ಬೀದರ್: ತಲೆಗೆ ಹಾಗೂ ಮರ್ಮಾಂಗಕ್ಕೆ ಕಲ್ಲಿನಿಂದ ಜಜ್ಜಿ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನರಸಿಂಗ್ಪುರ ತಾಂಡಾ ಬಳಿ ನಡೆದಿದೆ. ಮೊನ್ನೆ (ನವೆಂಬರ್ 8, ಸೋಮವಾರ) ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯ್ ಕುಮಾರ್ ಧೋಂಡಿಬಾ ಟಿಳೇಕರ್ (49) ರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಇವರು ಔರಾದ್ ತಾಲೂಕಿನ ಕರಂಜಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಳೆದ ಏಳು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಇನ್ನೂ ವಿಜಯ್ ಕುಮಾರ್ಗೆ ಮದುವೆಯಾಗಿದ್ದು, ಗಂಡ ಹೆಂಡತಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಅಲ್ಲದೇ ವಿಧವಾ ವಿಚ್ಚೇದನಕ್ಕೂ ಕೂಡಾ ಇವರ ಹೆಂಡತಿ ಕೋರ್ಟ್ನಲ್ಲಿ ಅರ್ಜಿಹಾಕಿದ್ದಾರೆ.
ವಿಜಯ್ ಕುಮಾರ್ ಪತ್ನಿ ಬೀದರ್ನಲ್ಲಿಯೇ ವಾಸವಾಗಿದ್ದಾರೆ. ಆದರೆ ಕೊಲೆಯಾದ ವಿಜಯ್ ಕುಮಾರ್ ಔರಾದ್ ಪಟ್ಟಣದ ಲಿಡ್ಕರ್ ಕಾಲೋನಿಯಲ್ಲಿ ವಾಸವಾಗಿದ್ದರು. ಇನ್ನೂ ಮೊದಲನೆಯ ಹೆಂಡತಿಗೆ ವಿಚ್ಚೇದನ ಕೊಟ್ಟು ಎರಡನೇಯ ಮದುವೆಯಾಗಲು ವಿಜಯ್ ಕುಮಾರ್ ತಯಾರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಅಷ್ಟರಲ್ಲಾಗಲೇ ವಿಜಯ್ ಕುಮಾರ್ ಭೀಕರವಾಗಿ ಹತ್ಯೆಯಾಗಿದ್ದಾರೆ. ಇನ್ನೂ ಕೊಲೆಯಾದ ವಿಜಯ್ ಕುಮಾರ್ ವಿಪರಿತವಾಗಿ ಕುಡಿಯುತ್ತಿದ್ದರು ಎಂದು ಹೇಳಲಾಗುತ್ತಿದೆ ಮತ್ತು ಕೌಟುಂಬಿಕ ಕಲಹವೇ ಇವರ ಕೊಲೆಗೆ ಕಾರಣವಾಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಔರಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರರನ್ನು ಹಿಡಿಯಲು ಪೋಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪೊಲೀಸ್ ಪೇದೆ ಮಗನ ಬರ್ಬರ ಕೊಲೆ ಪ್ರಕರಣ; 6 ಆರೋಪಿಗಳು ಅರೆಸ್ಟ್
Murder: ರಾಡ್‌ನಿಂದ ಪತಿ ಹತ್ಯೆಗೈದು ಪೊಲೀಸರ ಮುಂದೆ ಶರಣಾದ 2ನೇ ಪತ್ನಿ, ಕೊಲೆಯ ಹಿಂದೆ ಆಸ್ತಿ ಕಬಳಿಕೆ ಆರೋಪ