ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ ಏರಿದೆ. JDS ಸದಸ್ಯರು ಬಿಜೆಪಿಯ ಶಿವಕುಮಾರ್ ಪರ ಮತ ಚಲಾಯಿಸಿದ್ದಾರೆ. ಬಿಜೆಪಿ ಸದಸ್ಯ ಶಿವಕುಮಾರ್ ಪರ 48 ಮತಗಳ ಚಲಾವಣೆ ಮಾಡಿದ್ದಾರೆ. ಮೈಸೂರು ನಗರ ಪಾಲಿಕೆ ಮೇಯರ್ ಆಗಿ ಶಿವಕುಮಾರ್ ಆಯ್ಕೆ ಮಾಡಲಾಗಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ JDS ಶಾಸಕ ಜಿ.ಟಿ.ದೇವೇಗೌಡ, ಪರಿಷತ್ನ JDS ಸದಸ್ಯ ಮರಿತಿಬ್ಬೇಗೌಡರಿಂದ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. 20 ಮತಗಳ ಅಂತರದಿಂದ ಮೇಯರ್ ಆಗಿ ಆಯ್ಕೆಯಾದ ಶಿವಕುಮಾರ್. ಕಾಂಗ್ರೆಸ್ ಸದಸ್ಯ ಸೈಯದ್ ಹಸ್ರತ್ ಉಲ್ಲಾ ಪರ 28 ಮತ ಚಲಾವಣೆ ಮಾಡಲಾಗಿದೆ.
ಮೇಯರ್, ಉಪ ಮೇಯರ್ ಚುನಾವಣೆಗೆ (Mysore Mayor Election) ಕದನಕಣ ರಂಗೇರಿತ್ತು. ಕಾಂಗ್ರೆಸ್‌ನಿಂದ (Congress Party) ಮೇಯರ್ ಸ್ಥಾನಕ್ಕೆ ಸಯ್ಯದ್ ಅಸ್ರತ್ ಉಲ್ಲಾ ಹಾಗೂ ಗೋಪಿ, ಜೆಡಿಎಸ್‌ನಿಂದ (JDS) ಕೆ.ವಿ.ಶ್ರೀಧರ್, ಬಿಜೆಪಿಯಿಂದ (BJP) ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್ ಹುದ್ದೆಗೆ ಕಾಂಗ್ರೆಸ್‌ನಿಂದ ಶೋಭಾ ಸುನಿಲ್, ಜೆಡಿಎಸ್‌ನಿಂದ ರೇಷ್ಮಾಬಾನು, ಬಿಜೆಪಿಯಿಂದ ರೂಪ ನಾಮಪತ್ರ ಸಲ್ಲಿಸಲಾಗಿತ್ತು. ಮೇಯರ್ ಹುದ್ದಿಗೆ ನಾಮಪತ್ರ ಸಲ್ಲಿಸಿರುವ ಜೆಡಿಎಸ್ನ ಕೆ.ವಿ.ಶ್ರೀಧರ್ ಮೈಸೂರಿನ 3ನೇ ವಾರ್ಡ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದರು. ಇದೀಗ ಚುನಾವಣೆ ನಡೆದು ಫಲಿತಾಂಶ ಬಂದಿದೆ. ಮೈಸೂರಿನಲ್ಲಿ ಬಿಜೆಪಿ ಅಧಿಕಾರ ಪಡೆದುಕೊಂಡಿದೆ.
ಉಪ ಮೇಯರ್ ಅಭ್ಯರ್ಥಿ ರೇಷ್ಮಾ ನಾಮಪತ್ರ ಅಸಿಂಧು
ಬಿಜೆಪಿಯಿಂದ ಮೇಯರ್ ಮತ್ತು ಜೆಡಿಎಸ್‌ನಿಂದ ಉಪಮೇಯರ್ ಎಂದು ಹೇಳಲಾಗಿದೆ. ಆದರೆ ಉಪ ಮೇಯರ್
ಅಭ್ಯರ್ಥಿ ರೇಷ್ಮಾ ಅವರ ನಾಮಪತ್ರವನ್ನು ಅಸಿಂದು ಮಾಡಲಾಗಿದೆ. ಬಿಜೆಪಿಯನ್ನು ಬೆಂಬಲಿಸುವುದು ಅನಿವಾರ್ಯವಾಗಿತ್ತು. ಬಿಸಿಎ ಪ್ರಮಾಣ ಪತ್ರ ನೀಡಿದೆ.
ಕಾಂಗ್ರೆಸ್ಗೆ ಕೊನೆ ಕ್ಷಣದಲ್ಲಿ ಭಾರಿ ನಿರಾಸೆ
ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಆಘಾತ ನೀಡಿದೆ. ಜೆಡಿಎಸ್ ಜೊತೆ ಮೈತ್ರಿ ಇಲ್ಲ ಇಲ್ಲ ಎಂದು ಹೇಳುತ್ತಲೆ ಕಾಂಗ್ರೆಸ್ಗೆ ಯಾಮಾರಿಸಿದ್ದ ಬಿಜೆಪಿ. ಬಿಜೆಪಿಯ ಒಳ ತಂತ್ರ ಅರಿಯದೆ ಕಾಂಗ್ರೆಸ್ ಮೇಯರ್ ಆಗುವ ಕನಸು ಕಂಡಿತ್ತು. ಕಾಂಗ್ರೆಸ್ ಗೆ ಕೊನೆ ಕ್ಷಣದಲ್ಲಿ ಭಾರಿ ನಿರಾಸೆ
ಮೇಯರ್ ಮತ್ತು ಉಪ ಮೇಯರ್ ಬಿಜೆಪಿ ಪಾಲಿಗೆ
ಬಿಜೆಪಿಯ ರೂಪ ಪರ ಮತ ಚಲಾಯಿಸಿದ ಜೆಡಿಎಸ್ ಸದಸ್ಯರು, ಮೈಸೂರು ಮೇಯರ್ ಉಪ ಮೇಯರ್ ಎರಡು ಸ್ಥಾನ ಬಿಜೆಪಿ ಪಾಲಾಗಿದೆ. ಮೇಯರ್ ಆಗಿ ಶಿವಕುಮಾರ್ ಉಪಮೇಯರ್ ಆಗಿ ರೂಪ ಆಯ್ಕೆ ಆಗಿದ್ದಾರೆ.
Published On - 1:02 pm, Tue, 6 September 22