Kunthi Hole ಚಿಕ್ಕಮಗಳೂರು: ಇಷ್ಟಾರ್ಥ ಕರುಣಿಸುವ ಪಾಂಡವರ ಕಾಲದ ಕುಂತಿಹೊಳೆ; ಆಗಬೇಕಿದೆ ಪಾವಿತ್ರ್ಯತೆ ಉಳಿಸುವ ಕಾರ್ಯ

ಐತಿಹಾಸಿಕ ಹಿನ್ನೆಲೆಯುಳ್ಳ ಪವಿತ್ರ ಪುಣ್ಯ ಸ್ಥಳವಾಗಿರುವ ಕುಂತಿ ಹೊಳೆಯು ಇಂದು ಪವಿತ್ರ ಸ್ಥಳವಾಗಿ ಮಾರ್ಪಡುತ್ತಿದ್ದು ಇಲ್ಲಿಗೆ ಬರುವ ಭಕ್ತರು, ಪ್ರವಾಸಿಗರು ಸ್ನಾನ ಮಾಡಿದ ಬಳಿಕ ತಮ್ಮ ಹಳೆಯ ಬಟ್ಟೆ, ಪ್ಲಾಸ್ಟಿಕ್ ಕವರ್ ಸೇರಿದಂತೆ ಇನ್ನಿತರ ತ್ಯಜ್ಯಗಳನ್ನು ಎಲ್ಲಂದರಲ್ಲಿ ಹಾಕಿ ಮೈಲಿಗೆ ಮಾಡುವುದರೊಂದಿಗೆ ಅಪವಿತ್ರಗೊಳ್ಳಲು ಕಾರಣವಾಗುತ್ತಿದ್ದಾರೆ.

Kunthi Hole ಚಿಕ್ಕಮಗಳೂರು: ಇಷ್ಟಾರ್ಥ ಕರುಣಿಸುವ ಪಾಂಡವರ ಕಾಲದ ಕುಂತಿಹೊಳೆ; ಆಗಬೇಕಿದೆ ಪಾವಿತ್ರ್ಯತೆ ಉಳಿಸುವ ಕಾರ್ಯ
ಕುಂತಿಹೊಳೆ
Follow us
Rakesh Nayak Manchi
|

Updated on: Apr 13, 2023 | 9:35 AM

ಚಿಕ್ಕಮಗಳೂರು: ಮಹಾಭಾರತ ಕಾಲದಲ್ಲಿ ಪಾಂಡವರ (Pandavas) ವನವಾಸದ ಅವಧಿಯಲ್ಲಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಂಚಾರ ಮಾಡಿದ್ದರು ಎನ್ನುವುದಕ್ಕೆ ಒಂದಷ್ಟು ಐತಿಹಾಸಿಕ ಕುರುಹುಗಳು ಇಂದಿಗೂ ಕಾಣಸಿಗುತ್ತಿದೆ. ಪಾಂಡವರು ತಂಗಿದ್ದ ಸ್ಥಳವೊಂದು ಇವತ್ತು ಪವಿತ್ರ ಪುಣ್ಯ ಕ್ಷೇತ್ರವಾಗಿ, ಇಷ್ಟಾರ್ಥ ಸಿದ್ಧಿಯ ಕೇಂದ್ರವಾಗಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಕುಂತಿಹೊಳೆಯಾಗಿ (Kunthi Hole) ಮಾರ್ಪಟ್ಟಿದೆ. ಈ ಪುಣ್ಯ ಸ್ಥಳವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಕೇಂದ್ರದಿಂದ ಮರವಂಜಿ ರಸ್ತೆಯಲ್ಲಿ 5ಕಿ.ಮೀ. ಕ್ರಮಿಸಿದರೆ ಸಿಗುತ್ತದೆ.

ಈ ಪವಿತ್ರ ಕ್ಷೇತ್ರವನ್ನು ಕುಂತಿಹೊಳೆ ಎಂದೇ ಕರೆಯಲಾಗುತ್ತದೆ. ಮಹಾಭಾರತದ ಕಾಲದಲ್ಲಿ ಪಾಂಡವರು ವನವಾಸಕ್ಕೆಂದು ಬಂದಿದ್ದಾಗ ಕುಂತಿಯು ಈ ಸ್ಥಳದಲ್ಲಿ ಸ್ನಾನ ಮಾಡಿದ್ದರಿಂದ ಈ ಸ್ಥಳಕ್ಕೆ ಕುಂತಿ ಹೊಳೆ ಎಂದು ಹೆಸರು ಬಂದಿದ್ದಾಗಿಯೂ, ಕುಂತಿನ ಸ್ನಾನ ಮಾಡುವಾಗ ಆಕೆಯ ಸೀರೆ ಜಾರಿ ನೀರಿನಲ್ಲಿ ಹೋಗಿ ಇಲ್ಲಿರುವ ಬಾವಿಯಲ್ಲಿ ಬಿದ್ದಿದ್ದಾಗಿಯೂ ಇತಿಹಾಸಕಾರರು ಹಾಗೂ ಹಿರಿಯರು ಇಂದಿಗೂ ಹೇಳುತ್ತಾರೆ. ಈ ಪ್ರದೇಶದಲ್ಲಿ ಬಯಲು ಸೀಮೆಯ ಜೀವನಾಡಿಯಾಗಿರುವ ವೇದಾವತಿ ನದಿ ಹರಿಯುತ್ತದೆ.

ಇಲ್ಲಿ ಹರಿಯುವ ವೇದಾವತಿ ನದಿಯ ನೀರು ಕೂಡಾ ಈ ಸ್ಥಳದಲ್ಲಿ ಚಮತ್ಕಾರವನ್ನು ಸೃಷ್ಟಿ ಮಾಡುವುದು ಇಲ್ಲಿಗೆ ಬರುವ ಭಕ್ತರು, ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿ ಕೇವಲ ಎರಡು ಕಲ್ಲು ಬಂಡೆಗಳ ನಡುವೆ ನೀರು ಹರಿಯುವುದು ಮಾತ್ರವಲ್ಲ ಈ ವೇದಾವತಿ ನದಿಯ ದಂಡೆಯ ಮೇಲೆ ಕಲ್ಯಾಣ ರಾಮನ ದೇಗುಲವಿದ್ದು ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರತಿನಿತ್ಯ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಅಕ್ಕಪಕ್ಕದ ಊರುಗಳಿಂದ ಜನ ಬಂದು ಇಲ್ಲಿ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಬೇಡಿಕೊಳ್ಳುವುದು ವಾಡಿಕೆಯಾಗಿದೆ.

ಇದನ್ನೂ ಓದಿ: End of Kali Yug: ಈ ಕೇದಾರನಾಥ ದೇಗುಲ ಅನೇಕ ಪವಾಡಗಳ ಆಲಯ, ನಾಲ್ಕು ಸ್ತಂಭಗಳಲ್ಲಿ ಆ ಕೊನೆಯ ಕಂಬ ಮುರಿದರೆ ಕಲಿಯುಗ ಅಂತ್ಯವಾಗಲಿದೆ!

ಈ ಕುಂತಿ ಹೊಳೆಗೆ ಕೇವಲ ಮನುಷ್ಯರು ಮಾತ್ರವಲ್ಲ ದೇವರುಗಳನ್ನೂ ತಂದು ಇಲ್ಲಿನ ಜಲದಿಂದ ಅಭ್ಯಂಜನ, ಸ್ನಾನ, ಅಭಿಷೇಕ ಮಾಡುವ ಮೂಲಕ ದೇವತೆಗಳಿಗೂ ಪುಣ್ಯಸ್ನಾನ ಮಾಡಿಸುವುದು ತಲತಲಾಂತರಗಳಿಂದ ನಡೆದುಕೊಂಡು ಬಂದಿದೆ. ಯಾವುದಾದರೂ ಹೊಸ ವಿಗ್ರಹವನ್ನು ಮಾಡಿಸಿದರೆ ಅಥವಾ ಜಾತ್ರೆ, ಹಬ್ಬಹರಿದಿನಗಳಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಇಲ್ಲಿ ತಂದು ನದಿಯ ದಡದಲ್ಲಿರುವ ಕಲ್ಯಾಣ ರಾಮನ ದೇಗುಲದ ಆವರಣದಲ್ಲಿಟ್ಟು ಪೂಜೆ ಮಡಿಕೊಂಡು ಹೋಗುತ್ತಾರೆ. ಇಲ್ಲಿ ಬಂದು ಪೂಜೆ ಮಾಡಿದರೆ ವಿವಾಹ ಭಾಗ್ಯ, ಸಂತಾನಯೋಗ ಸಿಗುತ್ತದೆ ಎಂಬ ನಂಬಿಕೆ ಆಳವಾಗಿ ಬೇರೂರಿದೆ.

ಇಂತಹ ಪವಿತ್ರ ಪುಣ್ಯಕ್ಷೇತ್ರ ಇಂದು ಆಧುನಿಕತೆಯ ಭರಾಟೆಗೆ ಸಿಲುಕಿ ಪಾಪ ವಿಮೋಚನೆಗೆಂದು ಬರುವವರು ಸ್ನಾನ ಮಾಡಿ ಬಳಿಕ ಇಲ್ಲಿಯೇ ಬಿಟ್ಟು ಹೋಗುವ ಬಟ್ಟೆ, ಪ್ಲಾಸ್ಟಿಕ್ ಸೇರಿದಂತೆ ಹಲವು ತ್ಯಾಜ್ಯಗಳಿಂದ ಮಲಿನವಾಗುತ್ತಿರುವುದರಿಂದ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವುದರ ಜೊತೆಗೆ ದೈವಭಕ್ತರು, ಪರಿಸರ ಪ್ರೇಮಿಗಳಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಡುತ್ತಿದೆ. ಸಂಬಂಧಪಟ್ಟ ಸ್ಥಳೀಯ ಆಡಳಿತ ಇತ್ತ ಗಮನಹರಿಸಿ ಈ ಐತಿಹಾಸಿಕ ಪವಿತ್ರ ಪುಣ್ಯಕ್ಷೇತ್ರದ ಪಾವಿತ್ರ್ಯತೆಯನ್ನ ಉಳಿಸಿ, ಧಾರ್ಮಿಕ ಭಾವನೆಗಳು ಮತ್ತಷ್ಟು ಹೆಚ್ಚುವಂತೆ ಮಾಡಬೇಕು ಎನ್ನುವುದು ಆಶಯವಾಗಿದೆ.

ಎಂದೂ ಬತ್ತದ ಕೊಳ

ಐತಿಹಾಸಿಕ ಹಿನ್ನೆಲೆಯುಳ್ಳ ಪವಿತ್ರ ಪುಣ್ಯಕ್ಷೇತ್ರ ಕುಂತಿಹೊಳೆಯಲ್ಲಿರುವ ಈ ಕೊಳ ಸರಿಸುಮಾರು 6-10 ಅಡಿಗಳಷ್ಟು ಆಳ ಮಾತ್ರ ಇದೆ ಎಂದು ಹೇಳಲಾಗುತ್ತಿದೆ. ಆದರೂ ಈ ಕೊಳ ಎಂತಹ ಬಿರು ಬೇಸಿಗೆಯ ದಿನಗಳಲ್ಲಿಯೂ ಬತ್ತಿಲ್ಲ ಹಾಗೂ ಇದರ ತಳವನ್ನು ಕಂಡವರಿಲ್ಲ ಎನ್ನವುದು ಪೂರ್ವಿಕರಿಂದ ಕಂಡುಕೊಂಡ ಹಾಗೂ ಹಿರಿಯ ಜೀವಗಳು ಇಂದಿಗೂ ಹೇಳಿಕೊಳ್ಳುವ ವಿಸ್ಮಯ ಹಾಗೂ ಸತ್ಯವಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಐದಾರು ವರ್ಷಗಳ ಕಾಲ ನಿರಂತರ ಬರಗಾಲ ಸಂಭವಿಸಿದ್ದಾಗಲೂ ಈ ಕೊಳ ಬತ್ತಿರಲಿಲ್ಲ, ನದಿ ಬತ್ತಿಹೋಗಿದ್ದರೂ ಕೊಳದಲ್ಲಿ ನೀರಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ವಿವಾಹ ಯೋಗ, ಸಂತಾನ ಭಾಗ್ಯ ಪ್ರಾಪ್ತಿ

ಸಾವಿರಾರು ವರ್ಷಗಳ ಹಿನ್ನೆಲೆಯುಳ್ಳ ಹಾಗೂ ಹಿಂದೂಗಳ ಧಾರ್ಮಿಕ ಸ್ಥಳವಾಗಿರುವ ಈ ಕುಂತಿಹೊಳೆ ಹಾಗೂ ಇಲ್ಲಿರುವ ಕಲ್ಯಾಣ ರಾಮನ ದೇಗುಲಗಳೆರೆಡೂ ಕೂಡಾ ವಿವಾಹ ಯೋಗ ಮತ್ತು ಸಂತಾನ ಭಾಗ್ಯ ನೀಡುತ್ತವೆ ಎಂಬ ನಂಬಿಕೆ ಸ್ಥಳೀಯರಲ್ಲಿ ಇಂದಿಗೂ ಮನೆ ಮಾಡಿದೆ. ವಿವಾಹ ಯೋಗವಿಲ್ಲದವರು ವೇದಾವತಿ ನದಿಯ ದಂಡೆಯಲ್ಲಿರು ಕಲ್ಯಾಣ ರಾಮನ ದೇಗುಲದಲ್ಲಿ ೯ ಬಿಂದಿಗೆ ನೀರು ಹಾಕಿಕೊಂಡು 9 ಪೂಜೆ ಸಲ್ಲಿಸಿ 9 ಸುತ್ತು ಪ್ರದಕ್ಷಿಣೆ ಹಾಕಿದರೆ ವರ್ಷ ತುಂಬುವುದರ ಒಳಗೆ ವಿವಾಹ ಯೋಗ ಕೂಡಿಬರುವುದು ಎಂದು ಹೇಳುತ್ತಾರೆ. ಮಕ್ಕಳಾಗದವರು ಕುಂತಿಹೊಳೆಯಲ್ಲಿ ಗಂಗಾ ಪೂಜೆ ಮಾಡಿ ಬೇಡಿಕೊಂಡರೆ ಸಂತಾನ ಭಾಗ್ಯ ಪ್ರಾಪ್ತಿಯಾಗುವುದು ಎಂಬುದು ಆಳವಾದ ನಂಬಿಕೆ ಹಾಗೂ ವಾಡಿಕೆಯಾಗಿದೆ. ಸ್ಥಳೀಯರು ಹಾಗೂ ಹಿರಿಯ ಜೀವಗಳು ಸಲಹೆ ನೀಡುತ್ತಾರೆ ಎನ್ನಲಾಗುತ್ತಿದೆ.

ಶಂಖತೀರ್ಥ ಎಂದೇ ಪ್ರಖ್ಯಾತಿ

ಮಹಾಭಾರತದ ಕಾಲದಲ್ಲಿ ಪಾಂಡವರ ತಾಯಿ ಕುಂತಿ ಸ್ನಾನ ಮಾಡಿದ್ದರಿಂದ ಕುಂತಿ ಹೊಳೆ ಎಂದು ಕರೆಯಿಸಿಕೊಳ್ಳುವ ಈ ಸ್ಥಳಕ್ಕೆ ಶಂಖತೀರ್ಥ ಎಂದೂ ಕೂಡಾ ಕರೆಯುತ್ತಾರೆ. ಇದಕ್ಕೆ ಶಂಖತೀರ್ಥ ಎಂಬ ಕೀರ್ತಿ ಸಿಗಲು ನಿಸರ್ಗದ ಚಮತ್ಕಾರವೇ ಕಾರಣ. ಪ್ರಶಾಂತವಾಗಿ ಹರಿಯುವ ನೀರು ಒಂದೆಡೆ ಇದ್ದಕ್ಕಿದ್ದಂತೆ ಮಾಯವಾಗಿ ಎರಡು ಅಡಿಗಳ ನಂತರ ಕಲ್ಲಿನೊಳಗಿಂದ ಮತ್ತೆ ಹೊರಜಿಗಿದು ಹರಿಯುತ್ತದೆ. ಈ ಜಾಗದಿಂದ ಸುಮಾರು 400 ಮೀಟರ್ ದೂರದಲ್ಲಿ ಒಂದು ನಿರ್ಧಿಷ್ಟ ಜಾಗದಲ್ಲಿ ನಿಂತು ನೋಡಿದರೆ ಶಂಖದಿಂದ ನೀರು ಬೀಳುತ್ತಿರುವಂತೆ ಕಾಣುತ್ತದೆ. ಆದ್ದರಿಂದಲೇ ಇದಕ್ಕೆ ಶಂಖತೀರ್ಥ ಎಂಬ ಹೆಸರು ಜನಜನಿತವಾಗಿದೆ ಎಂದು ಹೇಳಲಾಗುತ್ತದೆ.

ಅಪವಿತ್ರಗೊಳ್ಳುತ್ತಿರುವ ಪುಣ್ಯಸ್ಥಳ

ಐತಿಹಾಸಿಕ ಹಿನ್ನೆಲೆಯುಳ್ಳ ಪವಿತ್ರ ಪುಣ್ಯ ಸ್ಥಳವಾಗಿರುವ ಕುಂತಿ ಹೊಳೆಯು ಇಂದು ಪವಿತ್ರ ಸ್ಥಳವಾಗಿ ಮಾರ್ಪಡುತ್ತಿದ್ದು ಇಲ್ಲಿಗೆ ಬರುವ ಭಕ್ತರು, ಪ್ರವಾಸಿಗರು ಸ್ನಾನ ಮಾಡಿದ ಬಳಿಕ ತಮ್ಮ ಹಳೆಯ ಬಟ್ಟೆ, ಪ್ಲಾಸ್ಟಿಕ್ ಕವರ್ ಸೇರಿದಂತೆ ಇನ್ನಿತರ ತ್ಯಜ್ಯಗಳನ್ನು ಎಲ್ಲಂದರಲ್ಲಿ ಹಾಕಿ ಮೈಲಿಗೆ ಮಾಡುವುದರೊಂದಿಗೆ ಅಪವಿತ್ರಗೊಳ್ಳಲು ಕಾರಣವಾಗುತ್ತಿದ್ದಾರೆ. ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಇಲ್ಲಿನ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.

ವರದಿ: ಅಶ್ವಿತ್ ಮಾವಿನಗುಣಿ, ಟಿವಿ9 ಚಿಕ್ಕಮಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ