ಗೋಹತ್ಯೆ ನಿಷೇಧ ಕಾಯ್ದೆ ಮತ್ತಷ್ಟು ಬಿಗಿ; ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ತೆರೆಯುತ್ತೇವೆ: ಪ್ರಭು ಚೌಹಾಣ್
Prabhu Chauhan: ನಾನು ಇಲಾಖೆ ಸಚಿವನಾದ ನಂತರ ಗೋ ಸಾಗಾಣಿಕೆ ಬಗ್ಗೆ ಹೆಚ್ಚು ಪ್ರಕರಣ ದಾಖಲಿಸಿದ್ದೇನೆ. ಎರಡು ಕೇಸ್ ಹಾಕಿ, ದೊಡ್ಡ ಮಟ್ಟದ ದಂಡ ಹಾಕಿದರೆ ಎಲ್ಲ ಸರಿಯಾಗುತ್ತೆ ಎಂದು ಮೈಸೂರಿನಲ್ಲಿ ಸಚಿವ ಪ್ರಭು ಔಹಾಣ್ ಹೇಳಿದ್ದಾರೆ.
ಮೈಸೂರು: ಗೋಮಾತೆಯ ಸಂರಕ್ಷಣೆಯೇ ನಮ್ಮ ಹೊಣೆಯಾಗಿದೆ. ಇನ್ನುಮುಂದೆ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ತೆರೆಯುತ್ತೇವೆ. ಗೋಹತ್ಯೆ ನಿಷೇಧ ಕಾಯ್ದೆ ಮತ್ತಷ್ಟು ಬಿಗಿ ಮಾಡಲಾಗುತ್ತದೆ. ಈಗ ಕಾಯ್ದೆಯ ವಿರುದ್ಧ ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಎಲ್ಲ ಮುಗಿದ ಬಳಿಕ ಕಾಯ್ದೆ ಮತ್ತಷ್ಟು ಬಿಗಿ ಮಾಡ್ತೇವೆ ಎಂದು ಮೈಸೂರಿನಲ್ಲಿ ಸಚಿವ ಪ್ರಭು ಚೌಹಾಣ್ ಇಂದು (ಆಗಸ್ಟ್ 11) ಹೇಳಿಕೆ ನೀಡಿದ್ದಾರೆ.
ಖಾತೆಯಲ್ಲಿ ಚಿಕ್ಕದು ದೊಡ್ಡದು ಎಂಬುದು ಇಲ್ಲ. ನನಗೆ ಕೊಟ್ಟ ಖಾತೆಯನ್ನ ಖುಷಿಯಿಂದ ಸ್ವೀಕರಿಸಿದ್ದೇನೆ ಎಂದು ಸಚಿವ ಸಂಪುಟ ರಚನೆ ಬಳಿಕ ತಮಗೆ ಲಭಿಸಿರುವ ಖಾತೆಯ ಬಗ್ಗೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿಕೆ ನೀಡಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಹೈಕಮಾಂಡ್, ಮುಖ್ಯಮಂತ್ರಿ ಸರಿಪಡಿಸುತ್ತಾರೆ. ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೆ ಕೊಟ್ಟಿರುವ ಖಾತೆ ಬಗ್ಗೆ ಖುಷಿ ಇದೆ. ಕಳೆದ ಬಾರಿ ನೀಡಿದ ಖಾತೆಯನ್ನು ಈ ಬಾರಿ ನೀಡಿದ್ದಾರೆ. ಖಾತೆಯಲ್ಲಿ ದೊಡ್ಡದು ಚಿಕ್ಕದು ಎಂಬುದಿಲ್ಲ. ನಾನು ಖುಷಿಯಿಂದಲೆ ಈ ಖಾತೆ ಪಡೆದಿದ್ದೇನೆ. ಗೋಮಾತೆ ಸಂರಕ್ಷಣೆ ನಮ್ಮ ಹೊಣೆ. ಆ ಕೆಲಸವನ್ನ ನಾನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಇಲಾಖೆ ಸಚಿವನಾದ ನಂತರ ಗೋ ಸಾಗಾಣಿಕೆ ಬಗ್ಗೆ ಹೆಚ್ಚು ಪ್ರಕರಣ ದಾಖಲಿಸಿದ್ದೇನೆ. ಎರಡು ಕೇಸ್ ಹಾಕಿ, ದೊಡ್ಡ ಮಟ್ಟದ ದಂಡ ಹಾಕಿದರೆ ಎಲ್ಲ ಸರಿಯಾಗುತ್ತೆ ಎಂದು ಮೈಸೂರಿನಲ್ಲಿ ಸಚಿವ ಪ್ರಭು ಔಹಾಣ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿವರ್ಷ 2 ಲಕ್ಷ ಗೋವುಗಳ ರಕ್ಷಣೆ ಮಾಡಬೇಕಿದೆ, ಈ ಇಲಾಖೆಯಲ್ಲೇ ಮುಂದುವರೆಯುವ ಇಚ್ಛೆಯಿದೆ: ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್
ಮಂತ್ರಾಲಯದ ಗೋಶಾಲೆಯಲ್ಲಿ ಕಾಲ ಕಳೆದ ಡಿ ಬಾಸ್ ದರ್ಶನ್! ವಿಡಿಯೋ ವೈರಲ್
(BJP Minister Prabhu Chauhan on Cow Slaughter issue Gou Shala at every districts)