Hardik Pandya: ಸೀನಿಯರ್ ಪ್ಲೇಯರ್ ಎಂಬ ಗೌರವ ಕೊಡದೆ ಶಮಿಗೆ ಮನಬಂದಂತೆ ಬೈದ ಹಾರ್ದಿಕ್ ಪಾಂಡ್ಯ
ಸನ್ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ತಾಳ್ಮೆ ಕಳೆದುಕೊಂಡ ಘಟನೆ ಕೂಡ ನಡೆದಿದೆ. ಅದುಕೂಡ ಹಿರಿಯ ಬೌಲರ್ ಮೊಹಮ್ಮದ್ ಶಮಿ ಮೇಲೆ.
ಐಪಿಎಲ್ 2022 ರಲ್ಲಿ (IPL 2022) ಸೋಮವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಕೊನೆಯ ಓವರ್ ವರೆಗೂ ನಡೆದ ಕಾದಾಟದಲ್ಲಿ ಅಂತಿಮವಾಗಿ ಕೇನ್ ವಿಲಿಯಮ್ಸನ್ ಪಡೆ 8 ವಿಕೆಟ್ಗಳ ಗೆಲುವು ಕಂಡರೆ, ಹ್ಯಾಟ್ರಿಕ್ ಸೋಲಿನಿಂದ ಗೆದ್ದು ಬೀಗಿದ್ದ ಹಾರ್ದಿಕ್ ಪಡೆ ಟೂರ್ನಿಯಲ್ಲಿ ಮೊದಲು ಸೋಲು ಅನುಭವಿಸಿತು. ಗುಜರಾತ್ ನೀಡಿದ್ದ 163 ರನ್ಗಳ ಟಾರ್ಗೆಟ್ ಅನ್ನು ಎಸ್ಆರ್ಹೆಚ್ ತಂಡ 19.1 ಓವರ್ನಲ್ಲಿ ಗುರಿ ಮುಟ್ಟಿತು. ಕೇನ್ ವಿಲಿಯಮ್ಸನ್ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಇದರ ನಡುವೆ ಜಿಟಿ ತಂಡ ಬೌಲಿಂಗ್ ಮಾಡುತ್ತಿದ್ದ ವೇಳೆ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ತಾಳ್ಮೆ ಕಳೆದುಕೊಂಡ ಘಟನೆ ಕೂಡ ನಡೆದಿದೆ. ಅದುಕೂಡ ಹಿರಿಯ ಬೌಲರ್ ಮೊಹಮ್ಮದ್ ಶಮಿ (Mohammed Shami) ಮೇಲೆ. ಕೋಪಗೊಂಡ ಹಾರ್ದಿಕ್ ಅವರು ಶಮಿ ಮೇಲೆ ರೇಗಾಡಿದ್ದಾರೆ.
ಕೇನ್ ವಿಲಿಯಮ್ಸನ್ ಮುಂದಾಳತ್ವದಲ್ಲಿ ಎಸ್ಆರ್ಹೆಚ್ 163 ರನ್ಗಳ ಟಾರ್ಗೆಟ್ ಅನ್ನು ಬೆನ್ನಟ್ಟಲು ಶುರು ಮಾಡಿತ್ತು. ಅದು 13ನೇ ಓವರ್. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಬಂದರು. ಇದೇ ಓವರ್ ಅನ್ನು ಟಾರ್ಗೆಟ್ ಮಾಡಿದ ಹೈದರಾಬಾದ್ ದೊಡ್ಡ ಹೊಡೆತಕ್ಕೆ ಮುಂದಾಯಿತು. ಅದರಂತೆ ಪಾಂಡ್ಯ ಓವರ್ನ ಎರಡನೇ ಮತ್ತು ಮೂರನೇ ಬಾಲ್ನಲ್ಲಿ ವಿಲಿಯಮ್ಸನ್ ಸತತ ಎರಡು ಸಿಕ್ಸರ್ ಸಿಡಿಸಿದರು. ಅದಾಗಲೇ ಕೋಗೊಂಡಿದ್ದ ಹಾರ್ದಿಕ್ ಆರನೇ ಎಸೆತವನ್ನು ರಾಹುಲ್ ತ್ರಿಪಾಠಿ ಅವರಿಗೆ ಶಾರ್ಟ್ ಎಸೆತದರು. ಇದನ್ನು ಅಪ್ಪರ್ ಕಟ್ ಮೂಲಕ ಹೊಡೆದ ತ್ರಿಪಾಠಿ, ಚೆಂಡು ಸೀದಾ ಡೀಪ್ ಥರ್ಡ್ ಮ್ಯಾನ್ ಕಡೆ ಹೋಯಿತು.
ಥರ್ಡ್ ಮ್ಯಾನ್ ಫೀಲ್ಡಿಂಗ್ನಲ್ಲಿ ಮೊಹಮ್ಮದ್ ಶಮಿ ಇದ್ದರು. ಓಡಿ ಬಂದರೂ ಶಮಿಗೆ ಆ ಕ್ಯಾಚ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ವಲ್ಪ ಹಿಂದೆ ಹೋಗಿ ಚೆಂಡು ನೆಲಕ್ಕೆ ತಾಗಿದ ಮೇಲೆ ಹಿಡಿದರು. ಇದರಿಂದ ಕೋಪಗೊಂಡ ಹಾರ್ದಿಕ್ ಪಾಂಡ್ಯ ಅವರು ಫೀಲ್ಡಿಂಗ್ ವಿಚಾರವಾಗಿ ಶಮಿ ಮೇಲೆ ಕಿರುಚಾಡಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಒಬ್ಬ ಹಿರಿಯ ಆಟಗಾರನ ಜೊತೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲವೇ ಎಂದು ಕಿಡಿ ಕಾಡುತ್ತಿದ್ದಾರೆ. ಶಮಿ ಟೀಮ್ ಇಂಡಿಯಾಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆಂದು ಎಲ್ಲರಿಗೂ ತಿಳಿದಿದೆ. ಇಂತಹ ಶ್ರೇಷ್ಠ ಪ್ಲೇಯರ್ಗೆ ಹಾರ್ದಿಕ್ ಈರೀತಿ ರಿಯಾಕ್ಟ್ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
Dear Hardik, you are a terrible captain. Stop taking it out on your teammates, particularly someone as senior as Shami. #IPL #IPL2022 #GTvsSRH pic.twitter.com/9yoLpslco7
— Bodhisattva #DalitLivesMatter ???️? (@insenroy) April 11, 2022
@hardikpandya7 shouting at the #mohammedshami is disgraceful what Shami has done for #Indianteam is commendable and #Hardik has not even done half of it. #shameful #HardikPandya
— Wolf (@Wolf_Vickbaghel) April 11, 2022
ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್ನಲ್ಲಿ ನಾಯಕನಾದ ಮೇಲೆ ಸಹ ಆಟಗಾರರ ಜೊತೆ ಈರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಡೇವಿಡ್ ಮಿಲ್ಲರ್ ಮೇಲೆ ರೇಗಾಡಿದ್ದರು. ಗುಜರಾತ್ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 19 ರನ್ಗಳ ಅವಶ್ಯಕತೆಯಿತ್ತು. ಮಿಲ್ಲರ್ ಕ್ರೀಸ್ನಲ್ಲಿದ್ದರು. ಈ ಹಂತದಲ್ಲಿ ಒಡಿಯನ್ ಸ್ಮಿತ್ ಬೌಲಿಂಗ್ನ ಮೊದಲ ಎಸೆತದಲ್ಲಿ ಮಿಲ್ಲರ್ ಬ್ಯಾಟ್ ಬೀಸಿದರಾದರೂ ಚೆಂಡು ಬ್ಯಾಟ್ಗೆ ತಾಗದೆ ಕೀಪರ್ ಕೈ ಸೇರಿತು. ಮಿಲ್ಲರ್ ಕನಿಷ್ಠ ಒಂದು ರನ್ ಗಳಿಸೋಣ ಎಂದು ಓಡಿದರು. ಅತ್ತ ನಾನ್ಸ್ಟ್ರೈಕರ್ನಲ್ಲಿದ್ದ ಹಾರ್ದಿಕ್ ಕೂಡ ಓಡಿ ಬಂದರು. ಆದರೆ, ಚೆಂಡು ಕೀಪರ್ ಬೈರ್ಸ್ಟೋ ಕೈಯಲ್ಲೇ ಇತ್ತು. ಅದು ಸುಲಭವಾದ ರನೌಟ್ ಎಂಬುದು ಹಾರ್ದಿಕ್ಗೆ ತಿಳಿದಿತ್ತು. ಆದರೂ ಮಿಲ್ಲರ್ ಓಡಿ ಬಂದ ಕಾರಣ ಹಾರ್ದಿಕ್ ಕೂಡ ಓಡಿದರು. ಆದರೆ, ಹಾರ್ದಿಕ್ ಗೆರೆ ಮುಟ್ಟುವ ಮೊದಲೇ ಬೈರ್ಸ್ಟೋ ಸುಲಭವಾಗಿ ರನೌಟ್ ಮಾಡಿಬಿಟ್ಟರು. ಇದರಿಂದ ಸಿಟ್ಟಾದ ಪಾಂಡ್ಯ ಅವರು ಮಿಲ್ಲರ್ ಕಡೆ ತಿರುಗಿ ಕೋಪದಿಂದ ಗದರಿದರು.
CSK vs RCB, IPL 2022: ಬೆಂಗಳೂರು vs ಚೆನ್ನೈ: ಐಪಿಎಲ್ನಲ್ಲಿಂದು ರಣ ರೋಚಕ ಕದನ
SRH vs GT: ಐಪಿಎಲ್ 2022 ರಲ್ಲಿ ಮೊದಲ ಸೋಲು ಕಂಡ ಹಾರ್ದಿಕ್ ಪಡೆ: ಬಲಿಷ್ಠವಾಗುತ್ತಿದೆ ಎಸ್ಆರ್ಹೆಚ್