Kuldeep Sen: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕ್ಷೌರಿಕನ ಮಗ: ಆರ್​ಆರ್​ ತಂಡದ ವೇಗಿ ಈಗ ಐಪಿಎಲ್ ಹೀರೋ

ಕಳೆದ ಭಾನುವಾರ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೂಲಕ ಐಪಿಎಲ್​ಗೆ ಪದಾರ್ಪನೆ ಮಾಡಿದ ಕುಲ್ದೀಪ್ ಚೊಚ್ಚಲ ಮ್ಯಾಚ್​ನಲ್ಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಐಪಿಎಲ್​​ನಲ್ಲಿ ಮಿಂಚುತ್ತಿರುವ ಈ ಯುವ ಆಟಗಾರನ ಹಿನ್ನಲೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

Kuldeep Sen: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕ್ಷೌರಿಕನ ಮಗ: ಆರ್​ಆರ್​ ತಂಡದ ವೇಗಿ ಈಗ ಐಪಿಎಲ್ ಹೀರೋ
Kuldeep Sen
Follow us
TV9 Web
| Updated By: Vinay Bhat

Updated on: Apr 12, 2022 | 11:50 AM

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2022) ಅದೆಷ್ಟೊ ಯುವ ಆಟಗಾರರಿಗೆ ಅತ್ಯುತ್ತಮ ವೇದಿಕೆಯಾಗಿದೆ. ಇಲ್ಲಿ ಮಿಂಚಿನ ಸಂಚಲನ ಮೂಡಿಸಿ ಭಾರತ ಕ್ರಿಕೆಟ್ ತಂಡಕ್ಕೆ ಕಾಲಿಟ್ಟ ಅನೇಕ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಇಂದು ವಿಶ್ವದ ಶ್ರೇಷ್ಠ ಬೌಲರ್ ಆಗಿ ಗುರುತಿಸಿಕೊಂಡಿರುವ ಜಸ್​​ಪ್ರೀತ್ ಬುಮ್ರಾ (Jasprit Bumrah) ಕೂಡ ಬೆಳಕಿಗೆ ಬಂದಿದ್ದು ಇದೇ ಐಪಿಎಲ್​ನಿಂದ. ಅಲ್ಲದೆ ಯುಜ್ವೇಂದ್ರ ಚಹಲ್, ಟಿ. ನಟರಾಜನ್ ಮಾತ್ರವಲ್ಲದೆ ಟೀಮ್ ಇಂಡಿಯಾದ ಭವಿಷ್ಯದ ಆಲ್ರೌಂಡರ್ ಎಂದೇ ಹೇಳಲಾಗುವ ವೆಂಕಟೇಶ್ ಅಯ್ಯರ್ ಹೀಗೆ ಅನೇಕರು ಐಪಿಎಲ್ ಮೂಲಕ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿ ತಮ್ಮ ಸಾಮರ್ಥ್ಯ ತೋರ್ಪಡಿಸಿ ಸ್ಟಾರ್ ಆದವರು. ಈಗ ಇದೇ ಸಾಲಿಗೆ ಮತ್ತೊಬ್ಬ ಆಟಗಾರನ ಸೇರ್ಪಡೆ ಆಗುವುದರಲ್ಲಿದೆ. ಇವರು ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅವರೇ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಕುಲ್ದೀಪ್ ಸೇನ್ (Kuldeep Sen).

ಹೌದು, ಕಳೆದ ಭಾನುವಾರ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೂಲಕ ಐಪಿಎಲ್​ಗೆ ಪದಾರ್ಪನೆ ಮಾಡಿದ ಕುಲ್ದೀಪ್ ಚೊಚ್ಚಲ ಮ್ಯಾಚ್​ನಲ್ಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಕೊನೆಯ ಓವರ್ ವರೆಗೂ ಕುತೂಹಲ ಕೆರಳಿಸಿದ ಈ ಪಂದ್ಯದಲ್ಲಿ ಸ್ಯಾಮ್ಸನ್ ಪಡೆ ನಂಬಿದ್ದು ಕುಲ್ದೀಪ್ ಸೇನ್ ಅವರನ್ನ. ಅಂತಿಮ 6 ಎಸೆತಗಳಲ್ಲಿ 15 ರನ್​ಗಳನ್ನು ಕಟ್ಟಿ ಹಾಕಲು ಸ್ಯಾಮ್ಸನ್ ಬೌಲಿಂಗ್ ನೀಡಿದ್ದು ಈ ಯುವ ಆಟಗಾರನಿಗೆ. ಈ ಅಗ್ನಿ ಪರೀಕ್ಷೆಯಲ್ಲಿ ಕುಲ್ದೀಪ್ ಸಂಪೂರ್ಣ ಯಶಸ್ಸು ಸಾಧಿಸಿ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು. ಮಾಲಿಂಗ, ಸಂಗಕ್ಕಾರ, ಬೌಲ್ಟ್​ರಂತಹ ಘಟಾನುಘಟಿ ಕ್ರಿಕೆಟಿಗರಿಂದ ಮೆಚ್ಚುಗೆ ಗಳಿಸಿದರು. ಐಪಿಎಲ್​​ನಲ್ಲಿ ಮಿಂಚುತ್ತಿರುವ ಈ ಯುವ ಆಟಗಾರನ ಹಿನ್ನಲೆ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಮಧ್ಯಪ್ರದೇಶದ ರಾವಾ ಪಟ್ಟಣದ ಸಿರ್ಮೌರ್​ ಚೌರಹದಲ್ಲಿ ಸಲೂನ್​ ಅಂಗಡಿ ನಡೆಸುತ್ತಿರುವ ಒಬ್ಬ ಬಡ ಕ್ಷೌರಿಕನ ಮಗ ಕುಲ್ದೀಪ್ ಸೇನ್. ಕುಲ್ದೀಪ್ ಅವರಿಗೆ ನಾಲ್ವರು ಒಡಹುಟ್ಟಿದವರಿದ್ದಾರೆ. ಚಿಕ್ಕಂದಿನಿಂದಲೇ ಕ್ರಿಕೆಟ್​ನಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಎಂಟನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. 2018-19ರಲ್ಲಿ ಮಧ್ಯಪ್ರದೇಶಕ್ಕಾಗಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. 2018 ರಲ್ಲಿ ಪಂಜಾಬ್ ವಿರುದ್ಧ ಮೊದಲ ಬಾರಿಗೆ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದರು. ಅಷ್ಟೇ ಅಲ್ಲದೆ ಮೊದಲ ರಣಜಿ ಸೀಸನ್​ನಲ್ಲಿ ಎಂಟು ಪಂದ್ಯಗಳಲ್ಲಿ 25 ವಿಕೆಟ್​ಗಳನ್ನು ಉರುಳಿಸಿದ್ದರು. ಸೈಯದ್ ಮುಸ್ತಾಕ್ ಅಲಿ ಟ್ರೋಫಿಯ ಅಂಗವಾಗಿ ಮುಂಬೈ ವಿರುದ್ಧ ಚುಟುಕು ಕ್ರಿಕೆಟ್​ಗೆ ಕಾಲಿಟ್ಟರು. ಇದಾಗ್ಯೂ ಕುಲ್ದೀಪ್​ಗೆ ಐಪಿಎಲ್ ಬಾಗಿಲು ತೆರೆಯಲು ಮೂರು ವರ್ಷ ಕಾಯಬೇಕಾಯಿತು. ಇದೀಗ ಐಪಿಎಲ್ ಅಂಗಳಕ್ಕೆ ಕುಲ್ದೀಪ್ ಸೇನ್ ಎಂಬ ಯುವ ಪ್ರತಿಭೆ ಎಂಟ್ರಿ ಕೊಟ್ಟಿದ್ದು ಮೊದಲ ಪಂದ್ಯದಲ್ಲೇ ಭರವಸೆ ಮೂಡಿಸಿದ್ದಾರೆ.

25 ವರ್ಷದ ಇವರು​ ಕಳೆದ ಪಂದ್ಯದಲ್ಲಿ 146kmh ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಇವರ ಬೌಲಿಂಗ್ ಪ್ರದರ್ಶನವನ್ನು ಇಡೀ ವಿಶ್ವವೇ ಕಣ್ತುಂಬಿಕೊಂಡಿತು. ಆದರೆ ತಮ್ಮ ಮಗನಿಗೆ ಪ್ರತಿಷ್ಠಿತ ಐಪಿಎಲ್​ ಲೀಗ್​ನಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ ಸಹ ಭಾನುವಾರ ಗ್ರಾಹಕರ ಸಂಖ್ಯೆ ಹೆಚ್ಚಿದ್ದರಿಂದ ಕುಲ್ದೀಪ್ ತಂದೆ ರಾಮ್​ ಪಾಲ್ ಅಂಗಡಿಯಲ್ಲಿ ತಮ್ಮ ಕಾಯಕದಲ್ಲಿ ತೊಡಗಿದ್ದರಂತೆ.

“ನನಗೆ ಇಂದು ಊಟ ಮಾಡಲು ಕೂಡಾ ಸಮಯ ಇರಲಿಲ್ಲ. ಇಂದು(ಭಾನುವಾರ) ಸಾಕಷ್ಟು ಗ್ರಾಹಕರಿದ್ದರು” ಎಂದು ಹೇರ್​ ಕಟ್​ ಮಾಡುತ್ತಲೇ ಸ್ಥಳೀಯ ಮಾಧ್ಯಮಗಳಿಗೆ ರಾಮ್​ ಪಾಲ್ ಸೇನ್ ತಿಳಿಸಿದ್ದಾರೆ. “ನಾನು ಈ ವೃತ್ತಿಯನ್ನು 30 ವರ್ಷಗಳಿಂದ ಮಾಡುತ್ತಿದ್ದೇನೆ. ನನ್ನ ಮಗನ ಸಾಧನೆ ನನಗೆ ಖುಷಿಯಿದೆ. ಆತ ನನ್ನನ್ನು ಹೆಮ್ಮೆ ಪಡುವಂತೆ ಮಾಡಿದ್ದಾನೆ. ಆದರೆ ನಾನು ಎಂದೂ ಕ್ರಿಕೆಟ್​ ಆಡುಬೇಕೆಂಬ ಅವನ ಉತ್ಸಾಹವನ್ನು ಬೆಂಬಲಿಸಲಿಲ್ಲ. ಆತ ಶಾಲಾ ದಿನಗಳಲ್ಲಿ ಕ್ರಿಕೆಟ್ ಆಡುವಾಗ ಬೈದಿದ್ದೇನೆ, ಕೆಲವೊಮ್ಮೆ ಹೊಡೆದಿದ್ದೇನೆ. ಆದರೆ ಅವನು ಮಾತ್ರ ತನ್ನ ಕನಸನ್ನು ಎಂದಿಗೂ ಕೈಬಿಡಲಿಲ್ಲ” ಎಂದು ತಿಂಗಳಿಗೆ 8,000 ಸಂಪಾದಿಸುವ ರಾಮ್​ ಪಾಲ್​ ಮಗನ ಸಾಧನೆಯನ್ನು ಭಾವುಕತೆಯಿಂದ ನುಡಿದರು.

Kuldeep Sen Father

ಕುಲ್ದೀಪ್ ಸೇನ್ ಅವರ ತಂದೆ ರಾಮ್ ಪಾಲ್.

ರಾಮ್​ ತಮ್ಮ ಹಳ್ಳಿಯಿಂದ ಅಂಗಡಿಗೆ 6 ಕಿ.ಮೀ ಸೈಕಲ್​ನಲ್ಲಿ ತೆರಳುತ್ತಾರೆ. ರಾತ್ರೋರಾತ್ರಿ ತಮ್ಮ ಮಗ ದೇಶಾದ್ಯಂತ ಪ್ರಸಿದ್ಧಿ ಪಡೆದರೂ ತಮ್ಮ ದಿನನಿತ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳುತ್ತಾರೆ. ಬಡಕುಟುಂಬದಿಂದ ಬಂದಂತಹ ಕುಲದೀಪ್ ಸೇನ್ ಅವರು ಇಂದು ಕ್ರಿಕೆಟಿಗನಾಗಿ ಬೆಳೆದಿರುವ ಸಂಪೂರ್ಣ ಶ್ರೇಯ ಕೋಚ್​ ಆಂಟೋನಿ ಅವರಿಗೆ ಸಲ್ಲುತ್ತದೆ. ಅವರು ಕುಲದೀಪ್​ ಅವರ ಡಯಟ್​, ಸ್ಪೈಕ್ ಶೂಗಳು ಮತ್ತು ತರಬೇತಿಯ ಸಂಪೂರ್ಣ ವೆಚ್ಚ ಭರಿಸಿದ್ದಾರೆ ಎಂದು ರಾಮ್​ ಪಾಲ್ ಹೇಳಿದ್ದಾರೆ.

ಇನ್ನು ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕೂಡ ಕುಲ್ದೀಪ್ ಬೌಲಿಂಗ್ ಬಗ್ಗೆ ಹಾಡಿಹೊಗಳಿದ್ದಾರೆ. “ಈರೀತಿಯ ಪಂದ್ಯಲ್ಲಿ ಕೊನೆಯ ಓವರ್​ ಯಾರಿಗೆ ನೀಡಬೇಕು ಎಂಬುದು ಕಷ್ಟದ ಸಂಗತಿ. ನಾನು ಯಾವ ಬೌಲರ್ ಮೊದಲ ಮೂರು ಓವರ್ ಅನ್ನು ಚೆನ್ನಾಗಿ ಮಾಡಿರುತ್ತಾನೊ ಆತನಿಗೆ ನೀಡುತ್ತೇನೆ. ನನಗೆ ಕುಲ್ದೀಪ್ ಸೇನ್ ಮೇಲೆ ನಂಬಿಕೆಯಿತ್ತು. ಅವರು ಪಂದ್ಯವನ್ನು ಕೈ ಜಾರದಂತೆ ನೋಡಿಕೊಳ್ಳುತ್ತಾರೆ ಎಂಬುದು ತಿಳಿದಿತ್ತು. ಅವರ ವೈಡ್ ಯಾರ್ಕರ್ ಚೆನ್ನಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಕುಲ್ದೀಪ್ ಸಾಕಷ್ಟು ಶ್ರಮ ವಹಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇವರ ವೈಡ್ ಯಾರ್ಕರ್​ ನನ್ನ ಗಮನ ಸೆಳೆದಿತ್ತು,” ಎಂದು ಹೇಳಿದ್ದಾರೆ.

IPL 2022 Points Table: ಐಪಿಎಲ್ ಪಾಯಿಂಟ್ ಟೇಬಲ್ ಹೇಗಿದೆ?, ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?

Hardik Pandya: ಸೀನಿಯರ್ ಪ್ಲೇಯರ್ ಎಂಬ ಗೌರವ ಕೊಡದೆ ಶಮಿಗೆ ಮನಬಂದಂತೆ ಬೈದ ಹಾರ್ದಿಕ್ ಪಾಂಡ್ಯ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್