AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​: SSLC ಇಂಗ್ಲೀಷ್​​ ಪರೀಕ್ಷೆಯಲ್ಲಿ ಸಾಮೂಹಿಕ ನಕಲು, 9 ಶಿಕ್ಷಕರು ಅಮಾನತ್ತು

ಬೀದರ್​​ ಜಿಲ್ಲೆಯ ಭಾಲ್ಕಿ ತಾಲೂಕಿನ ಶಿವಾಜಿ ಶಾಲೆಯಲ್ಲಿ ಇಂಗ್ಲಿಷ್ ವಿಷಯ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದ್ದು, 9 ಶಿಕ್ಷಕರನ್ನು ಅಮಾನತ್ತು ಮಾಡಲಾಗಿದೆ.

ಬೀದರ್​: SSLC ಇಂಗ್ಲೀಷ್​​ ಪರೀಕ್ಷೆಯಲ್ಲಿ ಸಾಮೂಹಿಕ ನಕಲು, 9 ಶಿಕ್ಷಕರು ಅಮಾನತ್ತು
ಪರೀಕ್ಷೆ ವೇಳೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಭೇಟಿ
ವಿವೇಕ ಬಿರಾದಾರ
|

Updated on:Apr 07, 2023 | 9:13 AM

Share

ಬೀದರ್: ನಾಡಿನಾದ್ಯಂತ ಎಸ್​ಎಸ್​ಎಲ್​​ಸಿ ಪರೀಕ್ಷೆಗಳು (SSLC Exam) ನಡೆಯುತ್ತಿವೆ. ವಿದ್ಯಾರ್ಥಿಗಳು (Students) ನಕಲು ಮಾಡದೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯಲೆಂದು ಕಣ್ಣಿಡಬೇಕಾದ ಶಿಕ್ಷಕರೇ (Teachers) ವಿದ್ಯಾರ್ಥಿಗಳು ನಕಲು ಮಾಡಲು ಸಹಾಯ ಮಾಡಿದ್ದಾರೆ. ಹೌದು ಜಿಲ್ಲೆಯ ಭಾಲ್ಕಿ (Balki) ತಾಲೂಕಿನ ಶಿವಾಜಿ ಶಾಲೆಯಲ್ಲಿ ಇಂಗ್ಲಿಷ್ ವಿಷಯ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದ್ದು, 9 ಶಿಕ್ಷಕರನ್ನು ಅಮಾನತ್ತು ಮಾಡಲಾಗಿದೆ. ನಿನ್ನೆ (ಏ.06) ಇಂಗ್ಲೀಷ್​ ಪರೀಕ್ಷೆ ನಡೆದಿದ್ದು, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡಲು ಶಿಕ್ಷಕರು ಪ್ರೋತ್ಸಾಹ ನೀಡುತ್ತಿದ್ದರು. ಈ ವೇಳೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಭೇಟಿ ಕೊಟ್ಟಾಗ ಸಾಮೂಹಿಕ ನಕಲು ಕಂಡು ಬಂದಿದೆ.

ಈ ಹಿನ್ನೆಲೆ ಪರೀಕ್ಷೆಯಲ್ಲಿ ನಕಲಿಗೆ ಪ್ರೋತ್ಸಾಹ ಕೊಟ್ಟಿರುವ ಆರೋಪದಡಿ ಡಿಸಿ ಗೋವಿಂದ ರೆಡ್ಡಿ, ಶಿಕ್ಷಕರನ್ನು ಅಮಾನತ್ತು ಮಾಡಿದ್ದಾರೆ.

ಅಮಾನತ್ತು ಗೊಂಡಿರುವ ಶಿಕ್ಷಕರು

1. ಬಾಲಾಜಿ ಕಾಂಬ್ಳೆ ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ದಾಡಗಿ ಭಾಲ್ಕಿ

2. ಶೇಷಪ್ಪಾ ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಮೇಹಕರ ಭಾಲ್ಕಿ

3. ಸಂಪತ್ ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಲಾಧಾ ಭಾಲ್ಕಿ

4. ಗೋವಿಂದ ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಲಾಧಾ

5. ಕುಪೇಂದ್ರ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲವಾಡಿ

6. ಶಿವಾಜಿ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವದಗಿ

7. ಮಾರುತಿ ರಾಥೋಡ್ ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕಾಕನಾಳ

8. ಶಿವಕುಮಾರ್ ಬಿರಾದಾರ ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಮಾಸಿಮಾಡ

9. ಭೀಮ್ ರಾವ್ ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಸಾಯಗಾಂವ್

ಇದನ್ನೂ ಓದಿ: SSLC Exams: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ BMTC ಬಸ್​ನಲ್ಲೂ ಉಚಿತ ಪ್ರಯಾಣ

ಕಲಬುರಗಿ: ಸಾಮೂಹಿಕ ನಕಲಿಗೆ ಅವಕಾಶ, 16 ಪರೀಕ್ಷಾ ಸಿಬ್ಬಂದಿ ಅಮಾನತ್ತು

ಕಲಬುರಗಿ:  ಜಿಲ್ಲೆಯ ಅಫಜಲಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಗೊಬ್ಬುರು (ಬಿ)ಪರೀಕ್ಷಾ ಕೇಂದ್ರದಲ್ಲಿ ಏಪ್ರಿಲ್ 3ರಂದು ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲಾಗಿತ್ತು. ನಕಲು ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ 15 ಮಂದಿ ಕೊಠಡಿಯ ಮೇಲ್ವಿಚಾರಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಪ್ರಕಾಶ್ ಮೀನಾ ಸೋಮವಾರ (ಏ. 03) ರಂದು ಅಮಾನತುಗೊಳಿಸಿದ್ದರು.

ಕರ್ತವ್ಯದಲ್ಲಿದ್ದ ಪರೀಕ್ಷಾ ಸಿಬ್ಬಂದಿ, ಮೇಲ್ವಿಚಾರಕರು ಗಣಿತ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಟ್ಟು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಹೆಚ್ಚುವರಿ ಆಯುಕ್ತರು ಪ್ರಕಾಶ್ ಮೀನಾ ತಿಳಿಸಿದ್ದಾರೆ. ಪರೀಕ್ಷೆಗೆ ದಿಢೀರ್ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಸಲ್ಲಿಸಿದ ವರದಿ ಆಧರಿಸಿ ಅಮಾನತು ಆದೇಶ ಹೊರಡಿಸಲಾಗಿತ್ತು.

ಇಶಾ ಪಂತ್ ಭೇಟಿ ಕೊಟ್ಟಾಗ ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಿದ್ದಾರೆ. ಆಗ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿರುವ ತೆರೆದ ಮೈದಾನದಲ್ಲಿ ಪರೀಕ್ಷೆ ಬರೆಯುತ್ತಿರುವುದು ಕಂಡುಬಂದಿದೆ. ಪ್ರಶ್ನೆಗಳಿಗೆ ಉತ್ತರಿಸಲು ಬುಕ್‌ಲೆಟ್‌ಗಳನ್ನು ಬಳಸಿ ಸಾಮೂಹಿಕ ನಕಲು ಮಾಡಿದ್ದು ಇದಕ್ಕೆ ಅವಕಾಶ ನೀಡಲಾಗಿದೆ ಎಂದು ಇಶಾ ಪಂತ್ ವರದಿ ನೀಡಿದ್ದರು.

ಈ ಆಧಾರದ ಮೇಲೆ ಮುಖ್ಯಶಿಕ್ಷಕ ಗೋಳಾಲ್ಲಪ್ಪ ಗುರಪ್ಪ ಮತ್ತು 15 ಸಹಾಯಕ ಶಿಕ್ಷಕರಾದ ಭೀಮಾಶಂಕರ ಮಡಿವಾಳ, ರವೀಂದ್ರ, ದೇವೇಂದ್ರಪ್ಪ ಯರಗಲ್, ಸವಿತಾ ಬಾಯಿ ಜಮಾದಾರ್, ಅನಿತಾ, ನಾಗಮ್ಮ, ರೇವಣಸಿದ್ದಪ್ಪ, ಪರ್ವೀನ್ ಸುಲ್ತಾನ, ಬಾಬು ಪವಾರ್, ಕವಿತಾ, ಜಯಶ್ರೀ, ವಿದ್ಯಾವತಿ, ಗಾಯತ್ರಿ ಬಿರಾದಾರ್, ಮೀನಾಕ್ಷಿ ಮತ್ತು ಅರುಣಕುಮಾರ ಎಂಬುವವರನ್ನು ಅಮಾನತ್ತುಗೊಳಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 am, Fri, 7 April 23

ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್