ಸಿದ್ದರಾಮಯ್ಯರನ್ನು ಬಿಜೆಪಿ ವಕ್ತಾರರಾಗಿ ನೇಮಕ ಮಾಡಿಲ್ಲ: ಡಿಸಿಎಂ ಗೋವಿಂದ ಕಾರಜೋಳ

ನಮ್ಮ ಪಕ್ಷದ ಬಗ್ಗೆ ಮಾತಾಡೋದು ಅವರಿಗೆ ಶೋಭೆ ತರಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಸುಳ್ಳಿನ ಸರದಾರರಾಗುತ್ತಿದ್ದಾರೆ ಎಂದು ಡಿಸಿಎಂ ಕಾರಜೋಳ ಹೇಳಿದ್ದಾರೆ.

ಸಿದ್ದರಾಮಯ್ಯರನ್ನು ಬಿಜೆಪಿ ವಕ್ತಾರರಾಗಿ ನೇಮಕ ಮಾಡಿಲ್ಲ: ಡಿಸಿಎಂ ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
Edited By:

Updated on: Jan 19, 2021 | 6:00 PM

ಬಾಗಲಕೋಟೆ: ಏಪ್ರಿಲ್ ಬಳಿಕ ಸಿಎಂ ಬದಲಾವಣೆಯಾಗುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ ಗೋವಿಂದ ಕಾರಜೋಳ, ಸಿದ್ದರಾಮಯ್ಯರನ್ನು ಬಿಜೆಪಿ ವಕ್ತಾರರಾಗಿ ನೇಮಕ ಮಾಡಿಲ್ಲ ಎಂದಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಮಾತನಾಡಿದ ಡಿಸಿಎಂ ನಮ್ಮ ಪಕ್ಷದ ಬಗ್ಗೆ ಮಾತಾಡೋದು ಅವರಿಗೆ ಶೋಭೆ ತರಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಸುಳ್ಳಿನ ಸರದಾರರಾಗುತ್ತಿದ್ದಾರೆ. ಪದೇ ಪದೇ ಡೇಟ್ ಕೊಡೋದು ಈಗ ನೋಡ್ರಿ ಆಗ ನೋಡ್ರಿ ಅನ್ನೋದು. ಸಣ್ಣವರಿದ್ದಾಗ ನಮಗೆ ಗದರಿ ಗಮ್ಮತ್ತು ತೋರಿಸ್ತಿದ್ರು. ದೊಡ್ಡ ದೊಡ್ಡ ಡಬ್ಬಿ ಹೊತ್ತು ಊರೂರಿಗೆ ಬರ್ತಿದ್ರು‌. ಮುಂಬೈ ನೋಡ್ರಿ, ಹೇಮಾಮಾಲಿನಿ ನೋಡ್ರಿ ಅಂತ ಗರ್ದಿ ಗಮ್ಮತ್ತು ತೋರಿಸ್ತಿದ್ರು. ಹಂಗ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ ಕಾರಜೋಳ.

ಸಮಸ್ಯೆ ಆಲಿಸದ ಡಿಸಿಎಂ ಕಾರಜೋಳ ವಿರುದ್ಧ ವಿದ್ಯಾರ್ಥಿನಿಯರ ಕಿಡಿ