Sidlaghatta Assembly Constituency: ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅಳಿಯ ರಾಮಚಂದ್ರ ಗೌಡಗೆ ಶಿಡ್ಲಘಟ್ಟ ಬಿಜೆಪಿ ಟಿಕೆಟ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಯಾಗಿದೆ. ಅಚ್ಚರಿ ಎಂಬಂತೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅಳಿಯ ರಾಮಚಂದ್ರಗೌಡ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ.

Sidlaghatta Assembly Constituency: ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅಳಿಯ ರಾಮಚಂದ್ರ ಗೌಡಗೆ ಶಿಡ್ಲಘಟ್ಟ ಬಿಜೆಪಿ ಟಿಕೆಟ್
ಶಿಡ್ಲಘಟ್ಟ: ರಾಮಚಂದ್ರ ಗೌಡಗೆ ಬಿಜೆಪಿ ಟಿಕೆಟ್
Updated By: ಸಾಧು ಶ್ರೀನಾಥ್​

Updated on: Apr 13, 2023 | 12:20 AM

ಚಿಕ್ಕಬಳ್ಳಾಫುರ: ಕಾಂಗ್ರೆಸ್​​​ನ ಹಿರಿಯ ತಲೆಗಳ ವಂಶಸ್ಥರು ಒಬ್ಬೊಬ್ಬರಾಗಿ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಎಕೆ ಆ್ಯಂಟನಿ ಕುಟುಂಬದ ನಂತರ ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ (Kagodu Thimmappa) ಅವರ ಪುತ್ರಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಜೆಡಿಎಸ್​ನ ಪ್ರಬಲ ನಾಯಕ ಜಿಟಿ ದೇವೇಗೌಡ (GT Devegowda) ಅವರ ಅಳಿಯನಿಗೆ ಬಿಜೆಪಿ ಮಣೆ ಹಾಕಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಅಚ್ಚರಿ ಎಂಬಂತೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅಳಿಯ ರಾಮಚಂದ್ರಗೌಡ (Ramachandra Gowda) ಅವರಿಗೆ ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮೆರೆಗೆ ರಾಮಚಂದ್ರಗೌಡ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.

ಇದನ್ನೂ ಓದಿ: BJP Candidates Second List: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; ಇಲ್ಲಿದೆ ವಿವರ

ಶಿಡ್ಲಘಟ್ಟ ಪಕ್ಕದ ಚಿಂತಾಮಣಿ ತಾಲೂಕಿನ ಸಿಕಲ್ ಗ್ರಾಮದ ವಾಸಿ ರಾಮಚಂದ್ರಗೌಡ ಅವರು ಸಿವಿಲ್ ಇಂಜಿಯರ್ ಗುತ್ತಿಗೆದಾರನಾಗಿದ್ದು, ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ರಾಮಚಂದ್ರಗೌಡ ಅವರು ಈಗಾಗಲೇ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಅಲೆ ಸೃಷ್ಟಿಸಿದ್ದಾರೆ. ಮಾತ್ರವಲ್ಲದೆ, ಶತಾಯ ಗತಾಯ ಶಿಡ್ಲಘಟ್ಟದಲ್ಲಿ ಬಿಜೆಪಿ ಅರಳಿಸಲು ಸಚಿವ ಸುಧಾಕರ್ ತಂತ್ರಗಾರಿಕೆ ಹಾಕಿಕೊಂಡಿದ್ದಾರೆ. ಜಿಟಿ ದೇವೇಗೌಡ ಅವರ ಮಗಳನ್ನು ರಾಮಚಂದ್ರಗೌಡ ತಮ್ಮ ಆನಂದ್​ ವಿವಾಹವಾಗಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:56 pm, Wed, 12 April 23