ಬೀದರ್: ಎಸ್ಡಿಪಿಐ-ಪಿಎಫ್ಐ (SDPI-PFI) ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಎಸ್ಡಿಪಿಐ ಜೊತೆ ಕಾಂಗ್ರೆಸ್ (Congress) ಕೈ ಜೋಡಿಸಿ ಕಾರ್ಪೊರೇಷನ್ ಚುನಾವಣೆ ಎದುರಿಸಿದೆ. ಕಾಂಗ್ರೆಸ್ನ ಬಿ ಟಿಮ್ನಂತೆ ಎಸ್ಡಿಪಿಐ-ಪಿಎಫ್ಐ ಕೆಲಸ ಮಾಡುತ್ತಿವೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ. ಎಸ್ಡಿಪಿಐ-ಪಿಎಫ್ಐ, ಕಾಂಗ್ರೆಸ್ ಜೊತೆ ಸೇರಿ ತಮ್ಮ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುತ್ತವೆ. ಪಿಎಫ್ಐ ಕಾರ್ಯಕರ್ತರು ಎಸ್ಡಿಪಿಐ ಜೊತೆ ಸೇರಿಕೋಳ್ಳುತ್ತಿರುವುದು ಜಗತ್ ಜಾಹೀರಾತಾಗಿದೆ. ಎಸ್ಡಿಪಿಐ ವಿರುದ್ಧ ಕಾಂಗ್ರೆಸ್ ಮಾತನಾಡದೆ ಇರುವುದಕ್ಕೆ ಕಾರಣ ವೋಟ ಬ್ಯಾಂಕ್ ರಾಜಕಿಯಕ್ಕಾಗಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಜಿಲ್ಲೆಯ ಎಮ್ ಎಸ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ವಿದ್ಯರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ಮುಖ ನೋಡಿ ಜನ ವೋಟ್ ಹಾಕುತ್ತಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.
ಇದನ್ನೂ ಓದಿ: ವಿವಾದಗಳ ಬಳಿಕ ಬಸಪ್ಪನ ಮೊರೆ ಹೋದ ರೋಹಿಣಿ ಸಿಂಧೂರಿ: 10 ನಿಮಿಷ ಕಳೆದರೂ ಪಾದ ನೀಡದ ಇಷ್ಟಾರ್ಥ ಸಿದ್ದಿ ಬಸವ
ಪ್ರಧಾನಿ ಮೋದಿ ಮುಖ ನೋಡಿ ವೋಟ ಕೇಳಿದರೇ ಚಪ್ಪಲಿಯಿಂದ ಹೊಡಿರಿ ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಈ ರೀತಿ ಮಾತನಾಡುವವರಿಗೆ ಜನ ಸರಿಯಾದ ಉತ್ತರ, ಸರಿಯಾದ ಸಮಯದಲ್ಲಿ ಕೊಡುತ್ತಾರೆ. ಕಾದು ನೋಡಿ, ಮೇ 13 ರಂದು ಯಾರಿಗೆ ಯಾವ ರೀತಿ ಜನ ಉತ್ತರ ಕೊಡುತ್ತಾರೆಂದು ಎಂದು ಹೇಳಿದ್ದಾರೆ.
ಇದನ್ನೂ ಓದಿ: SSLC ಇಂಗ್ಲೀಷ್ ಪರೀಕ್ಷೆಯಲ್ಲಿ ಸಾಮೂಹಿಕ ನಕಲು, 9 ಶಿಕ್ಷಕರು ಅಮಾನತ್ತು
ಫಸ್ಟ್ ಟೈಮ್ ವೋಟ ಮಾಡುವ ಯುವಕರು ಪ್ರಧಾನಿ ಮೋದಿ ಪರವಾಗಿದ್ದಾರೆ. ಉಕ್ರೇನ್ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ ಹೀಗಾಗಿ ಪೆಟ್ರೋಲ್ ದರ ಹೆಚ್ಚಾಗುವುದು ಸಹಜ. ಯುವಕರು ಫಸ್ಟ್ ಟೈಮ್ ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದಿರಿ. ಬಿಜೆಪಿ ಪೂರ್ಣ ಬಹುಮತ ಬಂದರೇ ಓಳ್ಳೆ ನಿರ್ಧಾರಗಳು ತೆಗೆದುಕೊಳ್ಳಲು ಅನುಕೂಲ ಆಗುತ್ತೆ. ಚೌಚೌ ಬಾತ್ ಸರ್ಕಾರ ಬಂದರೇ ರಾಜ್ಯದಲ್ಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ನೀವು ಹಾಕಿದ ಒಂದು ವೋಟಿನಿಂದ ದೇಶದಲ್ಲಿ ಏರ್ ಪೋರ್ಟ್ಗಳು ಹೆಚ್ಚಾಗಿವೆ. ಬ್ರಿಟನ್ ದೇಶವನ್ನು ಹಿಂದಕ್ಕೆ ಹಾಕಿ ಭಾರತ ಈಗ ನಂಬರ್ ಒನ್ ಆಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ