ಹಾವೇರಿ: ಕಾಂಗ್ರೆಸ್ನ ಮಹಾನಾಯಕ, ಬಿಜೆಪಿಯ ಯುವರಾಜರದ್ದು ಸಿಡಿ ಉತ್ಪಾದಿಸುವ ಎರಡು ಫ್ಯಾಕ್ಟರಿಗಳು ಇವೆ ಎಂದು ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶಾಸಕ ಯತ್ನಾಳ್ ಹೇಳಿದ್ದಾರೆ. ಇವತ್ತು ಹೆಸರು ಬಂದಿರುವ ಕಾಂಗ್ರೆಸ್ ಪಕ್ಷದ ನಾಯಕ ಇಂತಹ ಸಿಡಿಗಳನ್ನ ಖರೀದಿ ಮಾಡ್ತಾರೆ ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ. ಕೆಲ ಹೆಣ್ಮಕ್ಕಳನ್ನ ಬಿಟ್ಟು ಬ್ಲ್ಯಾಕ್ಮೇಲ್ ಮಾಡಿ ಖರೀದಿಸ್ತಾರೆ. ಒಂದು ವೇಳೆ ಸಹಕಾರ ನೀಡದಿದ್ರೆ ಭಯಪಡಿಸುತ್ತಾರೆ. ತೊಂದರೆ ಕೊಟ್ರೆ ಸಿಡಿ ಬಿಡ್ತೀನಿ ಎಂದು ಭಯಪಡಿಸ್ತಾರೆ. ಬಿಜೆಪಿ, ಕಾಂಗ್ರೆಸ್ನಲ್ಲಿ ಎಷ್ಟೋ ಶಾಸಕರು ಭಯದಲ್ಲಿದ್ದಾರೆ ಎಂದು ಯತ್ನಾಳ್ ಹೇಳಿದರು.
ಈಗ ಕಾಂಗ್ರೆಸ್ ಮಹಾನಾಯಕನ ಹೆಸರು ಹೊರಬಂದಿದೆ. ಕೆಲ ದಿನಗಳಲ್ಲಿ ಬಿಜೆಪಿ ಯುವರಾಜನದ್ದು ಹೊರಬರಲಿದೆ ಎಂದು ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶಾಸಕ ಯತ್ನಾಳ್ ಹೇಳಿದ್ದಾರೆ.
‘ರಮೇಶ್ ಜಾರಕಿಹೊಳಿ ಡೆಡ್ ಲೈನ್ ಬಗ್ಗೆ ನನಗೆ ಗೊತ್ತಿಲ್ಲ’
ಇತ್ತ, ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದ ಬಗ್ಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ. ರಮೇಶ್ ಜಾರಕಿಹೊಳಿ ಡೆಡ್ ಲೈನ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಅತ್ತ, ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಆಹಾರ ಸಚಿವ ಉಮೇಶ್ ಕತ್ತಿ ನಿರಾಕರಿಸಿದ್ದಾರೆ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
‘ಯುವತಿ ಸೋದರರೇ ಏನು ಹೇಳಿದ್ದಾರೆ ನೋಡಿ ಬಿಡಿ ಅಷ್ಟೇ’
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಬಗ್ಗೆ ಯುವತಿ ಸೋದರರೇ ಏನು ಹೇಳಿದ್ದಾರೆ ನೋಡಿ ಬಿಡಿ ಅಷ್ಟೇ ಎಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
‘ಕಾಂಗ್ರೆಸ್ ಪಕ್ಷ ಅಂದ್ರೇ ಬಸ್ ಸ್ಟ್ಯಾಂಡ್ ಆದಂಗೆ ಆಗಿದೆ’
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಟ್ಯಾಂಡ್ ಅಂತಾ ಇಲ್ಲ. ಕಾಂಗ್ರೆಸ್ ಪಕ್ಷ ಅಂದ್ರೇ ಬಸ್ ಸ್ಟ್ಯಾಂಡ್ ಆದಂಗೆ ಆಗಿದೆ ಎಂದು ಕಾಂಗ್ರೆಸ್ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಬಸ್‌ಗಳು ಬರುತ್ತವೆ, ಟೆಂಪೊಗಳೂ ನುಗ್ಗುತ್ತವೆ. ಕಾಂಗ್ರೆಸ್ ಹ್ಯಾವ್ ನೋ ಸ್ಟ್ಯಾಂಡ್ ಎಂದು ಸಚಿವ ಜೋಶಿ ಹೇಳಿದರು. ಕಾಂಗ್ರೆಸ್‌ಗೆ ಐಡಿಯಾಲಾಜಿನಲ್ಲಿ ಯಾವುದೇ ನಂಬಿಕೆ ಇಲ್ಲ. ಒಂದೆಡೆ ಶಿವಸೇನೆ ಪಕ್ಷದ ಜೊತೆ ಸೇರಿ ಸರ್ಕಾರ ಮಾಡ್ತಾರೆ. ಒಂದೆಡೆ ಕಮ್ಯುನಿಸ್ಟ್ ವಿರೋಧ ಮಾಡುವ ಕಾಂಗ್ರೆಸ್‌ನವರು ಮತ್ತೊಂದೆಡೆ ಕಮ್ಯುನಿಸ್ಟ್ ಜೊತೆ ಕಾಂಗ್ರೆಸ್‌ನವ್ರು ಹೋಗ್ತಾರೆ ಎಂದು ಜೋಶಿ ಹೇಳಿದರು.
ಜೊತೆಗೆ, ಬಂಗಾಳದಲ್ಲಿ ದೀದಿಯವರು ಮನೆಗೆ ಹೋಗುವುದು ಖಚಿತ. ದೀದಿಯವರ ಅರ್ಧದಷ್ಟು ಪಾರ್ಟಿ ಖಾಲಿಯಾಗಿದೆ. ಬರಗಾಲದಲ್ಲಿ ಜನ ಗುಳೆ ಹೋಗುವ ರೀತಿ ಪಕ್ಷ ಬಿಡ್ತಿದ್ದಾರೆ. ಬಂಗಾಳದಲ್ಲಿ ಹಿಂಸಾಚಾರ ಕಮ್ಯುನಿಸ್ಟರನ್ನು ಮೀರಿಸುವಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಇದನ್ನೂ ಓದಿ: ಸಿಡಿ ಯುವತಿ ಪೋಷಕರ ಹೇಳಿಕೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ-ಕಚೇರಿಗೆ ಹೆಚ್ಚಿನ ಭದ್ರತೆ
Published On - 4:54 pm, Sat, 27 March 21