ಹೆಣದ ಮೇಲೆ ಹಣ ಮಾಡಬೇಡಿ, ನಿಮಗೆ ಒಳ್ಳೆಯದಾಗಲ್ಲ; ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ಆಕ್ರೋಶ

|

Updated on: May 19, 2021 | 11:22 AM

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಜಿಲ್ಲೆಗಳಿಗೆ ಅನುಭವಿ ಜಿಲ್ಲಾಧಿಕಾರಿಗಳ ಅವಶ್ಯಕತೆಯಿದೆ. ಜಿಲ್ಲೆಗಳಿಗೆ ಐಎಎಸ್ ಕಾರ್ಯದರ್ಶಿಗಳನ್ನು ನೇಮಿಸಿ. ಪ್ರತಿಯೊಬ್ಬರಿಗೂ 100 ಕೋಟಿ ರೂಪಾಯಿ ನೀಡಿ. ಎಲ್ಲಾ ಅಧಿಕಾರ, ಜವಾಬ್ದಾರಿಯನ್ನು ಅವರಿಗೆ ನೀಡಿ.

ಹೆಣದ ಮೇಲೆ ಹಣ ಮಾಡಬೇಡಿ, ನಿಮಗೆ ಒಳ್ಳೆಯದಾಗಲ್ಲ; ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ಆಕ್ರೋಶ
MLC ಹೆಚ್​.ವಿಶ್ವನಾಥ್​
Follow us on

ಮೈಸೂರು: ಹೆಣದ ಮೇಲೆ ಹಣ ಮಾಡಬೇಡಿ, ನಿಮಗೆ ಒಳ್ಳೆಯದಾಗಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್, ಎಲ್ಲ ಅಧಿಕಾರ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಬಳಿ ಇದೆ. ರಾಜ್ಯ ಸರ್ಕಾರದ ಆಡಳಿತ ಕೇಂದ್ರೀಕರಣ ಆಗಿದೆ. ಇದೆಲ್ಲವೂ ಪರ್ಸಂಟೇಜ್​ಗಾಗಿ ಮಾಡಿಕೊಂಡಿರುವುದು. ಮೈಸೂರು ಡಿಸಿಗೆ 10 ಪೈಸೆ ಖರ್ಚು ಮಾಡುವ ಅಧಿಕಾರವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಆ ಅಧಿಕಾರವಿಲ್ಲ. ಯಾವುದೇ ಬಿಲ್ ಪಾಸಾಗಲು ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಜಿಲ್ಲೆಗಳಿಗೆ ಅನುಭವಿ ಜಿಲ್ಲಾಧಿಕಾರಿಗಳ ಅವಶ್ಯಕತೆಯಿದೆ. ಜಿಲ್ಲೆಗಳಿಗೆ ಐಎಎಸ್ ಕಾರ್ಯದರ್ಶಿಗಳನ್ನು ನೇಮಿಸಿ. ಪ್ರತಿಯೊಬ್ಬರಿಗೂ 100 ಕೋಟಿ ರೂಪಾಯಿ ನೀಡಿ. ಎಲ್ಲಾ ಅಧಿಕಾರ, ಜವಾಬ್ದಾರಿಯನ್ನು ಅವರಿಗೆ ನೀಡಿ. ಸಾವುಗಳಿಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡಿ ಎಂದು ಸರ್ಕಾರಕ್ಕೆ ವಿಶ್ವನಾಥ್ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳು ನಮಗೆ ಅಧಿಕಾರ ಇಲ್ಲ ಎನ್ನುವುದನ್ನು ಪ್ರಧಾನಿಗೆ ಹೇಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಡಿಸಿಗೆ ಮನವಿ ಮಾಡಬಾರದು. ಕಮಾಂಡ್ ಮಾಡಬೇಕು. ಡಿಸಿ ಒಂದು ದಿನ ಹಳ್ಳಿ ಕಡೆ ಹೋಗಲಿಲ್ಲ. ಟಾಸ್ಕ್ ಫೋರ್ಸ ಸಹಾ ಹೋಗಲಿಲ್ಲ. ಹಳ್ಳಿಗಳ ಗೋಳು ಯಾರು ಕೇಳುತ್ತಿಲ್ಲ. ಸಿದ್ದರಾಮಯ್ಯ ಅವರೇ ಮಾತಾಡಿ ಗ್ರಾಮೀಣ ಭಾಗದಲ್ಲಿ ಅಹಿಂದ ಜನರು ಸಾಯುತ್ತಿದ್ದಾರೆ ಎಂದು ಹೇಳಿದರು.

ಎಲ್ಲವನ್ನೂ ಕೊಟ್ಟು ಮತ್ತೆ 15 ದಿನ ಲಾಕ್​ಡೌನ್​ ಮಾಡಿ. ಸಾಮನ್ಯ ಜ್ಞಾನವಿಲ್ಲದೆ ಏನೇನೋ ತೀರ್ಮಾನ ಮಾಡಬಾರದು. ವಾರಕ್ಕೆ 1 ದಿನ ಮಾತ್ರ ಅವಕಾಶ ಕೊಟ್ಟು ಲಾಕ್​ಡೌನ್​ ಮಾಡಿ ಎಂದರು.

ಇದನ್ನೂ ಓದಿ

CM Yediyurappa PC LIVE: ಲಾಕ್​ಡೌನ್​ ಮುಂದುವರೆಸುವಿಕೆ, ಪ್ಯಾಕೇಜ್​ ಘೋಷಣೆ ಸೇರಿದಂತೆ ಮಹತ್ತರ ವಿಚಾರಗಳ ಬಗ್ಗೆ ಯಡಿಯೂರಪ್ಪ ಸಭೆ

ದೆಹಲಿಯಲ್ಲಿ ಕೊವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಕಾಣಿಸುತ್ತಿವೆ ಖಾಲಿ ಬೆಡ್

(BJP MLC H Vishwanath has expressed outrage against the Karnataka government)