ನಾಯಿ ನರಿಗಳಂತೆ ಕಚ್ಚಾಡುತ್ತಿರೋದು ನಾವಲ್ಲ ಬಿಜೆಪಿಯವರು, ಅದಕ್ಕಾಗೇ ವಿರೋಧ ಪಕ್ಷ ನಾಯಕನನ್ನು ಆರಿಸಲಾಗುತ್ತಿಲ್ಲ: ಡಿಕೆ ಶಿವಕುಮಾರ್
ಅಪರೇಶನ್ ಕಮಲದ ಸುಳಿವು ಕಾಂಗ್ರೆಸ್ ನಾಯಕರಿಗೆ ಸಿಕ್ಕಿದ್ದರೆ ಸರ್ಕಾರ ಅವರದ್ದೇ ಅಗಿರೋದ್ರಿಂದ ತನಿಖೆ ಮಾಡಿಸಲಿ ಅಂತ ಯಡಿಯೂರಪ್ಪ ಹೇಳಿದ್ದಾರೆ ಅಂದಾಗ ಶಿವಕುಮಾರ್ ಆಯ್ತು, ಯಡಿಯೂರಪ್ಪನವರ ಸಲಹೆಯನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ ಎಂದು ಹೇಳಿದರು.
ಬೆಂಗಳೂರು: ಕಾಂಗ್ರೆಸ್ ನಾಯಕರಲ್ಲಿ ಹೊಂದಾಣಿಕೆ, ಸಮನ್ವಯತೆ (coordination) ಇಲ್ಲ, ಸರ್ಕಾರ ನಡೆಸುವುದು ಅವರಿಗೆ ಸಾಧ್ಯವಾಗುತ್ತಿಲ್ಲ, ನಾಯಿ ನರಿಗಳಂತೆ ಕಿತ್ತಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಇಂದು ಬೆಳಗ್ಗೆ ಹೇಳಿರುವುದಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಕಿತ್ತಾಡುತ್ತಿದ್ದಾರೆ? ಬಿಜೆಪಿ ನಾಯಕರ ಲ್ಲೇ ಕಿತ್ತಾಟ ನಡೆದಿದೆ, ಹಾಗಾಗೇ ಅವರಿಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡುವುದು ಸಾಧ್ಯವಾಗುತ್ತಿಲ್ಲ, ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಅವರು ನಮ್ಮ ಪಕ್ಷದವರನ್ನು ಟೀಕಿಸುತ್ತಿದ್ದಾರೆ, ನಮ್ಮ ಶಾಸಕರಿಗೆ ಚಾಕೊಲೇಟ್ ನೀಡಲು ಬರುತ್ತಿದ್ದಾರೆ ಎಂದು ಹೇಳಿದರು. ಅಪರೇಶನ್ ಕಮಲದ ಸುಳಿವು ಕಾಂಗ್ರೆಸ್ ನಾಯಕರಿಗೆ ಸಿಕ್ಕಿದ್ದರೆ ಸರ್ಕಾರ ಅವರದ್ದೇ ಅಗಿರೋದ್ರಿಂದ ತನಿಖೆ ಮಾಡಿಸಲಿ ಅಂತ ಯಡಿಯೂರಪ್ಪ ಹೇಳಿದ್ದಾರೆ ಅಂದಾಗ ಶಿವಕುಮಾರ್ ಆಯ್ತು, ಯಡಿಯೂರಪ್ಪನವರ ಸಲಹೆಯನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ