Accidentally murdered! ಅತ್ಯಂತ ಸಿನಿಮೀಯ ರೀತಿಯಲ್ಲಿ ಕೊಲೆ: ಹಣಕಾಸು ವಿಚಾರಕ್ಕೆ ಗೆಳೆಯರ ಗಲಾಟೆ, ಸಂಧಾನಕ್ಕೆ ಬಂದ ಯುವಕನನ್ನೇ ಮಿಸ್ಸಾಗಿ ಹತ್ಯೆ ಮಾಡಿಬಿಟ್ಟರು!
ಹಣಕಾಸಿನ ವಿಚಾರಕ್ಕೆ ಗೆಳೆಯರ ನಡುವೆ ನಡೆದಿತ್ತು ಗಲಾಟೆ, ಗಲಾಟೆಯ ರಾಜಿ ಸಂಧಾನಕ್ಕೆ ಹೋಗಿದ್ದವನೇ ಕೊಲೆಯಾದ. ಸಿನಿಮೀಯ ರೀತಿಯಲ್ಲಿ ಅಪಘಾತದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹಣಕಾಸಿನ (Finance matter) ವಿಚಾರಕ್ಕೆ ಗೆಳೆಯರ ನಡುವೆ (Friends fight) ನಡೆದಿತ್ತು ಗಲಾಟೆ, ಗಲಾಟೆಯ ರಾಜಿ ಸಂಧಾನಕ್ಕೆ ಹೋಗಿದ್ದವನೇ ಕೊಲೆಯಾದ. ಸಿನಿಮೀಯ ರೀತಿಯಲ್ಲಿ ಅಪಘಾತದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶವಗಾರದಲ್ಲಿರುವ ಮೃತದೇಹ, ಮಗನನ್ನ ಕಳೆದುಕೊಂಡ ದುಖಃದಲ್ಲಿ ಕಣ್ಣೀರಿಡುತ್ತಿರುವ ತಂದೆ ಹಾಗೂ ಪೋಷಕರು, ರಸ್ತೆ ಬದಿಯಲ್ಲಿ ನಿಂತು ತನಿಖೆ ನಡೆಸುತ್ತಿರುವ ಪೊಲೀಸರು… ಈ ದೃಶ್ಯಗಳೆಲ್ಲಾ ಕಂಡು ಬಂದಿದ್ದು ಬೆಂಗಳೂರು ಉತ್ತರ ತಾಲೂಕು ಮಾದನಾಯಕನಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ (Madanayakanahalli police) ಬೈರೆಗೌಡನಹಳ್ಳಿಯಲ್ಲಿ. ಮೇಲಿನ ಫೋಟೊದಲ್ಲಿ ಕಾಣುತ್ತಿರುವ ವ್ಯಕ್ತಿ 30 ವರ್ಷದ ಚಂದ್ರಶೇಖರ್. ಕಳೆದ ರಾತ್ರಿ ಪಲ್ಸರ್ ಬೈಕ್ ನಲ್ಲಿ ಬೆಂಗಳೂರು ಉತ್ತರ ತಾಲೂಕು ಬೈರೆಗೌಡನಹಳ್ಳಿ ರಸ್ತೆಯ ಕಡೆಯಿಂದ ಮನೆಗೆ ಹೊಗುತ್ತಿದ್ದಾಗ ಹಿಂಬದಿಯಿಂದ ಬಂದ ಸ್ಕಾರ್ಪಿಯೋ ಕಾರ್ ನಲ್ಲಿದ್ದ ಸ್ನೇಹಿತರಾದ ಚಂದನ್ ಹಾಗೂ ಗೌತಮ್ ಕಾರಿನಿಂದ ಗುದ್ದಿ ಸಿನಿಮೀಯ ರೀತಿಯಲ್ಲಿ ಕೊಲೆಗೈದಿದ್ದಾರೆ. ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದ್ದಾರೆ (Murder) ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು ಮೊನ್ನೆ ಬುಧವಾರ ಬೆಳಗ್ಗೆ ಚಂದ್ರಶೇಖರ್ ಸ್ನೇಹಿತ ಲೋಕೇಶ್ ಹಾಗೂ ಆರೋಪಿ ಚಂದನ್ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆ ನಡೆದಿದೆ. ಸಂಜೆ ಲೋಕೇಶ್ ಮಾತುಕತೆ ನಡೆಸಲು ಹತ್ಯೆಗೀಡಾದ ಚಂದ್ರಶೇಖರನನ್ನ ಕರೆದುಕೊಂಡು ಹೋಗಿದ್ದಾನೆ. ಸ್ಥಳೀಯ ಲೇಔಟ್ ಒಂದರಲ್ಲಿ ಎಣ್ಣೆ ಪಾರ್ಟಿ ಮಾಡಿ ಮಾತುಕತೆ ಆಡಿ ಕೊನೆಗೆ ಚಂದ್ರಶೇಖರ್ ಇಬ್ಬರ ನಡುವೆ ರಾಜಿ ಸಂಧಾನ ನಡೆಸಿದಿದ್ದಾನೆ ಎನ್ನಲಾಗುತ್ತಿದೆ.
ರಾಜಿ ಸಂಧಾನದ ಬಳಿಕ ಡಿಯೋ ಸ್ಕೂಟಿಯಲ್ಲಿ ಚಂದ್ರಶೇಖರ್ ಮತ್ತು ಲೋಕೇಶ್, ಪಲ್ಸರ್ ಬೈಕ್‌ನಲ್ಲಿ ಅಭಿ, ಶಶಾಂಕ್ ಹಾಗೂ ಸ್ಕಾರ್ಪಿಯೋ ಕಾರಿನಲ್ಲಿ ಆರೋಪಿಗಳಾದ ಚಂದನ್ ಹಾಗೂ ಗೌತಮ್ ತೆರಳುತ್ತಿದ್ದ ವೇಳೆ ಮೊದಲೇ ಪ್ಲಾನ್ ಮಾಡಿದಂತೆ ಚಂದ್ರಶೇಖರ್ ತೆರಳುತ್ತಿದ್ದ ಡಿಯೋ ಸ್ಕೂಟಿಗೆ ಹಿಂಬದಿಯಿಂದ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿದೆ.
ನಂತರ ಲೋಕೇಶ್‌ನನ್ನ ಕೊಲೆ ಮಾಡಲು ಪ್ಲಾನ್ ಮಾಡಿದ್ದವರು, ಮಿಸ್ ಆಗಿ ಚಂದ್ರಶೇಖರ್‌ನನ್ನ ಲೋಕೇಶ್ ಎಂದು ಬಗೆದು ಕಾರು ಹತ್ತಿಸಿ ಕೊಲೆ ಮಾಡಿದ್ದಾರೆ ಎನ್ನುತ್ತಿದೆ ಪೊಲೀಸರ ಪ್ರಾಥಮಿಕ ಹಂತದ ತನಿಖೆ.
ಇದನ್ನೂ ಓದಿ:
ಆತ್ಮೀಯ ಸ್ನೇಹಿತರೇ ಆಗಿರಲಿ ಅಥವಾ ಆತ್ಮ ಸಂಗಾತಿಯಾಗಿರಲಿ, ಈ ವಿಷಯಗಳನ್ನು ಚರ್ಚಿಸಬೇಡಿ
ಕಾರು ಚಲಾಯಿಸುತ್ತಿದ್ದ ಚಂದನ್ ಹಾಗೂ ಗೌತಮ್ ವಿರುದ್ದ ಕೊಲೆ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಸಹ ಪರಿಶೀಲನೆ ನಡೆಸುತ್ತಿದ್ದು, ಪೊಲೀಸರ ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬೀಳಬೇಕಿದೆ.
ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ