ಬೆಂಗಳೂರಿನಲ್ಲಿ 52ಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ; ಕರ್ನಾಟಕದಲ್ಲಿ ಒಟ್ಟು 9 ಜನ ಬಲಿ

|

Updated on: May 17, 2021 | 11:10 AM

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್​ಗೆ ಒಟ್ಟು 9 ಜನ ಬಲಿಯಾಗಿದ್ದಾರೆ. ಬ್ಲ್ಯಾಕ್ ಫಂಗಸ್ ಬಗ್ಗೆ ಮಾಹಿತಿ ಪಡೆಯಲು ಇಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಮಿತಿ ರಚನೆ ಮಾಡಲಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ 52ಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ; ಕರ್ನಾಟಕದಲ್ಲಿ ಒಟ್ಟು 9 ಜನ ಬಲಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ 52 ಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ 14 ಜನರಿಗೆ ಬ್ಲ್ಯಾಕ್ ಫಂಗಸ್ ಇರುವುದು ದೃಢವಾಗಿದೆ. ಈ ಪೈಕಿ ಇಬ್ಬರು ಬ್ಲ್ಯಾಕ್ ಫಂಗಸ್​ನಿಂದ ಮೃತಪಟ್ಟಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನರು ಬೇರೆಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವಾರ ಟ್ರಸ್ಟ್​ವೆಲ್​ ಆಸ್ಪತ್ರೆಯಲ್ಲಿ 38 ಜನರಿಗೆ ಸೋಂಕು ತಗುಲಿದ್ದು, ದಿನಕ್ಕೊಂದು ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳುತ್ತಿದೆ.

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್​ಗೆ ಒಟ್ಟು 9 ಜನ ಬಲಿಯಾಗಿದ್ದಾರೆ. ಬ್ಲ್ಯಾಕ್ ಫಂಗಸ್ ಬಗ್ಗೆ ಮಾಹಿತಿ ಪಡೆಯಲು ಇಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಮಿತಿ ರಚನೆ ಮಾಡಲಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.

ಹುಬ್ಬಳ್ಳಿಯಲ್ಲೂ ಬ್ಲ್ಯಾಕ್ ಫಂಗಸ್​ನಿಂದ ಜನರು ಬಳಲುತ್ತಿದ್ದಾರೆ. 8 ಜನರಿಗೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಕಿಮ್ಸ್​ನ ಇಎನ್​ಟಿ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಗದಗ ಮಾಹಿತಿ ನೀಡಿದ್ದಾರೆ. ಅರ್ಧ ತಲೆ ನೋವಿನ ಮೂಲಕ ಕಾಣಿಸಿಕೊಳ್ಳುವ ಈ ರೋಗ ಲಕ್ಷಣ ಹೆಚ್ಚಾಗಿ ಮಧುಮೇಹ ಇರುವ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆಯ ಖರ್ಚು ಹೆಚ್ಚಾಗಿರುವ ಹಿನ್ನೆಲೆ ಕಿಮ್ಸ್ ನಿರ್ದೇಶಕರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದಾರೆ.

ಇದು ಮೊದಲಿನಿಂದಲೂ ಇದ್ದ ರೋಗ. ಇದೀಗ ಧಿಡೀರ್ ಕಾಣಿಸಿಕೊಂಡಿದೆ. ಕಿಮ್ಸ್​ನಲ್ಲಿ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆ. ತಡ ಮಾಡದೆ ಪರೀಕ್ಷಿಸಿಕೊಳ್ಳುವುದು ಉತ್ತಮ. ತಲೆ ನೋವು ಕಾಣಿಸಿಕೊಂಡರೆ ಅಲಕ್ಷ್ಯ ಬೇಡ. ವಯಸ್ಸಿನ ಮಿತಿ ಇಲ್ಲದೆ ಈ ರೋಗ ಬರುತ್ತಿದೆ. ಹೀಗಾಗಿ ಎಲ್ಲರೂ ಜಾಗೃತರಾಗಿರಬೇಕು. ಈ ರೋಗದಿಂದ ಕಣ್ಣು ಹೋಗಬಹುದು. ಜೀವಕ್ಕೂ ಹಾನಿ ಸಾಧ್ಯತೆ ಇದೆ. ಆದರೆ ಯಾರು ಕೂಡ ಭಯ ಪಡುವುದು ಬೇಡ. ಸರಿಯಾದ ವೇಳೆಯಲ್ಲಿ ಬಂದು ಟೆಸ್ಟ್ ಮಾಡಿಸಿ, ಸರಿಯಾದ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಡಾ.ರವೀಂದ್ರ ಗದಗ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮೂವರಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಕಾನ್ಸ್ಟೇಬಲ್​ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಯಾರಿಗೂ ಗಂಭೀರ ಪರಿಸ್ಥಿತಿಯಿಲ್ಲ. ಬ್ಲ್ಯಾಕ್ ಫಂಗಸ್​ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ

ಕೊವಿಡ್ ಕರ್ತವ್ಯದಲ್ಲಿರುವ ಶಿಕ್ಷಕರಿಗೆ ಲಸಿಕೆ ನೀಡಿ; ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಸರ್ಕಾರಕ್ಕೆ ಮನವಿ

ವ್ಯಕ್ತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 18 ಜನರಿಗೆ ಸೋಂಕು, ವಲಸಿಗರಿಂದಲೇ ಕೊರೊನಾ ಹರಡುತ್ತಿದೆ ಎಂಬ ಶಂಕೆ ವ್ಯಕ್ತಪಡಿಸಿದ ತಹಶೀಲ್ದಾರ್

(Black fungus has been found in more than 52 people in Bangalore and Nine people were killed in Karnataka)