AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment: ಪಿಎಸ್ಐ ನೇಮಕ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡ!

PSI Recruitment Scam ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿಯ ಸಹಾಯಕ ತನಿಖಾಧಿಕಾರಿಗಳು ಏಪ್ರಿಲ್ 20, 2022ರಂದು ತನಿಖೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. 50 ಜನರಿಗೆ ನೀಡಿದ್ದ ನೊಟೀಸ್ ಪಟ್ಟಿಯಲ್ಲಿ ಬಸನಗೌಡ ಕರೇಗೌಡ್ರ ಹೆಸರು ಸಹ ಇತ್ತು. ಅಕ್ಟೋಬರ್ 3, 2021ರಂದು ಬಸನಗೌಡ ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದಿದ್ದರು.

PSI Recruitment: ಪಿಎಸ್ಐ ನೇಮಕ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡ!
ಪಿಎಸ್ಐ ನೇಮಕ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಪಿಎಸ್ಐ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡ!
TV9 Web
| Updated By: ಸಾಧು ಶ್ರೀನಾಥ್​|

Updated on:Apr 23, 2022 | 5:27 PM

Share

ಹಾವೇರಿ: ಕರ್ನಾಟಕ ಪೊಲೀಸ್​ ಇಲಾಖೆಯಲ್ಲಿ ಪೊಲೀಸ್​ ಸಬ್​ ಇನ್ಸ್​​ಪೆಕ್ಟರ್​​ (ಪಿಎಸ್ಐ PSI Recruitment) ನೇಮಕಾತಿ ವೇಳೆ ನಡೆದಿರುವ ಅಗಾಧ ಅಕ್ರಮದಲ್ಲಿ ಸದ್ಯಕ್ಕೆ ಕಿಂಗ್ ಪಿನ್ ಎನ್ನಲಾಗಿರುವ ರುದ್ರಗೌಡ ಪಾಟೀಲ್ ಬಂಧನವಾಗುತ್ತಿದ್ದಂತೆ ಅನೇಕರಿಗೆ ನಡುಕ ಶುರುವಾಗಿದೆ. ಥರಹೇವಾರಿ, ರಂಗುರಂಗಿನ ಬೆಳವಣಿಗೆಗಳೂ, ಅಕ್ರಮಗಳು ಕಣ್ಣಿಗೆ ರಾಚುತ್ತಿವೆ. ಈ ಮಧ್ಯೆ, ಪರಮ ಶಿಸ್ತಿನ ಪೊಲೀಸ್​ ಇಲಾಖೆಗೆ ಸೇರುವ ಮುನ್ನ ವಸ್ತ್ರ ಸಂಹಿತೆಯನ್ನು ಕಡೆಗಣಿಸಿ, ಇನ್ನೂ ನೇಮಕಾತಿಯೇ ಆಖೈರು ಆಗದಿದ್ದರೂ ಆಯ್ಕೆಗೊಂಡಿರುವ ಅಭ್ಯರ್ಥಿಯೊಬ್ಬರು ತಮ್ಮೂರಿನ ಜನತೆಯ ಮುಂದೆ ಪಿಎಸ್ಐ ಸಮವಸ್ತ್ರ ಧರಿಸಿ, ಭಾಷಣ ಮಾಡಿರುವ ಪ್ರಸಂಗ ನಡೆದಿದೆ. ಇದು ಸ್ವಲ್ಪಅತಿರೇಕದ್ದೇ ಅನಿಸಿದ್ದರೂ, ಸದರಿ ಅಭ್ಯರ್ಥಿ ನಿಜಕ್ಕೂ ಪ್ರಾಮಾಣಿಕವಾಗಿ 27ನೇ ರ್ಯಾಂಕ್​ ಗಳಿಸಿ, ಆಯ್ಕೆಯಾಗಿದ್ದರೆ ಅತ್ಯುತ್ಸಾಹದಲ್ಲಿ ಡ್ರೆಸ್​ ಹಾಕಿಕೊಂಡು, ಸ್ವಲ್ಪ ಯಡವಟ್ಟು ಮಾಡಿಕೊಂಡಿದ್ದಾರೆ ಎನ್ನಬಹುದು.

ಹೌದು ಪಿಎಸ್ಐ ಆಗಿ ಆಯ್ಕೆಯಾಗಿರುವ (PSI Recruitment) ಬಸನಗೌಡ ಕರೇಗೌಡ ಅವರು 27ನೇ ರ್ಯಾಂಕ್​ ಪಡೆದಿದ್ದಾರೆ. ಇವರು ಮೂಲತಃ ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದ ನಿವಾಸಿ. ಸದ್ಯಕ್ಕೆ ಕಾನ್ಸ್​ಟೇಬಲ್​ ಆಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ, ಪಿಎಸ್ಐ ಪರೀಕ್ಷೆ ಬರೆದು, ಅತ್ಯುತ್ತಮ ಎನ್ನಬಹುದಾದ 27ನೇ ರ್ಯಾಂಕ್​ ಪಡೆದು, ಆಯ್ಕೆಯೂ ಆಗಿದ್ದಾರೆ. ಆದರೆ ವಿಷಯ ಅದಲ್ಲ; ಪಿಎಸ್ಐ ಸೆಲೆಕ್ಷನ್ ಆಗಿದ್ದಕ್ಕೆ ಇವರು ತಮ್ಮ ಹುಟ್ಟೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್ಐ ಡ್ರೆಸ್ ಹಾಕ್ಕೊಂಡು ಮಿಂಚಿದ್ದಾರೆ! ಹೀಗೆ ಬಿಲ್ಡ್ ಅಪ್ ಕೊಟ್ಟ ಬಸನಗೌಡ ಕರೇಗೌಡ ಅವರು ಜನವರಿ 19, 2022ರಂದು ಬಿಡುಗಡೆಯಾಗಿದ್ದ ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ಶ್ರೇಣಿ ಪಡೆದಿದ್ದಾರೆ. ಒಟ್ಟು 545 ಪಿಎಸ್ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿಯಲ್ಲಿ ಬಸನಗೌಡ ಸಹ ಸೆಲೆಕ್ಟ್ ಆಗಿದ್ದಾರೆ.

ಸದರಿ ಬಸನಗೌಡ ಕರೇಗೌಡ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾನಸ್ಟೇಬಲ್ ಆಗಿದ್ದಾರೆ. ಪಿಎಸ್ಐ ಸೆಲೆಕ್ಷನ್ ಆಗಿದ್ದಕ್ಕೆ ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್ಐ ಡ್ರೆಸ್ ಹಾಕ್ಕೊಂಡು ಭಾಗವಹಿಸಿ, ಮಿಂಚಿದ್ದರು. ಪಿಎಸ್ಐ ಡ್ರೆಸ್ ಹಾಕ್ಕೊಂಡು ಭಾಷಣ ಸಹ ಬಿಗಿದಿದ್ದಾರೆ ಬಸನಗೌಡ ಸಾಹೇಬರು!

PSI Recruitment Scam ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿಯ ಸಹಾಯಕ ತನಿಖಾಧಿಕಾರಿಗಳು ಏಪ್ರಿಲ್ 20, 2022ರಂದು ತನಿಖೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. 50 ಜನರಿಗೆ ನೀಡಿದ್ದ ನೊಟೀಸ್ ಪಟ್ಟಿಯಲ್ಲಿ ಬಸನಗೌಡ ಕರೇಗೌಡ್ರ ಹೆಸರು ಸಹ ಇತ್ತು. ಅಕ್ಟೋಬರ್ 3, 2021ರಂದು ಬಸನಗೌಡ ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದಿದ್ದರು.

ಕೊನೆಯಲ್ಲಿ ಹೇಳಬೇಕು ಅಂದರೆ… ಕರ್ನಾಟಕ ಪೊಲೀಸ್​ ಇಲಾಖೆಗೆ ಅತ್ಯುತ್ತಮ ಪೊಲೀಸ್​ ಸಬ್​ ಇನ್ಸ್​​ಪೆಕ್ಟರ್​​ ಗಳನ್ನು ಆಯ್ಕೆ ಮಾಡಬೇಕು ಎಂಬ ಸದುದ್ದೇಶದಿಂದ ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್​ ಅವರು ಇಡೀ ದೇಶಕ್ಕೆ ಮಾದರಿಯಾದ ಅತ್ಯುತ್ತಮ ಆಯ್ಕೆ ವ್ಯವಸ್ಥೆಯನ್ನು ತಂದಿದ್ದರು. ಆದರೆ ಅವರ ಆಶಯಕ್ಕೆ ಎಳ್ಳುನೀರು ಬಿಡುವಂತೆ, ಪೊಲೀಸ್​ ವ್ಯವಸ್ಥೆಗೇ ಸಡ್ಡು ಹೊಡೆಯುವಂತೆ, ಕಳ್ಳರ ಕೂಟವು ರಂಗೋಲಿ ಕೆಳಗೆ ನುಗ್ಗಿದೆ. ಇಡೀ ವ್ಯವಸ್ಥೆಯನ್ನು ದೂಷಿಸುವಂತೆ, ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಿಟ್ಟಿದೆ. ಅಂತಹುದರಲ್ಲಿ ಅತ್ಯುತ್ತಮ ರ್ಯಾಂಕ್​ ಗಳಿಸಿ, ಆಯ್ಕೆಗೊಂಡಿರುವ ಅರ್ಹ ಅಭ್ಯರ್ಥಿಗಳನ್ನೂ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.

Published On - 4:13 pm, Sat, 23 April 22