
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ರಾಜ್ಯದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಡಾಕ್ಟರ್ ಮಗ ಮಾತ್ರ ಡಾಕ್ಟರ್ ಆಗ್ಬೇಕಾ? ಇಂಜಿನಿಯರ್ ಮಗ ಮಾತ್ರ ಇಂಜಿನಿಯರ್ ಆಗ್ಬೇಕಾ ? ರೈತನ ಮಗ ಡಾಕ್ಟರ್, ಇಂಜಿನಿಯರ್ ಆಗಬಾರದಾ? APMC ಕಾಯ್ದೆಯಿಂದ ರೈತರಿಗೆ ಲಾಭವಾಗುತ್ತೆ ವಿನಃ, ನಷ್ಟವಾಗಲ್ಲ. ರೈತನಿಗೆ ಲಾಭವಾಗೋದಾದರೆ ನೀವ್ಯಾಕೆ ವಿರೋಧ ಮಾಡ್ತೀರಾ? ಎಂದು BJP ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ನಿಮಗೆ ಹೋರಾಟ ಮಾಡೋ ಹಕ್ಕಿದೆ. ಹಾಗೆಯೇ, ತಾವು ಬೆಳೆದ ಬೆಳೆಯನ್ನು ಯಾರಿಗಾದರೂ ಮಾರಾಟ ಮಾಡುವ ಹಕ್ಕು ಅವರಿಗಿದೆ. ರೈತರ ಪರವಾಗಿರೋ ಕಾಯ್ದೆ ಇದು. ಇದಕ್ಕಾಗಿ ಬಂದ್ ಮಾಡೋದು ಸರಿಯಲ್ಲ. ಕಾಲ ಬದಲಾಗಿದೆ. ರಘುಪತಿ ರಾಘವ ರಾಜಾರಾಂ ‘ಪೂರಾ ವೇತನ್-ಆಧಾ ಕಾಮ್’ ಹಾಗಾಗಬಾರದು ಎಂದು BJP ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.
ಪ್ರಧಾನಿ ಎಷ್ಟು ಗಂಟೆ ಕೆಲಸ ಮಾಡ್ತಿದ್ದಾರೆ? ದೇವೇಗೌಡರು ಎಷ್ಟು ಗಂಟೆ ಕೆಲಸ ಮಾಡ್ತಾರೆ? ಸುಧಾಮೂರ್ತಿ ಎಷ್ಟು ಗಂಟೆ ಕೆಲಸ ಮಾಡ್ತಾರೆ? ಹಾಗೆಯೇ ಎಲ್ಲರೂ ಹೆಚ್ಚೆಚ್ಚು ಕೆಲಸ ಮಾಡಲು ರೆಡಿಯಾಗಬೇಕು. ಉದ್ದಿಮೆ ಮತ್ತು ಕಾರ್ಮಿಕ ಈ ಎರಡನ್ನೂ ಹೇಗೆ ಮೇಲೆತ್ತಬೇಕು ಅನ್ನೋದರ ಬಗ್ಗೆ ಯೋಚನೆ ಮಾಡಬೇಕು ಅಂತಾ ರವಿಕುಮಾರ್ ಹೇಳಿದ್ದಾರೆ.