆ ಕೊಟ್ಟಿದ್ದರು. ಗೃಹಸಚಿವರಿಗೂ ನಾನು ಹೇಳಿದ್ದೇನೆ ತನಿಖೆ ಮಾಡಲು ಸೂಚಿಸಿದ್ದೇನೆ. ನಾನು ಸಾಕಷ್ಟು ಹೋರಾಟಗಳನ್ನ ಕಾಂಗ್ರೆಸ್ ವಿರುದ್ದ ಮಾಡಿದ್ದೇನೆ. ಆದ್ರೆ ಇಂತಹ ನೀಚಾ ಕೆಲಸಕ್ಕೆ ನಾನು ಎಂದು ಬೆಂಬಲ ಕೊಟ್ಟಿಲ್ಲ. ನನ್ನ ವಿರುದ್ದ ಆರೋಪವನ್ನ ಎದರಿಸಲು ನಾನು ಸಿದ್ದನಾಗಿದ್ದೇನೆ ಎಂದು ಟಿವಿ9ಗೆ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ಪೊಲೀಸ್ ತನಿಖೆ: ಗೃಹ ಸಚಿವ ಭರವಸೆ ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಆತ ಯಾಕೆ ಆತ್ಮಹತ್ಯೆಗೆ ಶರಣಾದ ಎಂಬ ಬಗ್ಗೆ ಮಾಹಿತಿ ಪಡೆಯುತ್ತೇನೆ. ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಾರೆ. ಸಂತೋಷ್​ ಮಾಧ್ಯಮಗಳಿಗೆ ಸಂದೇಶ ಕಳುಹಿಸಿದ್ದಾನೆ ಅಷ್ಟೇ. ಸಂತೋಷ್​ ಯಾವುದೇ ಡೆತ್​ನೋಟ್​ ಬರೆದಿಲ್ಲ ಅನಿಸುತ್ತೆ. ಉಡುಪಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಲಾಡ್ಜ್​ಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.

ಇನ್ನು ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್​ ಕಾಮಗಾರಿ ಬಿಲ್ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. 2021ರ ಫೆಬ್ರವರಿಯಲ್ಲಿ ಸಚಿವರ ಅನುಮತಿ ಪಡೆದು 108 ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದ್ರೆ ಹಣ ಬಿಡುಗಡೆಯಾಗಿಲ್ಲ. ಕಾಮಗಾರಿ ಪೂರ್ಣವಾಗಿ 1 ವರ್ಷ ಕಳೆದರೂ ಹಣ ನೀಡಿಲ್ಲ. ಸಚಿವರು, ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ನನ್ನ ಪತ್ರವನ್ನು ವೈಯಕ್ತಿಕವಾಗಿ ಪರಿಗಣಿಸಿ ಹಣ ಕೊಡಿಸಿ. ಬಿಲ್​ ಮಂಜೂರಾತಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ 40 ಪರ್ಸೆಂಟ್​ ಕಮಿಷನ್​ ಕೇಳುತ್ತಿದ್ದಾರೆ ಎಂದು ಮೃತ ಸಂತೋಷ್, ಸಚಿವ ಈಶ್ವರಪ್ಪ ವಿರುದ್ಧ ಆರೋಪಮಾಡಿದ್ದರು. ಈ ಬಗ್ಗೆ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು. ಹಣ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಆದ್ರೆ ಇದೀಗ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಮಾಧ್ಯಮಗಳಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಸಂತೋಷ್

ಪಾಕಿಸ್ತಾನ ಮೂಲದ ಸಲಿಂಗಿ ಬ್ರಿಟನ್ ಸಂಸತ್ ಸದಸ್ಯ ಇಮ್ರಾನ್ ಬಾಲಕನೊಬ್ಬನ ಮೇಲೆ ನಡೆಸಿದ ಲೈಂಗಿಕ ಹಲ್ಲೆ ಸಾಬೀತಾಗಿದೆ

Published On - 1:01 pm, Tue, 12 April 22

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ