ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕು, ಅದು ಬಿಟ್ಟು ಹಿಜಾಬ್​ ಹೆಸರಲ್ಲಿ ಬಿಟ್ಟಿ ಪ್ರಚಾರ ಪಡೆಯಬಾರದು: ಆಲಿಯಾ ಟ್ವೀಟ್​ಗೆ ಶೋಭಾ ಕರಂದ್ಲಾಜೆ ತಿರುಗೇಟು

| Updated By: Lakshmi Hegde

Updated on: Apr 23, 2022 | 3:53 PM

ಹಿಜಾಬ್​ಗೆ ಸಂಬಂಧಪಟ್ಟು ಹೈಕೋರ್ಟ್ ತೀರ್ಪು ಹೊರಬಿದ್ದಿದೆ. ಶಾಲೆಯ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರವನ್ನು ಧರಿಸಿಯೇ ಬರಬೇಕು ಎಂದೂ ಹೇಳಿದೆ.  ಹಾಗಿದ್ದಾಗ್ಯೂ ಇನ್ನೂ ಹಿಜಾಬ್​ ಗಲಾಟೆ ಮುಂದುವರಿದಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕು, ಅದು ಬಿಟ್ಟು ಹಿಜಾಬ್​ ಹೆಸರಲ್ಲಿ ಬಿಟ್ಟಿ ಪ್ರಚಾರ ಪಡೆಯಬಾರದು: ಆಲಿಯಾ ಟ್ವೀಟ್​ಗೆ ಶೋಭಾ ಕರಂದ್ಲಾಜೆ ತಿರುಗೇಟು
ಸಚಿವೆ ಶೋಭಾ ಕರಂದ್ಲಾಜೆ
Follow us on

ಹಿಜಾಬ್​ ಧರಿಸಿ ಪರೀಕ್ಷೆ ಬರೆಯಲು ಹೋಗಿದ್ದ ಅಲಿಯಾ ಅಸಾದಿ ಮತ್ತಿತರಿಗೆ ಹಿಜಾಬ್​ ತೆಗೆದ ವಿನಃ ಪ್ರವೇಶವಿಲ್ಲ ಎಂದು ಹೇಳಲಾಗಿತ್ತು. ನಂತರ ಅವರು ಹಾಲ್​ ಟಿಕೆಟ್​ ಸ್ವೀಕಾರ ಮಾಡಿದರೂ ಪರೀಕ್ಷೆ ಬರೆಯದೆ ವಾಪಸ್​ ಆಗಿದ್ದಾರೆ. ಈ ಅಲಿಯಾ ಪರೀಕ್ಷಾ ಕೇಂದ್ರದಿಂದ ವಾಪಸ್ ಬಂದು ಸುಮ್ಮನಿರದೆ ಟ್ವೀಟ್​ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದರು.  ನಮ್ಮ ಮೇಲೆ ಕ್ರಿಮಿನಲ್​ ಕೇಸ್​ ಹಾಕುತ್ತೇವೆ ಎನ್ನುತ್ತಿದ್ದಾರೆ. ಯಾವ ಕಾರಣಕ್ಕೆ ಹಾಕುತ್ತಾರೆ? ನಮ್ಮ ದೇಶ ಎತ್ತ ಸಾಗುತ್ತಿದೆ ಎಂದೂ ಪ್ರಶ್ನಿಸಿದ್ದರು.  ಅಲಿಯಾರ ಈ ಟ್ವೀಟ್​ಗೆ ಬಿಜೆಪಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಭಾರತ ಎತ್ತ ಸಾಗುತ್ತಿದೆ ಎಂದು ಕೇಳುತ್ತಿದ್ದಾರೆ. ಅಷ್ಟಕ್ಕೂ ಭಾರತ ಬಿಟ್ಟು ಹೋದವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ನೋಡಲಿ. ಅವರು ಊಟವೂ ಸಿಗದ ಸ್ಥಿತಿಯಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಹಿಜಾಬ್​ಗೆ ಸಂಬಂಧಪಟ್ಟು ಹೈಕೋರ್ಟ್ ತೀರ್ಪು ಹೊರಬಿದ್ದಿದೆ. ಶಾಲೆಯ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರವನ್ನು ಧರಿಸಿಯೇ ಬರಬೇಕು ಎಂದೂ ಹೇಳಿದೆ.  ಹಾಗಿದ್ದಾಗ್ಯೂ ಇನ್ನೂ ಹಿಜಾಬ್​ ಗಲಾಟೆ ಮುಂದುವರಿದಿದೆ. ಈ ನೆಲದ ಕಾನೂನು ಪಾಲನೆ ಮಾಡಬಾರದು ಎಂಬುದೇ ಅವರ ಉದ್ದೇಶ. ಪೊಲೀಸರಿಗೆ ಗೌರವ ಕೊಡುವುದಿಲ್ಲ, ಕಾನೂನು ಪಾಲನೆ ಮಾಡುವುದಿಲ್ಲ. ಪೊಲೀಸ್​ ವ್ಯವಸ್ಥೆ ಮೇಲೆ, ಠಾಣೆಗಳ ಮೇಲೆ ದಾಳಿ ಮಾಡುತ್ತಾರೆ. ಹಿಂಸಾಚಾರ, ವಿಭಜನೆಯೇ ಅವರ ಮನಸ್ಥಿತಿ. ಆದರೆ ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬುದು ನಮ್ಮ ಸಂಕಲ್ಪ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕು

ಹೆಣ್ಣು ಮಕ್ಕಳಿಗೆ ಬೇಕಾಗಿರುವುದು ಶಿಕ್ಷಣ. ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ಅವರು ನಿಲ್ಲಬೇಕು. ಅದು ಬಿಟ್ಟು ಹಾಲ್​ ಟಿಕೆಟ್​ ಪಡೆದು ಪ್ರಚಾರ ಗಿಟ್ಟಿಸುವುದು ಅಲ್ಲ.  ಪ್ರತಿಯೊಬ್ಬರೂ ಪರೀಕ್ಷೆ ಬರೆಯಬೇಕು. ಪದವಿ ಪಡೆದು ಉದ್ಯೋಗ ಹಿಡಿಯಲಿ. ನಮ್ಮ ಹಿಂದೆ ಈಗಿರುವ ಸಂಘಟನೆ ಮುಂದೆ ಬದುಕಿನಲ್ಲಿ ಇರುವುದಿಲ್ಲ. ಹೀಗೆಲ್ಲ ಮಾಡುವುದರಿಂದ ಏನು ಪಡೆಯಲು ಸಾಧ್ಯ? ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನ ನಡೆಯುತ್ತಿದೆ. ಆದರೆ ಪ್ರಜಾಪ್ರಭುತ್ವ ಆಡಳಿತ ಇರುವ ಈ ದೇಶದಲ್ಲಿ ಅದೆಲ್ಲ ಸಾಧ್ಯವೇ ಇಲ್ಲ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳಿಲ್ಲದವರಿಗೆ ಬಾಡಿಗೆ ತಾಯ್ತನದ ಹೆಸರಲ್ಲಿ ವಂಚಿಸುತ್ತಿದ್ದ ಮಹಿಳೆ ಬಂಧನ: ಪೆಟ್ರೋಲ್​​ ಬಂಕ್​​ನಲ್ಲಿ ಗ್ರಾಹಕರಿಗೆ ಮೋಸ