ವ್ಯಕ್ತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 18 ಜನರಿಗೆ ಸೋಂಕು, ವಲಸಿಗರಿಂದಲೇ ಕೊರೊನಾ ಹರಡುತ್ತಿದೆ ಎಂಬ ಶಂಕೆ ವ್ಯಕ್ತಪಡಿಸಿದ ತಹಶೀಲ್ದಾರ್
ಮೃತನ ಮನೆಗೆ ಸಾಂತ್ವನ ಹೇಳಲು ಬಂದಿದ್ದ ಸಂಬಂಧಿಕರು, ಬಳಿಕ ಮೃತನ ಕುಟುಂಬಸ್ಥರು ಸೇರಿ 18 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಂಕ್ರಪ್ಪ ಗೌಡರ(48) ಮೇ 5 ರಂದು ಮೃತಪಟ್ಟಿದ್ದ ವ್ಯಕ್ತಿ. ಇವರು ಕೊವಿಡ್ ಶಂಕೆ ಹಿನ್ನೆಲೆಯಲ್ಲಿ ಕೊರೊನಾ ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗಿತ್ತು. ಮೃತಪಟ್ಟ ನಂತರ ಸಂಬಂಧಿಕರು ಕುಟುಂಬಸ್ಥರಿಗೆ ಸಾಂತ್ವನ ಹೇಳೋಕೆ ಬಂದಿದ್ದರು...
ಬಾಗಲಕೋಟೆ: ವ್ಯಕ್ತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 18 ಜನರಿಗೆ ಕೊರೊನಾ ಸೋಂಕು ತಗುಲಿದೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ರೈಲ್ವೆ ಸ್ಟೇಷನ್ ಗ್ರಾಮದಲ್ಲಿ ಮೇ 5ರಂದು ವ್ಯಕ್ತಿ ಮೃತಪಟ್ಟಿದ್ದರು. ಕೊವಿಡ್ ಶಂಕೆ ಹಿನ್ನೆಲೆ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ ಈಗ ವ್ಯಕ್ತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 18 ಜನರಿಗೆ ಕೊರೊನಾ ತಗುಲಿದೆ.
ಮೃತನ ಮನೆಗೆ ಸಾಂತ್ವನ ಹೇಳಲು ಬಂದಿದ್ದ ಸಂಬಂಧಿಕರು, ಬಳಿಕ ಮೃತನ ಕುಟುಂಬಸ್ಥರು ಸೇರಿ 18 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಂಕ್ರಪ್ಪ ಗೌಡರ(48) ಮೇ 5 ರಂದು ಮೃತಪಟ್ಟಿದ್ದ ವ್ಯಕ್ತಿ. ಇವರು ಕೊವಿಡ್ ಶಂಕೆ ಹಿನ್ನೆಲೆಯಲ್ಲಿ ಕೊರೊನಾ ನಿಯಮಾವಳಿ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗಿತ್ತು. ಮೃತಪಟ್ಟ ನಂತರ ಸಂಬಂಧಿಕರು ಕುಟುಂಬಸ್ಥರಿಗೆ ಸಾಂತ್ವನ ಹೇಳೋಕೆ ಬಂದಿದ್ದರು. ಈ ವೇಳೆ ಆರೋಗ್ಯ ಇಲಾಖೆ ಇವರನ್ನು ತಪಾಸಣೆಗೆ ಒಳಪಡಿಸಿದೆ. ತಪಾಸಣೆ ವೇಳೆ ಮೃತನ ಕುಟುಂಬದ 10 ಜನ, ಸಾಂತ್ವನ ಹೇಳೋಕೆ ಬಂದ 8 ಜನ ಸಂಬಂಧಿಕರಿಗೆ ಕೊವಿಡ್ ಇರುವುದು ದೃಢಪಟ್ಟಿದೆ.
ಸದ್ಯ ಮೃತನ ಕುಟುಂಬಸ್ಥರು ಹೋಮ್ ಕ್ವಾರಂಟೈನ್ ಆಗಿದ್ದು, ಸಾಂತ್ವನ ಹೇಳೋಕೆ ಬಂದ ಸಂಬಂಧಿಕರಿಗೆ ಹೋಮ್ ಐಸೊಲೇಶನ್ ಇರೋಕೆ ಸೂಚಿಸಿದ್ದಾರೆ. ಗುಳೇದಗುಡ್ಡ ರೈಲ್ವೆ ಸ್ಟೇಷನ್ ವ್ಯಾಪ್ತಿ ಪ್ರದೇಶಕ್ಕೆ ತಹಶೀಲ್ದಾರ್ ಜಿಎಮ್ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗುಳೇದಗುಡ್ಡ ರೈಲ್ವೆ ಸ್ಟೇಷನ್ ಮೂಲಕ ವಲಸಿಗರು ಬಂದಿದ್ದಾರೆ. ವಲಸಿಗರಿಂದಲೇ ಕೊವಿಡ್ ಹರಡಿರುವ ಶಂಕೆ ಇದೆ ಎಂದು ತಹಶೀಲ್ದಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಲು ವೈದ್ಯರ ಹಿಂದೇಟು; ವಿಜಯಪುರ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆರೋಪ