108 ಆ್ಯಂಬುಲೆನ್ಸ್ ಸಿಬ್ಬಂದಿ ಕಮಿಷನ್ ದಂಧೆ: ಬಡರೋಗಿಗಳ ಪರದಾಟ, ಒಂದೇ ದಿನಕ್ಕೆ 30 ಸಾವಿರ ರೂ. ಬಿಲ್
ಖಾಸಗಿ ಆಸ್ಪತ್ರೆಯವರು ನೀಡುವ ಕಮಿಷನ್ ಆಸೆಗಾಗಿ ಪ್ರತಿ ಬಾರಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ 108 ಸಿಬ್ಬಂದಿ ದಾಖಲಿಸುತ್ತಿದ್ದ. ಕಮಿಷನ್ ಆಸೆಗಾಗಿ ರೋಗಿಗಳೊಂದಿಗೆ ಚೆಲ್ಲಾಟ ಮಾಡಿದ್ದು, ಬಡರೋಗಿಗಳು ಪರದಾಟವಂತಾಗಿದೆ.
ಬೆಂಗಳೂರು ಗ್ರಾಮಾಂತರ: 108 ಆ್ಯಂಬುಲೆನ್ಸ್ ಸಿಬ್ಬಂದಿ ಕಮಿಷನ್ (commission) ಆಸೆಗಾಗಿ ಬಡರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಂದೇ ದಿನಕ್ಕೆ 30 ಸಾವಿರ ರೂ. ಬಿಲ್ ಮಾಡಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ. 108 ಆ್ಯಂಬುಲೆನ್ಸ್ ಸಿಬ್ಬಂದಿ ಕಮಿಷನ್ ದಂಧೆ ಟಿವಿ9 ಕ್ಯಾಮರಾದಲ್ಲಿ ಸೆರೆ ಆಗಿದೆ. ಖಾಸಗಿ ಆಸ್ಪತ್ರೆಯವರು ನೀಡುವ ಕಮಿಷನ್ ಆಸೆಗಾಗಿ ಪ್ರತಿ ಬಾರಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ 108 ಸಿಬ್ಬಂದಿ ದಾಖಲಿಸುತ್ತಿದ್ದ. ಕಮಿಷನ್ ಆಸೆಗಾಗಿ ರೋಗಿಗಳೊಂದಿಗೆ ಚೆಲ್ಲಾಟ ಮಾಡಿದ್ದು, ಬಡರೋಗಿಗಳು ಪರದಾಟವಂತಾಗಿದೆ. 30 ಸಾವಿರ ರೂ. ಬಿಲ್ ನೋಡಿ ಬಡರೋಗಿ ಸಂಬಂಧಿಕರು ಸುಸ್ತಾಗಿದ್ದು, ಆ್ಯಂಬುಲೆನ್ಸ್ ಸಿಬ್ಬಂದಿ ವಿರುದ್ಧ ರೋಗಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಆಸ್ಪತ್ರೆ ಡಿಸ್ಕೌಂಟ್ ನೀಡಿ ಕಳಿಹಿಸಿದೆ. ಆಸ್ಪತ್ರೆ ಬಳಿ ಟಿವಿ9 ಕ್ಯಾಮರಾ ಕಂಡು ಆ್ಯಂಬುಲೆನ್ಸ್ ಸಿಬ್ಬಂದಿ ತಬ್ಬಿಬ್ಬಾಗಿದ್ದು, ರೋಗಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಸಿಬ್ಬಂದಿ ವಿರುದ್ಧ ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕರಿಗೆ ನೆರವಾದ ಸಚಿವರು
ಕೋಲಾರ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕರಿಗೆ ತಮ್ಮ ಬೆಂಗಾವಲು ಪಡೆ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸುವ ಮೂಲಕ ಸಚಿವ ಆರ್.ಅಶೋಕ್ ಮತ್ತು ಮುನಿಸ್ವಾಮಿ ನೆರವಾಗಿದ್ದಾರೆ. ಕೋಲಾರದ ಹೊರವಲಯದ ಅರಾಭಿಕೊತ್ತನೂರು ಹೆದ್ದಾರಿಯಲ್ಲಿ ಸಚಿವರು ತೆರಳುತಿದ್ದರು. ಈ ವೇಳೆ ಬೈಕ್ ಅಪಘಾತವಾಗಿ ಕೋಲಾರದ ಅಖೀಬ್ ಹಾಗೂ ಆತನ ಸ್ನೇಹಿತ ಗಾಯಗೊಂಡಿದ್ದರು. ಇದನ್ನು ಗಮನಿಸಿದ ಸಚಿವ ಆರ್.ಅಶೋಕ್ ಹಾಗೂ ಮುನಿಸ್ವಾಮಿ, ಇಬ್ಬರು ಯುವಕರನ್ನು ತಮ್ಮ ಬೆಂಗಾವಲು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ರವಾನೆ ಮಾಡಲು ಹೇಳಿದ್ದಾರೆ.
ಇದನ್ನೂ ಓದಿ: Bagalakote: ಕೊಟ್ಟ ಸಾಲ ಸ್ನೇಹಿತರು ವಾಪಸ್ ನೀಡದಿದ್ದಕ್ಕೆ ಪಶುವೈದ್ಯ ಆತ್ಮಹತ್ಯೆ!
ಇನ್ನು ಆರ್.ಅಶೋಕ್ ಹಾಗೂ ಮುನಿಸ್ವಾಮಿ ವಿಜಯ ಸಂಕಲ್ಪ ಯಾತ್ರೆಗೆ ತೆರಳುತ್ತಿದ್ದಾಗ, ದಾರಿ ಬದಿ ಅಪಘಾತ ಗಮನಿಸಿ, ನಮಗೆ ಎಸ್ಕಾರ್ಟ್ ಬೇಡ ಮೊದಲು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಬ್ಬರು ನಾಯಕರ ಕಳಕಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:37 pm, Thu, 16 March 23