ತಂಬಾಕು ನಿಯಂತ್ರಣದಲ್ಲಿ ಬೆಂಗಳೂರು ಮೇಲುಗೈ: ಡಬ್ಲ್ಯುಎಚ್ಒನಿಂದ 1.23 ಕೋಟಿ ರೂ. ಬಹುಮಾನ
ತಂಬಾಕು ನಿಯಂತ್ರಣದಿಂದ ಸಾಂಕ್ರಾಮಿಕ ರೋಗಗಳಲ್ಲದ ಮತ್ತು ಗಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಧನೆ ಮಾಡಿ ಗುರುತಿಸಲ್ಪಟ್ಟ ಐದು ಜಾಗತಿಕ ನಗರಗಳಲ್ಲಿ ಬೆಂಗಳೂರು ಕೂಡ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರು: ತಂಬಾಕು (tobacco) ನಿಯಂತ್ರಣದಿಂದ ಸಾಂಕ್ರಾಮಿಕ ರೋಗಗಳಲ್ಲದ ಮತ್ತು ಗಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಧನೆ ಮಾಡಿ ಗುರುತಿಸಲ್ಪಟ್ಟ ಐದು ಜಾಗತಿಕ ನಗರಗಳಲ್ಲಿ ಬೆಂಗಳೂರು (Bengaluru) ಕೂಡ ಸ್ಥಾನ ಪಡೆದುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಜಾಗತಿಕ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಬೆಂಗಳೂರಿಗೆ 1,50,000 ಡಾಲರ್ ಮೊತ್ತದ ಬಹುಮಾನ ಲಭಿಸಿದೆ. ಉರುಗ್ವೆಯ ಮಾಂಟೆವಿಡಿಯೊ ಅವರೊಂದಿಗೆ 2023 ರ ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿಯನ್ನು ಬೆಂಗಳೂರು ಬುಧವಾರ ಪಡೆದುಕೊಂಡಿದೆ. ಮೆಕ್ಸಿಕೊ ನಗರ, ಕೆನಡಾದ ವ್ಯಾಂಕೋವರ್ ಮತ್ತು ಗ್ರೀಸ್ನ ಅಥೆನ್ಸ್ನ ಲಂಡನ್ನಲ್ಲಿ ನಡೆದ ಆರೋಗ್ಯಕರ ನಗರ ಶೃಂಗಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಜನರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿದ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಯಲು ಸಮರ್ಥನೀಯ ಮತ್ತು ಶಾಶತ್ವವಾದ ಉಪಕ್ರಮಗಳನ್ನು ಕೈಗೊಂಡ ನಗರಗಳನ್ನು ಗುರುತಿಸಲಾಗಿದೆ.
ಕರ್ನಾಟಕ ರಾಜಧಾನಿ ಬೆಂಗಳೂರು ತಂಬಾಕು ನಿಯಂತ್ರಣ, ಅದರಲ್ಲಿಯೂ ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ ಮತ್ತು ಸಾರ್ವಜನಿಕ ಧೂಮಪಾನ ನಿಷೇಧಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಆದೇಶಗಳ ಅನುಸಾರ ಸುಧಾರಿಸಲು ಪ್ರಯತ್ನಗಳಿಗಾಗಿ ಬೆಂಗಳೂರಿಗೆ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ: Bengaluru: ಬೆಂಗಳೂರಿನ ತುರಹಳ್ಳಿ ಅರಣ್ಯದಲ್ಲಿ ಕಾಡ್ಗಿಚ್ಚು: 20 ಎಕರೆ ಭಸ್ಮ, ಜಿಂಕೆಗಳು ಬೆಂಕಿಗೆ ಆಹುತಿ
ಪಾಲುದಾರಿಕೆಯಲ್ಲಿ ವಿಶ್ವದಾದ್ಯಂತ ಮೇಯರ್‌ಗಳ ಬೆಂಬಲ
ಮೇಯರ್‌ಗಳು ತಮ್ಮ ನಾಗರಿಕರ ಆರೋಗ್ಯವನ್ನು ಹೇಗೆ ರಕ್ಷಿಸಲು ಪ್ರಬಲ ಪ್ರಗತಿಯನ್ನು ಸಾಧಿಸಬಹುದು ಎಂಬುದಕ್ಕೆ ಈ ಐದು ನಗರಗಳು ಸಾಕ್ಷಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಉತ್ತಮ ಆರೋಗ್ಯಕ್ಕೆ ಉತ್ತೇಜಿಸುವ ಮತ್ತು ಆರೋಗ್ಯ ರಕ್ಷಿಸುವ ನಗರಳನ್ನು ನಿರ್ಮಿಸಲು ವಿಶ್ವದಾದ್ಯಂತ ಮೇಯರ್‌ಗಳನ್ನು ಬೆಂಬಲಿಸುವ ಮೂಲಕ ಪಾಲುದಾರಿಕೆಯಲ್ಲಿ ಕೆಲಸ ಮಾಡಲು WHO ಬದ್ಧವಾಗಿದೆ ಎಂದು ತಿಳಿಸಿದೆ.
ಮಾದಕ ದ್ರವ್ಯ ನಿಯಂತ್ರಣ ಕ್ರಮಗಳಿಗಾಗಿ ಅಥೆನ್ಸ್ ನಗರಕ್ಕೆ ಪ್ರಶಸ್ತಿ ಲಭಿಸಿದೆ. ಜನನಿಬಿಡ ರಸ್ತೆಯಲ್ಲಿ ಬೈಕ್ ಮಾರ್ಗವನ್ನು ಪ್ರಾರಂಭಿಸುವ ಮೂಲಕ ರಸ್ತೆ ಸುರಕ್ಷತೆ ಮತ್ತು ಸಕ್ರಿಯ ಚಲನಶೀಲತೆಯನ್ನು ಸುಧಾರಿಸಿದಕ್ಕಾಗಿ ಮೆಕ್ಸಿಕೋ ನಗರಕ್ಕೂ ಪ್ರಶಸ್ತಿ ಸಿಕ್ಕಿದೆ. ಹಾಗಾಗಿ ಮೆಕ್ಸಿಕೋ ನಗರದಲ್ಲಿ ಸೈಕ್ಲಿಸ್ಟ್ಗಳ ಪ್ರಮಾಣ ಶೇಕಡ 275 ಪ್ರತಿಶತ ಹೆಚ್ಚಳವಾಗಿದೆ.
ಇದನ್ನೂ ಓದಿ: KPTCL ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ನಿರ್ಧಾರ; ಇಂದೇ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದ ಸಿಎಂ ಬೊಮ್ಮಾಯಿ
ಸರ್ಕಾರಿ ಕಚೇರಿಗಳು ಮತ್ತು ಕೆಲವು ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಆಹಾರ ತಯಾರಿಕೆ ಮತ್ತು ಮಾರಾಟದಲ್ಲಿ ಪೌಷ್ಟಿಕಾಂಶದ ಮಾನದಂಡಗಳನ್ನು ಹೊಂದಿರುವುದಕ್ಕಾಗಿ ಮಾಂಟೆವಿಡಿಯೊ ನಗರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಅದೇ ರೀತಿಯಾಗಿ ಜನರ ಆರೋಗ್ಯ ಸೂಚಕಗಳ ಜಾಡು ಹಿಡಿಯುವ ಆನ್ಲೈನ್ ಸಾರ್ವಜನಿಕ ಆರೋಗ್ಯ ಡೇಟಾ ಉಪಕರಣವನ್ನು ಪ್ರಾರಂಭಿಸುವ ಮೂಲಕ ಸಾರ್ವಜನಿಕ ಆರೋಗ್ಯ ಡೇಟಾವನ್ನು ಸುಲಭವಾಗಿ ದೊರೆಯುವಂತೆ ಮಾಡಿದ್ದಕ್ಕಾಗಿ ಕೆನಡಾದ ವ್ಯಾಂಕೋವರ್ ನಗರವು ಪ್ರಶಸ್ತಿಗೆ ಭಾಜನವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:20 pm, Thu, 16 March 23