ಕರ್ನಾಟಕ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ

| Updated By: Rakesh Nayak Manchi

Updated on: Jan 14, 2024 | 11:04 PM

ಕರ್ನಾಟಕ ರಾಜ್ಯ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಒಟ್ಟು 39 ಸಂಘಟನಾ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ಇಬ್ಬರು ಹಾಲಿ ಶಾಸಕರು ಹಾಗೂ ಮೂವರು ಮಾಜಿ ಶಾಸಕರಿಗೆ ಜಿಲ್ಲಾಧ್ಯಕ್ಷ ಪಟ್ಟ ಒಲಿದುಬಂದಿದೆ. ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ, ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಹಾಗೂ ಸಹಕಾರ್ಯದರ್ಶಿಗಳನ್ನೂ ನೇಮಿಸಲಾಗಿದೆ.

ಕರ್ನಾಟಕ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ
Follow us on

ಬೆಂಗಳೂರು, ಜ.14: ಕರ್ನಾಟಕ ರಾಜ್ಯ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನು ನೇಮಕ (BJP district president) ಮಾಡಲಾಗಿದೆ. ಒಟ್ಟು 39 ಸಂಘಟನಾ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಹಾಗೂ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅದೇ ರೀತಿ, ಮೂವರು ಮಾಜಿ ಶಾಸಕರಾದ ಎಲ್. ನಾಗೇಂದ್ರ, ಸಿಎಸ್. ನಿರಂಜನ್ ಕುಮಾರ್ ಮತ್ತು ಅರುಣ್ ಕುಮಾರ್ ಪೂಜಾರ ಅವರಿಗೂ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: ಹಾನಗಲ್‌ ಗ್ಯಾಂಗ್ ರೇಪ್ ಕೇಸ್​ ಮುಚ್ಚಿ ಹಾಕುವುದರಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ: ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್. ದತ್ತಾತ್ರಿ ಅವರನ್ನು ನೇಮಕ ಮಾಡಲಾಗಿದ್ದು, ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೆಕಲ್ಲು, ಸಹ ಕಾರ್ಯದರ್ಶಿಯಾಗಿ ಬಿ.ಹೆಚ್. ವಿಶ್ವನಾಥ ನೇಮಕಗೊಂಡಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ

ಮೈಸೂರು ನಗರ- ಎಲ್. ನಾಗೇಂದ್ರ

ಮೈಸೂರು ಗ್ರಾಮಾಂತರ- ಎಲ್.ಆರ್. ಮಹದೇವಸ್ವಾಮಿ

ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್

ಮಂಡ್ಯ- ಇಂದ್ರೇಶ್ ಕುಮಾರ್

ಹಾಸನ- ಸಿದ್ದೇಶ್ ನಾಗೇಂದ್ರ

ಕೊಡಗು- ರವಿ ಕಾಳಪ್ಪ

ದಕ್ಷಿಣ ಕನ್ನಡ- ಸತೀಶ್ ಕುಂಪಲ

ಉಡುಪಿ- ಕಿಶೋರ್ ಕುಂದಾಪುರ

ಚಿಕ್ಕಮಗಳೂರು- ದೇವರಾಜ ಶೆಟ್ಟಿ

ಶಿವಮೊಗ್ಗ- ಟಿ.ಡಿ. ಮೇಘರಾಜ್

ಉತ್ತರ ಕನ್ನಡ- ಎನ್.ಎಸ್. ಹೆಗಡೆ

ಹಾವೇರಿ- ಅರುಣ್ ಕುಮಾರ್ ಪೂಜಾರ

ಹುಬ್ಬಳ್ಳಿ- ಧಾರವಾಡ- ತಿಪ್ಪಣ್ಣ ಮಜ್ಜಗಿ

ಧಾರವಾಡ ಗ್ರಾಮಾಂತರ- ನಿಂಗಪ್ಪ ಸುತ್ತಗಟ್ಟಿ

ಗದಗ- ರಾಜು ಕುರಡಗಿ

ಬೆಳಗಾವಿ ನಗರ- ಗೀತಾ ಸುತಾರ್

ಬೆಳಗಾವಿ ಗ್ರಾಮಾಂತರ- ಸುಭಾಷ್ ಪಾಟೀಲ್

ಚಿಕ್ಕೋಡಿ- ಸತೀಶ್ ಅಪ್ಪಾಜಿಗೋಳ್

ಬಾಗಲಕೋಟೆ- ಶಾಂತಗೌಡ ಪಾಟೀಲ್

ವಿಜಯಪುರ- ಆರ್.ಎಸ್. ಪಾಟೀಲ್

ಬೀದರ್- ಸೋಮನಾಥ‌ ಪಾಟೀಲ್

ಕಲ್ಬುರ್ಗಿ ನಗರ- ಚಂದ್ರಕಾಂತ ಪಾಟೀಲ್

ಕಲ್ಬುರ್ಗಿ ಗ್ರಾಮಾಂತರ- ಶಿವರಾಜ ಪಾಟೀಲ್ ರದ್ದೇವಾಡಿ

ಯಾದಗಿರಿ- ಅಮೀನ್ ರೆಡ್ಡಿ

ರಾಯಚೂರು- ಡಾ. ಶಿವರಾಜ ಪಾಟೀಲ್

ಕೊಪ್ಪಳ- ನವೀನ್ ಗುಳಗಣ್ಣನವರ್

ಬಳ್ಳಾರಿ- ಅನಿಲ್ ಕುಮಾರ್ ಮೋಕಾ

ವಿಜಯನಗರ- ಚನ್ನಬಸವನಗೌಡ ಪಾಟೀಲ್

ದಾವಣಗೆರೆ- ರಾಜಶೇಖರ್

ಚಿತ್ರದುರ್ಗ- ಎ. ಮುರಳಿ

ತುಮಕೂರು – ಹೆಚ್.ಎಸ್. ರವಿಶಂಕರ್

ಮಧುಗಿರಿ- ಬಿ.ಸಿ. ಹನುಮಂತೇಗೌಡ

ರಾಮನಗರ- ಆನಂದಸ್ವಾಮಿ

ಬೆಂಗಳೂರು ಗ್ರಾಮಾಂತರ- ರಾಮಕೃಷ್ಣಪ್ಪ

ಚಿಕ್ಕಬಳ್ಳಾಪುರ-ರಾಮಲಿಂಗಪ್ಪ

ಕೋಲಾರ- ಡಾ. ಕೆ.ಎನ್. ವೇಣುಗೋಪಾಲ್

ಬೆಂಗಳೂರು ಉತ್ತರ- ಎಸ್. ಹರೀಶ್

ಬೆಂಗಳೂರು ಕೇಂದ್ರ- ಸಪ್ತಗಿರಿಗೌಡ

ಬೆಂಗಳೂರು ದಕ್ಷಿಣ- ಸಿ.ಕೆ. ರಾಮಮೂರ್ತಿ

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:48 pm, Sun, 14 January 24