Bidar: ಕಾರಂಜಾ ಜಲಾಶಯ ಹಿನ್ನೀರಿನಿಂದ ಅಪಾರ ಬೆಳೆಹಾನಿ; ಅಧಿಕಾರಿಗಳ ಭೇಟಿ, ಪರಿಶೀಲನೆ

| Updated By: ganapathi bhat

Updated on: Sep 25, 2021 | 5:07 PM

Bidar News: ಕಳೆದ 3 ವರ್ಷಗಳಿಂದಲೂ ರೈತರು ನಷ್ಟ ಅನುಭವಿಸುತ್ತಿದ್ದರು. ಪದೇಪದೆ ಸಂಕಷ್ಟದ ಸುಳಿಯಲ್ಲಿ ಸಿಲುಕ್ತಿರುವ ಸ್ಥಳೀಯ ರೈತರು ಕಂಗಾಲಾಗಿದ್ದರು. ಈ ಬಗ್ಗೆ ಟಿವಿ9ನಲ್ಲಿ ನಿರಂತರ ವರದಿ ಪ್ರಸಾರವಾಗಿತ್ತು.

Bidar: ಕಾರಂಜಾ ಜಲಾಶಯ ಹಿನ್ನೀರಿನಿಂದ ಅಪಾರ ಬೆಳೆಹಾನಿ; ಅಧಿಕಾರಿಗಳ ಭೇಟಿ, ಪರಿಶೀಲನೆ
ಅಧಿಕಾರಿಗಳು, ಶಾಸಕರ ಭೇಟಿ, ಪರಿಶೀಲನೆ
Follow us on

ಬೀದರ್: ಕಾರಂಜಾ ಜಲಾಶಯದ ಹಿನ್ನೀರಿನಿಂದ ಅಪಾರ ಬೆಳೆ ಹಾನಿ ಉಂಟಾಗಿತ್ತು. ಈ ಬಗ್ಗೆ ಟಿವಿ9ನಲ್ಲಿ ನಿರಂತರ ವರದಿ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬೆಳೆ ಹಾನಿ ಪ್ರದೇಶಕ್ಕೆ ಕಾರಂಜಾ ಡ್ಯಾಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹುಮ್ನಾಬಾದ್ ಕ್ಷೇತ್ರದ ಶಾಸಕ ರಾಜಶೇಖರ್‌ ಪಾಟೀಲ್ ಸಹ ಭೇಟಿ, ಪರಿಶೀಲನೆ ನಡೆಸಿದ್ದಾರೆ. ರೈತರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಮರ್ಕಲ್ ಗ್ರಾಮಸ್ಥರಿಗೆ ಪರಿಹಾರ ಭರವಸೆ ನೀಡಿದ್ದಾರೆ.

ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ಕಾರಂಜಾ ಜಲಾಶಯದ ಹಿನ್ನೀರಿನಿಂದ ಬೆಳೆ ಹಾನಿ ಆಗಿತ್ತು. ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿದ್ದ ಬೆಳೆ ಹಾನಿ ಆಗಿತ್ತು. ಕಳೆದ 3 ವರ್ಷಗಳಿಂದಲೂ ರೈತರು ನಷ್ಟ ಅನುಭವಿಸುತ್ತಿದ್ದರು. ಪದೇಪದೆ ಸಂಕಷ್ಟದ ಸುಳಿಯಲ್ಲಿ ಸಿಲುಕ್ತಿರುವ ಸ್ಥಳೀಯ ರೈತರು ಕಂಗಾಲಾಗಿದ್ದರು. ಈ ಬಗ್ಗೆ ಟಿವಿ9ನಲ್ಲಿ ನಿರಂತರ ವರದಿ ಪ್ರಸಾರವಾಗಿತ್ತು.

ಮರವೇರಿ ಕುಳಿತಿದ್ದ ಮಂಗಗಳ ರಕ್ಷಣೆ
ಮರ್ಕಲ್​ ಗ್ರಾಮದಲ್ಲಿ ಮರವೇರಿ ಕುಳಿತಿದ್ದ ಮಂಗಗಳ ರಕ್ಷಣೆ ಮಾಡಲಾಗಿದೆ. ಬೀದರ್​ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ಮಂಗಗಳ ರಕ್ಷಣೆ ಮಾಡಲಾಗಿದೆ. ಸ್ವಯಂಪ್ರೇರಣೆಯಿಂದ ಮಂಗಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಟಿವಿ9ನಲ್ಲಿ ಸುದ್ದಿ ಪ್ರಸಾರವಾದ ನಂತರ ಮಂಗಗಳ ರಕ್ಷಣೆ ಮಾಡಲಾಗಿದೆ. ನೀರಿನಿಂದ ಆವೃತವಾಗಿದ್ದ ಜಾಲಿಮರದ ಬಳಿ ತೆರಳಿ ರಕ್ಷಣೆ ಮಾಡಲಾಗಿದೆ. ನಿತ್ರಾಣವಾಗಿದ್ದ ಮಂಗಗಳಿಗೆ ಗ್ರಾಮಸ್ಥರು ಆಹಾರ ನೀಡಿದ್ದಾರೆ.

ಇದನ್ನೂ ಓದಿ: Karnataka Dams Water Level: ಬೀದರ್​ನ ಕಾರಂಜಾ ಡ್ಯಾಂ ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಇದನ್ನೂ ಓದಿ: ಬೀದರ್​: ಚಳಕಾಪುರದ ಆಂಜನೇಯ ದೇವಸ್ಥಾನದಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ ನೆರವೇರಿಸಲ್ಪಡುತ್ತದೆ