ಬೀದರ್​: ರೌಡಿಶೀಟರ್​ಗಳ ಮನೆ ಮೇಲೆ ಪೊಲೀಸರ ದಾಳಿ: ನಶೆ ಎರಿಸುವ ಮೇಡಿಸೀನ್​ಗಳು ಪತ್ತೆ

|

Updated on: Mar 17, 2023 | 10:15 AM

ಬೀದರ್​ ಪೊಲೀಸರು ಬೆಳ್ಳಂ ಬೆಳಿಗ್ಗೆ ನಗರದ ಓಲ್ಡ್ ಸಿಟಿ ಮಾಂಗರ್ ವಾಡಿ ಗಲ್ಲಿಯಲ್ಲಿ ವಾಸಿಸುವ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ರೌಡಿಶೀಟರ್​ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ.

ಬೀದರ್​: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಾದ್ಯಂತ,  ಪೊಲೀಸರು ಫಿಲ್ಡ್​ಗೆ ಇಳಿದಿದ್ದು, ರೌಡಿಗಳು ಬಾಲ ಬಿಚ್ಚದಂತೆ ಖಡಕ್​ ಸೂಚನೆ ನೀಡುತ್ತಿದ್ದಾರೆ. ಅದರಂತೆ ಬೀದರ್​ (Bidar) ಪೊಲೀಸರು (Police)  ನಗರದ ಓಲ್ಡ್ ಸಿಟಿ ಮಾಂಗರ್ ವಾಡಿ ಗಲ್ಲಿಯಲ್ಲಿ ವಾಸಿಸುವ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ರೌಡಿಶೀಟರ್​ಗಳ (Rowdy Sheetrs) ಮನೆ ಮೇಲೆ ದಾಳಿ ಮಾಡಿದ್ದಾರೆ. ಎಸ್ಪಿ ಚನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಡಿಎಸ್​​ಪಿ ಕೆ.ಎಂ ಸತೀಶ್ ತಂಡ ದಾಳಿ ಮಾಡಿದ್ದು, ದಾಳಿ ವೇಳೆ ಕೆಲವು ಮನೆಗಳಲ್ಲಿ (Nitrazepam tablet ip-10) ಎಂಬ ಹೆಸರಿನ ನಶೆ ಎರಿಸುವ ಮೇಡಿಸೀನ್​ಗಳು ಪತ್ತೆಯಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಗಲಾಟೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರೌಡಿ ಶೀಟರ್​ಗಳಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 350 ಲೀಟರ್ ಸ್ಪೀರಿಟ್ ಜಪ್ತಿ

ಕೊಪ್ಪಳ: ಕನಕಗಿರಿ ಪೊಲೀಸರ ದಾಳಿ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 350 ಲೀಟರ್ ಸ್ಪೀರಿಟ್​ನ್ನು ಜಪ್ತಿ ಮಾಡಿದ್ದಾರೆ. ಕನಕಗಿರಿ ತಾಲೂಕಿನ ಆದಾಪೂರ ಗ್ರಾಮದಲ್ಲಿ ನಕಲಿ ಮಧ್ಯ ತಯಾರಿಸಲು ಸ್ಪೀರಿಟ್ ತಂದಿದ್ದು,  ರಾಮಣ್ಣ ಯಮುನಪ್ಪ ಎಂಬುವರ ಜಮೀನಿನಲ್ಲಿ ಸಂಗ್ರಹಿಸಡಲಾಗಿತ್ತು‌. ಜೊತೆಗೆ ಐಬಿ ಬ್ರ್ಯಾಂಡ್​​ನ ಲೆಬಲ್ ಗಳು ಕೂಡ ಪತ್ತೆ‌ಯಾಗಿವೆ.  ಕನಕಗರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್​ ಬಳಿ ಡ್ರಮ್​ನಲ್ಲಿ ಮಹಿಳೆ ಶವ ಪತ್ತೆ ಕೇಸ್: ಹಂತಕರ ಸುಳಿವು ನೀಡಿದ ಡ್ರಮ್​ ಮೇಲಿದ್ದ ಸ್ಟಿಕ್ಕರ್

ಸಿಸಿಬಿ ಪೊಲೀಸರ ದಾಳಿ, ಅಕ್ರಮವಾಗಿ ಸಂಗ್ರಹಿಸಿದ್ದ ದಾಸ್ತಾನು ಪತ್ತೆ

ಹುಬ್ಬಳ್ಳಿ: ಅಕ್ರಮವಾಗಿ ದಾಸ್ತಾನು ಸಂಗ್ರಹಿಸಿದ್ದ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಳಿಗೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಐವರನ್ನು ಬಂಧಿಸಿದ್ದಾರೆ. 450 ಚೀಲ ಅಕ್ಕಿ, 5 ಲಕ್ಷ ನಗದು ಹಾಗೂ 4 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ನಾರಾಯಣ ಬರಮನಿ ನೇತೃತ್ವದ ತಂಡ ದಾಳಿ ಮಾಡಿದ್ದು, ಒಟ್ಟು 9 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಸರ್ಕಾರದಿಂದ ಬಿಪಿಎಲ್ ಕಾರ್ಡದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು ಆರೋಪಿ ಷಣ್ಮುಖಪ್ಪ ಬೆಟಗೇರಿ 10 ರಿಂದ 15 ರೂಪಾಯಿ ಬೆಲೆಗೆ ಸಾರ್ವಜನಿಕರಿಂದ ಖರೀದಿಸುತ್ತಿದ್ದನು. ಬಳಿಕ ಮಂಜುನಾಥ ಹರ್ಲಾಪುರ ಅನ್ನುವವರಿಗೆ ಮಾರಾಟ ಮಾಡುತ್ತಿದ್ದನು. ಮಂಜುನಾಥ 35 ರಿಂದ 40 ರೂ. ಹೆಚ್ಚಿನ ಬೆಲೆಗೆ ಮಾಹಾರಾಷ್ಟ್ರಕ್ಕೆ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನು. ಈ ವಿಷಯ ತಿಳಿದ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವಾಸಿ ಮಂದಿರದಲ್ಲಿದ್ದ ಶ್ರೀಗಂಧದ ಮರ ಕಳ್ಳತನ

ವಿಜಯಪುರ: ಪ್ರವಾಸಿ ಮಂದಿರದಲ್ಲಿದ್ದ ಶ್ರೀಗಂಧದ ಮರವನ್ನು ಖದೀಮರು ಕತ್ತರಿಸಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದಿದೆ. ಶ್ರೀಗಂಧದ ಮರದ ಮೌಲ್ಯ ಸುಮಾರು 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬಸವನಬಾಗೇಬಾಡಿ ಪೊಲೀಸ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 am, Fri, 17 March 23