ಜ.7ರಿಂದ ನಿಗದಿಯಾಗಿದ್ದ ಬಿಜೆಪಿ ಚಿಂತನಾ ಶಿಬಿರ ಮುಂದೂಡಿಕೆ; ಸಚಿವರ ಮುಖದಲ್ಲಿ ಮಂದಹಾಸ

ಚಿಂತನಾ ಶಿಬಿರ ಮುಂದೂಡಲ್ಪಟ್ಟಿರುವುದಕ್ಕೆ ಹಲವು ಸಚಿವರ ಮುಖದಲ್ಲಿ ಮಂದಹಾಸ ಮೂಡಿದೆ. ಚಿಂತನಾ ಶಿಬಿರದಲ್ಲಿ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ಮಾಡಲಾಗುತ್ತದೆ

ಜ.7ರಿಂದ ನಿಗದಿಯಾಗಿದ್ದ ಬಿಜೆಪಿ ಚಿಂತನಾ ಶಿಬಿರ ಮುಂದೂಡಿಕೆ; ಸಚಿವರ ಮುಖದಲ್ಲಿ ಮಂದಹಾಸ
ಬಿಜೆಪಿ (ಪ್ರಾತಿನಿಧಿಕ ಚಿತ್ರ)
Updated By: sandhya thejappa

Updated on: Jan 06, 2022 | 12:04 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಅನಿವಾರ್ಯವಾಗಿ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಸಭೆ, ಸಮಾರಂಭಗಳಿಗೆ ಮಿತ ಜನರು ಸೇರುವಂತೆ ತಿಳಿಸಿದೆ. ಇನ್ನು ವೀಕೆಂಡ್ ಕರ್ಫ್ಯೂ ಜಾರಿಯಾಗುತ್ತಿರುವ ಕಾರಣ ಜನವರಿ 7ರಿಂದ ನಿಗದಿಯಾಗಿದ್ದ ಬಿಜೆಪಿ ಚಿಂತನಾ ಶಿಬಿರ (Chintana Shibira) ಮುಂದೂಡಿಕೆಯಾಗಿದೆ. ಸರ್ಕಾರ ಕೊವಿಡ್ ನಿರ್ಬಂಧ ವಿಧಿಸಿದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಬೆಟ್ಟದಲ್ಲಿ ನಿಗದಿಯಾಗಿದ್ದ 3 ದಿನಗಳ ಚಿಂತನಾ ಶಿಬಿರ ಮುಂದೂಡಲಾಗಿದೆ.

ಚಿಂತನಾ ಶಿಬಿರ ಮುಂದೂಡಲ್ಪಟ್ಟಿರುವುದಕ್ಕೆ ಹಲವು ಸಚಿವರ ಮುಖದಲ್ಲಿ ಮಂದಹಾಸ ಮೂಡಿದೆ. ಚಿಂತನಾ ಶಿಬಿರದಲ್ಲಿ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ ಸದ್ಯ ಕೊರೊನಾ ಕಾರಣದಿಂದ ಶಿಬಿರ ಪೋಸ್ಟ್ ಪೋನ್ ಆಗಿದೆ. ಶಿಬಿರ ಮುಂದೂಡಿಕೆಯಾಗಿದ್ದರಿಂದ ಹೈಕಮಾಂಡ್​ಗೆ ಸಲ್ಲಿಕೆಯಾಗಬೇಕಿದ್ದ ಸಚಿವರ ಮೌಲ್ಯಮಾಪನದ ವರದಿ ಕೂಡಾ ಮುಂದಕ್ಕೆ ಹೋಗಿದೆ. ಇದರಿಂದ ಸಚಿವ ಸಂಪುಟ ಪುನಾರಚನೆ ಕುರಿತಾದ ಪ್ರಕ್ರಿಯೆಗೂ ಸದ್ಯ ಬ್ರೇಕ್ ಬೀಳುತ್ತದೆ ಎಂದು ಸಚಿವರು ನಿರಾಳರಾಗಿದ್ದಾರೆ.

ಅನುಮತಿ ಪಡೆದು ಪ್ರತಿಭಟನೆ ಮಾಡುತ್ತಿಲ್ಲ; ಸಿದ್ದರಾಮಯ್ಯ
ಕಾಂಗ್ರೆಸ್‌ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಅನುಮತಿ ಇಲ್ಲ ಎಂಬ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅನುಮತಿಯನ್ನು ಪಡೆದು ಪ್ರತಿಭಟನೆ ಮಾಡುತ್ತಿಲ್ಲ. ನಿಯಮ‌ಬದ್ಧವಾಗಿಯೇ ಪಾದಯಾತ್ರೆಯನ್ನು ಮಾಡುತ್ತೇವೆ. ಅವರು ಬೇಕಾದರೆ ಕ್ರಮ ಕೈಗೊಳ್ಳಲಿ.  ಲೆಟ್ ದೆಮ್ ಟೇಕ್ ಌಕ್ಷನ್ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ

ಜಮ್ಮು ಮತ್ತು ಕಾಶ್ಮೀರ ಹಿಮಾವೃತ: ಹಿಮಕುಸಿತದ ಎಚ್ಚರಿಕೆ ನೀಡಿದ ಐಎಂಡಿ, ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಒತ್ತಾಯ

ಸಾಕಿದ ಕೋಳಿಯ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಕುಟುಂಬ: ವಿಡಿಯೋ ವೈರಲ್​

Published On - 12:01 pm, Thu, 6 January 22