ತಿನ್ನೋಕ್ ಆಗ್ತಿಲ್ಲ.. ಬಿಡೋಕ್ ಆಗ್ತಿಲ್ಲ.. ಸರ್ಕಾರಿ ಹಾಸ್ಟೆಲ್​​ನಲ್ಲಿ ಗುಣಮಟ್ಟದ ಆಹಾರಕ್ಕೆ ತತ್ವಾರ!

|

Updated on: Jan 03, 2020 | 6:40 AM

ಬೀದರ್: ಕೊಳೆತಿರೋ ತರಕಾರಿ. ಬೇಕಾಬಿಟ್ಟಿ ರೊಟ್ಟಿ, ಅನ್ನ, ಬೇಯಿಸಿ ಬಡಿಸ್ತಿದ್ದಾರೆ. ಊಟ ತಿನ್ಲೋ ಬೇಡ ಅಂತ ತಿಂತಿದ್ದಾರೆ. ಕುಡಿಯೋಕೆ ಶುದ್ಧ ನೀರಿಲ್ಲ. ನೆಮ್ಮದಿಯಿಂದಿರೋಕೆ ಒಂದು ಸೂರಿಲ್ಲ. ಹಾಸ್ಟೆಲ್ ಪಕ್ಕದಲ್ಲೇ ಕಸದ ರಾಶಿ. ಜನಪ್ರತಿನಿಧಿಗಳು ವಿಸಿಟ್ ಕೊಟ್ಟು ಪರಿಶೀಲನೆ ನಡೆಸ್ತಿದ್ದಾರೆ. ಸರ್ಕಾರಿ ಹಾಸ್ಟೆಲ್​​ನಲ್ಲಿ ಗುಣಮಟ್ಟದ ಆಹಾರಕ್ಕೆ ತತ್ವಾರ..! ಬೀದರ್ ಜಿಲ್ಲೆಯಲ್ಲಿರೋ ಹಾಸ್ಟೆಲ್​​ಗಳಲ್ಲಿ ಸ್ಟೂಡೆಂಟ್ಸ್​ಗಳು ಸರಿಯಾದ ಊಟ, ತಿಂಡಿ ಸಿಗದೆ ಪರದಾಡ್ತಿದ್ದಾರೆ. ಅಲ್ಪಸಂಖ್ಯಾತ, ಸಮಾಜಕಲ್ಯಾಣ, ಹಿಂದುಳಿದವರ್ಗ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗ್ತಿದೆ. ಹಾನಿಕಾರಕ ಮತ್ತು ನಕಲಿ […]

ತಿನ್ನೋಕ್ ಆಗ್ತಿಲ್ಲ.. ಬಿಡೋಕ್ ಆಗ್ತಿಲ್ಲ.. ಸರ್ಕಾರಿ ಹಾಸ್ಟೆಲ್​​ನಲ್ಲಿ ಗುಣಮಟ್ಟದ ಆಹಾರಕ್ಕೆ ತತ್ವಾರ!
Follow us on

ಬೀದರ್: ಕೊಳೆತಿರೋ ತರಕಾರಿ. ಬೇಕಾಬಿಟ್ಟಿ ರೊಟ್ಟಿ, ಅನ್ನ, ಬೇಯಿಸಿ ಬಡಿಸ್ತಿದ್ದಾರೆ. ಊಟ ತಿನ್ಲೋ ಬೇಡ ಅಂತ ತಿಂತಿದ್ದಾರೆ. ಕುಡಿಯೋಕೆ ಶುದ್ಧ ನೀರಿಲ್ಲ. ನೆಮ್ಮದಿಯಿಂದಿರೋಕೆ ಒಂದು ಸೂರಿಲ್ಲ. ಹಾಸ್ಟೆಲ್ ಪಕ್ಕದಲ್ಲೇ ಕಸದ ರಾಶಿ. ಜನಪ್ರತಿನಿಧಿಗಳು ವಿಸಿಟ್ ಕೊಟ್ಟು ಪರಿಶೀಲನೆ ನಡೆಸ್ತಿದ್ದಾರೆ.

ಸರ್ಕಾರಿ ಹಾಸ್ಟೆಲ್​​ನಲ್ಲಿ ಗುಣಮಟ್ಟದ ಆಹಾರಕ್ಕೆ ತತ್ವಾರ..!
ಬೀದರ್ ಜಿಲ್ಲೆಯಲ್ಲಿರೋ ಹಾಸ್ಟೆಲ್​​ಗಳಲ್ಲಿ ಸ್ಟೂಡೆಂಟ್ಸ್​ಗಳು ಸರಿಯಾದ ಊಟ, ತಿಂಡಿ ಸಿಗದೆ ಪರದಾಡ್ತಿದ್ದಾರೆ. ಅಲ್ಪಸಂಖ್ಯಾತ, ಸಮಾಜಕಲ್ಯಾಣ, ಹಿಂದುಳಿದವರ್ಗ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗ್ತಿದೆ. ಹಾನಿಕಾರಕ ಮತ್ತು ನಕಲಿ ಪದಾರ್ಥಗಳನ್ನು ಬೆರೆಸೋ ದಂಧೆ ಕೂಡ ನಡೀತಿದೆ. ಹಾಸ್ಟೆಲ್​​ನಲ್ಲಿರೋ ವಿದ್ಯಾರ್ಥಿಗಳು ಪೌಷ್ಠಿಕ ಆಹಾರ ಸಿಗದೆ ಪರದಾಡ್ತಿದ್ದು ಪ್ರತಿನಿತ್ಯ ತಿನ್ಲೋ ಬೇಡೋ ಅಂತ ತಿಂತಿದ್ದಾರೆ. ಇನ್ನು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಸ್ಟೆಲ್​​ಗಳಿಗೆ ಭೇಟಿ ನೀಡಿದ್ರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ವಂತೆ.

ಇನ್ನು, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ 2006, ನಿಯಮ ಮತ್ತು ನಿಬಂಧನೆಗಳು 2011ನ್ನು ಕೇಂದ್ರ ಸರಕಾರ ದೇಶದಾದ್ಯಂತ ಜಾರಿಗೆ ತಂದಿದೆ. ಗುಣಮಟ್ಟದ ಆಹಾರ ನೀಡ್ಬೇಕು ಅಂತ ವಾರ್ನಿಂಗ್ ಕೂಡ ಮಾಡಿದೆ. ಆದ್ರೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮೆಟ್ರಿಲ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ಸೇರಿ ಹಲವು ಹಾಸ್ಟೆಲ್​​ಗಳಲ್ಲಿ ವಿದ್ಯಾರ್ಥಿಗಳು ಪರದಾಡ್ತಿದ್ದಾರೆ. ಅಲ್ಲದೇ, ಮೊಟ್ಟೆ, ಬಾಳೆಹಣ್ಣು, ಬಿಸ್ಕತ್ ಪ್ಯಾಕೇಟ್​​ಗಳು, ತರಕಾರಿಗಳನ್ನ ಕದ್ದು ಮುಚ್ಚಿ ಮಾರಾಟ ಮಾಡಿ ಹಣ ಜೇಬಿಗಿಳಿಸ್ತಿದ್ದಾರಂತೆ. ಜಿಲ್ಲಾ ಪಂಚಾಯತ್ ಸಿಇಒ ಕೂಡ ಹಾಸ್ಟೆಲ್​​ಗಳಿಗೆ ವಿಸಿಟ್ ಕೊಟ್ಟು ಅಧಿಕಾರಿಗಳಿಗೆ ಕ್ಲಾಸ್ ತಗೊಂಡ್ರು.

ಒಟ್ನಲ್ಲಿ ಬಡ ಮಕ್ಕಳು ಸರ್ಕಾರಿ ಹಾಸ್ಟೆಲ್​​ನಲ್ಲಿ ಇದ್ಕೊಂಡು ಭವಿಷ್ಯ ರೂಪಿಸಿಕೊಳ್ಳೋಣ ಅಂತ ಕನಸು ಕಂಡಿದ್ರೆ, ಇವರ ಹಸಿವಿನ ಜೊತೆ ವಾರ್ಡನ್​, ಅಧಿಕಾರಿಗಳು ಚೆಲ್ಲಾಟವಾಡ್ತಿದ್ದಾರೆ.

Published On - 6:39 am, Fri, 3 January 20