ಬೀದರ್: ದಲಿತ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಟೊಂಕಕಟ್ಟಿ ನಿಂತಿದೆ. ಹತ್ತಾರು ಯೋಜನೆಗಳನ್ನ ಜಾರಿಗೆ ತಂದಿದ್ದು ಈ ಯೋಜನೆಗಳ ಮೂಲಕ ಸಹಾಯ ಧನ ನೀಡ್ತಿದೆ. ಅಷ್ಟೇ ಅಲ್ಲ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸೇರ ಸಾಲ ಯೋಜನೆ ಫಲಾನುಭವಿಗಳಿಗೆ ನೀಡ್ತಿದೆ. ಆದ್ರೆ ಇದ್ರಲ್ಲೂ ನುಂಗಣ್ಣರ ಕಣ್ಣು ಬಿದ್ದಿದ್ದು, ನೂರಾರು ಮಹಿಳೆಯರಿಗೆ ವಂಚನೆ ಮಾಡಲಾಗಿದೆ.
ನೇರ ಸಾಲ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ!
ನೂರಾರು ಫಲಾನುಭವಿಗಳಿಗೆ ಹಣ ನೀಡದೆ ವಂಚನೆ!
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯವ್ರಿಗೆ ಎಮ್ಮೆ, ಕುರಿ, ಹಸು ಕೊಳ್ಳಲು ನೇರ ಸಾಲಯೋಜನೆ ಅಡಿಯಲ್ಲಿ 40 ಸಾವಿರ ಸಹಾಯಧನ ನೀಡಲಾಗುತ್ತೆ. ಈ ಹಣದಲ್ಲಿ ತಮಗೆ ಅನುಕೂಲವಾಗೋ ರೀತಿಯಲ್ಲಿ ಎಮ್ಮೆ, ಹಸು, ಕುರಿಗಳನ್ನ ಕೊಂಡುಕೊಂಡು ಅದ್ರಿಂದ ಬರೋ ಆದಾಯದಿಂದ ಜೀವನ ಸಾಗಿಸಬೇಕು ಅಂತ ಸರ್ಕಾರ ಸಾಲದ ರೂಪದಲ್ಲಿ ಹಣ ನೀಡುತ್ತೆ. ಶೇ.90ರಷ್ಟು ಸಬ್ಸಿಡಿ ರೂಪದಲ್ಲಿ ಇನ್ನುಳಿದ ಶೇಕಡಾ 10ರಷ್ಟು ಹಣವನ್ನ ಸಾಲದ ರೂಪದಲ್ಲಿ ಕೊಡುತ್ತೆ. ಆದ್ರೆ ದಾಖಲೆಗಳನ್ನ ಪಡೆದು ಫಲಾನುಭವಿಗಳ ಅಕೌಂಟ್‌ಗೆ ಹೋಗುವ ಹಣವನ್ನ ತಮ್ಮ ಜೇಬಿಗಿಳಿಸಿಕೊಳ್ಳಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರನ್ನ ಕೇಳಿದ್ರೆ ಮೇಲಾಧಿಕಾರಿಗಳಿಗೂ ಈ ವಿಚಾರ ಗಮನಕ್ಕೆ ಬಂದಿದೆ ಅಂತಿದ್ದಾರೆ.
Published On - 1:44 pm, Mon, 13 January 20