Hardik Pandya: ರನೌಟ್ ಆದ ಸಿಟ್ಟಿನಲ್ಲಿ ಮಿಲ್ಲರ್​ಗೆ ಬಾಯಿಗೆ ಬಂದಂತೆ ಬೈದ ಹಾರ್ದಿಕ್ ಪಾಂಡ್ಯ: ವಿಡಿಯೋ

Hardik Pandya Run Out, PBKS vs GT: ಪಂಜಾಬ್ ಕಿಂಗ್ಸ್​ ಹಾಗೂ ಗುಜರಾತ್ ಟೈಟಾನ್ಸ್​ ನಡುವಣ ಪಂದ್ಯದ ಕೊನೆಯ ಓವರ್​​ನಲ್ಲಿ ಹೈಡ್ರಾಮವೇ ನಡೆದು ಹೋಯಿತು. ಅದರಲ್ಲಿ ಮುಖ್ಯವಾಗಿ ಹಾರ್ದಿಕ್ ಪಾಂಡ್ಯ ರನೌಟ್ ಕೂಡ ಒಂದು. ಆ ಸಂದರ್ಭ ಪಾಂಡ್ಯ ಏನು ಮಾಡಿದರು ನೋಡಿ.

Hardik Pandya: ರನೌಟ್ ಆದ ಸಿಟ್ಟಿನಲ್ಲಿ ಮಿಲ್ಲರ್​ಗೆ ಬಾಯಿಗೆ ಬಂದಂತೆ ಬೈದ ಹಾರ್ದಿಕ್ ಪಾಂಡ್ಯ: ವಿಡಿಯೋ
Hardik Pandya Run out PBKS vs GT
Follow us
TV9 Web
| Updated By: Vinay Bhat

Updated on: Apr 09, 2022 | 11:55 AM

15ನೇ ಆವೃತ್ತಿಯ ಐಪಿಎಲ್​ನಲ್ಲಿ ಶುಕ್ರವಾರ ನಡೆದ 16ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ (PBKS vs GT) ತಂಡ ರೋಚಕ ಜಯ ಸಾಧಿಸಿತು. ಉಭಯ ತಂಡಗಳೂ 20 ಓವರ್​ಗಳ ಪಂದ್ಯವನ್ನ ಆಡಿದ್ದು ವಿಶೇಷ. ಈ ರೋಮಾಂಚನಕಾರಿ ಪಂದ್ಯದಲ್ಲಿ ಜಿಟಿ ತಂಡದ ರಾಹುಲ್ ತೆವಾಟಿಯ (Rahul Tewatia) ಹೀರೋ ಆದರು. ಕೊನೆಯ ಎರಡು ಎಸೆತಗಳಲ್ಲಿ ಗೆಲ್ಲಲು 12 ರನ್ ಬೇಕಿದ್ದಾಗ ಎರಡೂ ಎಸೆತವನ್ನು ಸಿಕ್ಸರ್​​ಗೆ ಅಟ್ಟಿ ರಣರೋಚಕ ಗೆಲುವು ತಂದಿಟ್ಟರು. ಸತತ ಮೂರು ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡ ದಾಖಲೆ ಪಟ್ಟಿಗೆ ಕೂಡ ಸೇರ್ಪಡೆ ಆಯಿತು. ಹಾರ್ದಿಕ್ ಪಾಂಡ್ಯ (Hardik Pandya) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿ ತಮ್ಮ ಚೊಚ್ಚಲ ಋತುವಿನಲ್ಲೇ ಮೊದಲ ಮೂರು ಪಂದ್ಯಗಳನ್ನು ಗೆದ್ದ ಮೂರನೇ ತಂಡವಾಯಿತು. ಗುಜರಾತ್​​​ಗೆ ಕೊನೆಯ ಓವರ್​ನ 6 ಎಸೆತದಲ್ಲಿ ಗೆಲ್ಲಲು 19 ರನ್​ಗಳ ಅವಶ್ಯಕತೆಯಿತ್ತು. ಈ ಓವರ್​​ನಲ್ಲಿ ಹೈಡ್ರಾಮವೇ ನಡೆದು ಹೋಯಿತು. ಅದರಲ್ಲಿ ಮುಖ್ಯವಾಗಿ ಹಾರ್ದಿಕ್ ಪಾಂಡ್ಯ ರನೌಟ್ ಕೂಡ ಒಂದು.

ಹೌದು, ಗುಜರಾತ್ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 19 ರನ್​​ಗಳ ಅವಶ್ಯಕತೆಯಿತ್ತು. ಡೇವಿಡ್ ಮಿಲ್ಲರ್ ಕ್ರೀಸ್​ನಲ್ಲಿದ್ದರು. ಈ ಹಂತದಲ್ಲಿ ಬೌಲಿಂಗ್‌ ದಾಳಿಗಿಳಿದ ಪಂಜಾಬ್​ನ ಒಡಿಯನ್‌ ಸ್ಮಿತ್‌, ಮೊದಲ ಬಾಲ್‌ನಲ್ಲಿ ವೈಡ್‌ ಮೂಲಕ ಒಂದು ರನ್‌ ನೀಡಿದರು. ಹೀಗಾಗಿ ಗೆಲುವಿಗೆ 6 ಬಾಲ್‌ಗಳಲ್ಲಿ 18 ರನ್‌ಗಳಿಸಬೇಕಿತ್ತು. ಮೊದಲ ಎಸೆತದಲ್ಲಿ ಮಿಲ್ಲರ್ ಬ್ಯಾಟ್ ಬೀಸಿದರಾದರೂ ಚೆಂಡು ಬ್ಯಾಟ್​ಗೆ ತಾಗದೆ ವಿಕೆಟ್ ಕೀಪರ್ ಕೈ ಸೇರಿತು. ಮಿಲ್ಲರ್ ಕನಿಷ್ಠ ಒಂದು ಆದರೂ ಗಳಿಸೋಣ ಎಂದು ಓಡಿದರು. ಅತ್ತ ನಾನ್​​ಸ್ಟ್ರೈಕರ್​​ನಲ್ಲಿದ್ದ ಹಾರ್ದಿಕ್ ಪಾಂಡ್ಯ ಕೂಡ ಓಡಿ ಬಂದರು. ಇಲ್ಲೇ ಹಾರ್ದಿಕ್ ತಾಳ್ಮೆ ಕಳೆದುಕೊಂಡಿದ್ದು.

ಚೆಂಡು ವಿಕೆಟ್ ಕೀಪರ್ ಜಾನಿ ಬೈರ್​​ಸ್ಟೋ ಕೈಯಲ್ಲೇ ಇತ್ತು. ಅದು ಸುಲಭವಾದ ರನೌಟ್ ಎಂಬುದು ಹಾರ್ದಿಕ್​​ಗೆ ತಿಳಿದಿತ್ತು. ಆದರೂ ಮಿಲ್ಲರ್ ಓಡಿ ಬಂದ ಕಾರಣ ಇತ್ತ ಹಾರ್ದಿಕ್ ಕೂಡ ಓಡಿದರು. ಆದರೆ, ಹಾರ್ದಿಕ್ ಗೆರೆ ಮುಟ್ಟುವ ಮೊದಲೇ ಬೈರ್​​​ಸ್ಟೋ ಸುಲಭವಾಗಿ ರನೌಟ್ ಮಾಡಿಬಿಟ್ಟರು. ಇದರಿಂದ ಸಿಟ್ಟಾದ ಹಾರ್ದಿಕ್ ಪಾಂಡ್ಯ ಅವರು ಮಿಲ್ಲರ್ ಕಡೆ ತಿರುಗಿ ಕೋಪದಿಂದ ಗದರಿದರು. ಆದರೆ, ಪಾಂಡ್ಯ ತೆರಳಿದ ನಂತರ ನಡೆದಿದ್ದು ಅಕ್ಷರಶಃ ರಣ ರೋಚಕ.

ಹಾರ್ದಿಕ್‌ ಪಾಂಡ್ಯ ರನೌಟ್‌ ಬಲೆಗೆ ಬಿದ್ದ ತಕ್ಷಣ ಕ್ರೀಸ್​ಗೆ ಬಂದ ರಾಹುಲ್‌ ತೆವಾಟಿಯ, 20ನೇ ಓವರ್‌ನ 2ನೇ ಬಾಲ್‌ನಲ್ಲಿ 1 ರನ್‌ಗಳಿಸಿದರು. ಬಳಿಕ 3ನೇ ಬಾಲ್‌ನಲ್ಲಿ ಡೇವಿಡ್‌ ಮಿಲ್ಲರ್‌ ಬೌಂಡರಿ ಬಾರಿಸಿದರೆ, 4ನೇ ಬಾಲ್‌ನಲ್ಲಿ ಮತ್ತೆ 1 ರನ್‌ ಅಷ್ಟೆ ದಕ್ಕಿತು. ಹೀಗಾಗಿ ಕೊನೆಯ ಎರಡು ಬಾಲ್‌ನಲ್ಲಿ ಗುಜರಾತ್‌ ಗೆಲುವಿಗೆ 12 ರನ್‌ಗಳು ಬೇಕಾಯಿತು. ಕ್ರೀಸ್​ನಲ್ಲಿ ತೆವಾಟಿಯ ಇದ್ದರು. 5ನೇ ಬಾಲ್‌ನಲ್ಲಿ ಭರ್ಜರಿ ಸಿಕ್ಸರ್‌ ಸಿಡಿಸಿದ ತೆವಾಟಿಯಾ, ಪಂದ್ಯದ ರೋಚಕತೆಯನ್ನ ಮತ್ತಷ್ಟು ಹೆಚ್ಚಿಸಿದರು. ಪರಿಣಾಮ 1 ಬಾಲ್‌ಗೆ 6 ರನ್‌ ಬೇಕಿತ್ತು. ಕೊನೆಯ ಬಾಲ್‌ನಲ್ಲೂ ರಾಹುಲ್‌ ತೆವಾಟಿಯ, ಸಿಕ್ಸರ್‌ ಬಾರಿಸುವ ಮೂಲಕ ಗುಜರಾತ್‌ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಇದಕ್ಕೂ ಮುನ್ನ ಟೈಟನ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ 59 ಎಸೆತಗಳಲ್ಲಿ 11 ಫೋರ್‌ ಮತ್ತು 1 ಸಿಕ್ಸರ್‌ ಒಳಗೊಂಡ 96 ರನ್‌ ಸಿಡಿಸಿ ತಂಡದ ಭರ್ಜರಿ ಗೆಲುವಿಗೆ ಬೇಕಿದ್ದ ಭದ್ರ ಅಡಿಪಾಯ ಹಾಕಿಕೊಟ್ಟರು.

RCB vs MI: ಆರ್​ಸಿಬಿ ತಂಡದಿಂದ ಸ್ಟಾರ್ ಆಟಗಾರ ಔಟ್: ಇಂದಿನ ಪಂದ್ಯಕ್ಕೆ ಪ್ಲೇಯಿಂಗ್ XI ಹೇಗಿದೆ?

IPL 2022 Points Table: ದಿಢೀರ್ ಎರಡನೇ ಸ್ಥಾನಕ್ಕೆ ಜಿಗಿದ ಗುಜರಾತ್, ಟಾಪ್​​ನಲ್ಲಿ ಯಾವ ತಂಡವಿದೆ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್