ಟಗ್‌ನಲ್ಲಿ ಸಿಲುಕಿದ್ದ 9 ಕಾರ್ಮಿಕರನ್ನು ರಕ್ಷಿಸಿದ ನೌಕಾಪಡೆ, ರಕ್ಷಣಾ ಕಾರ್ಯಚರಣೆ ಹೀಗಿತ್ತು…
ನೌಕಾದಳದ ಹೆಲಿಕಾಪ್ಟರ್ ಮೂಲಕ ಇಂಡಿಯನ್ ಕೋಸ್ಟ್ ಗಾರ್ಡ್ ಮತ್ತು ನೌಕಾದಳದ ಜಂಟಿ ರಕ್ಷಣಾ ಕಾರ್ಯಚರಣೆ ನಡೆದಿದ್ದು ಟಗ್‌ನಲ್ಲಿ ಸಿಲುಕಿದ್ದ 9 ಕಾರ್ಮಿಕರ ರಕ್ಷಿಸುವಲ್ಲಿ ನೌಕಾಪಡೆ ಯಶಸ್ವಿಯಾಗಿದೆ.
ಮಂಗಳೂರು: ಭಾರಿ ಅಲೆಗಳ ಹೊಡೆತಕ್ಕೆ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಟಗ್ ಒಂದರಲ್ಲಿ ಪ್ರಾಣಾಪಾಯದಲ್ಲಿದ್ದ 9 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ನೌಕಾದಳದ ಹೆಲಿಕಾಪ್ಟರ್ ಮೂಲಕ ಇಂಡಿಯನ್ ಕೋಸ್ಟ್ ಗಾರ್ಡ್ ಮತ್ತು ನೌಕಾದಳದ ಜಂಟಿ ರಕ್ಷಣಾ ಕಾರ್ಯಚರಣೆ ನಡೆದಿದ್ದು ಟಗ್‌ನಲ್ಲಿ ಸಿಲುಕಿದ್ದ 9 ಕಾರ್ಮಿಕರ ರಕ್ಷಿಸುವಲ್ಲಿ ನೌಕಾಪಡೆ ಯಶಸ್ವಿಯಾಗಿದೆ.
ಸ್ಪೀಡ್ ಬೋಟ್, ವರಾಹ ನೌಕೆ, ಹೆಲಿಕಾಪ್ಟರ್ ಮೂಲಕ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಕಾರ್ಮಿಕರನ್ನು ಕೋಸ್ಟ್ ಗಾರ್ಡ್ ಶಿಪ್ ವರಾಹ ಮೂಲಕ ದಡಕ್ಕೆ ತರಲಾಗುತ್ತಿದೆ. ಬಳಿಕ ಕಾರ್ಮಿಕರನ್ನು ಎನ್.ಎಂ.ಪಿ.ಟಿ ಬಂದರಿಗೆ ತರಲಾಗುತ್ತಿದ್ದು ಕಾರ್ಮಿಕರ ಆರೋಗ್ಯದ ತಪಾಸಣೆಗೆ ವೈದ್ಯರ ತಂಡ ಸಜ್ಜಾಗಿದೆ.
ಕಾಪು ಲೈಟ್ ಹೌಸ್ ನಿಂದ 15 ಕಿಮೀ ದೂರದಲ್ಲಿ ಬೋಟ್ ಸಿಲುಕಿಕೊಂಡಿತ್ತು. ಕಿರೋಜ್ ಕಂಪನಿಗೆ ಸೇರಿದ ಕೋರಂಗಲ ಎಕ್ಸ್‌ಪ್ರೆಸ್ ವೆಸಲ್ ಬೋಟ್ ಇದಾಗಿದ್ದು ಬೋಟ್ ನಲ್ಲಿದ್ದ ಮುಲ್ಲಾ ಖಾನ್, ಗೌರವ್ ಕುಮಾರ್, ಶಂತನು, ಅಹಮ್ಮದ್, ರಾಹುಲ್, ದೀಪಕ್, ಪ್ರಶಾಂತ್, ತುಷಾರ್, ಲಕ್ಷ್ಮೀನಾರಾಯಣ ಸೇರಿ 9 ಮಂದಿಯನ್ನು ನೇವಿ ಹೆಲಿಕಾಪ್ಟರ್, ಕೋಸ್ಟ್ ಗಾರ್ಡ್ ಸ್ಪೀಡ್ ಬೋಟ್ ಬಳಸಿ ರಕ್ಷಣೆ ಮಾಡಲಾಗಿದೆ.
ಅರಬ್ಬೀ ಸಮುದ್ರದಲ್ಲಿ ಟಗ್ ನಲ್ಲಿ ಸಿಲುಕಿದ್ದ 9 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್ ಹಾಗೂ ನೌಕಾಪಡೆಗೆ ಧನ್ಯವಾದಗಳು. ಇಂದು ಮುಂಜಾನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಲಾಗಿದೆ. ಕಾರ್ಮಿಕರ ಆರೋಗ್ಯದ ತಪಾಸಣೆ ಸೇರಿದಂತೆ ಎಲ್ಲ ಅಗತ್ಯ ನೆರವು ಒದಗಿಸಲಾಗುತ್ತಿದೆ.
— CM of Karnataka (@CMofKarnataka) May 17, 2021
ತೌಕ್ತೆ ಚಂಡಮಾರುತದ ಅಬ್ಬರಕ್ಕೆ ನಾಪತ್ತೆಯಾಗಿದ್ದ ಎಮ್ಆರ್ಪಿಎಲ್ನ ಒಂದು ಟಗ್ ಪತ್ತೆಯಾಗಿತ್ತು. ಆದರೆ ದುರಾದೃಷ್ಟವಷಾತ್ ಟಗ್ ಪತ್ತೆಯಾದರೂ ಭಾರೀ ಗಾಳಿ, ಮಳೆಯ ಕಾರಣದಿಂದ ಅದರ ರಕ್ಷಣಾ ಕಾರ್ಯ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪತ್ತೆಯಾಗಿರುವ ಟಗ್ ಮತ್ತು 9 ಮಂದಿ ನೌಕರರನ್ನು ಮಾರನೆ ದಿನ ಮುಂಜಾನೆ ರಕ್ಷಣೆ ಮಾಡಲು ನಿರ್ಧರಿಸಲಾಗಿತ್ತು. ಅಲ್ಲಿಯವರೆಗೂ ಲಂಗರು ಹಾಕಿದ ಸ್ಥಳದಲ್ಲಿ ನಿಲ್ಲುವಂತೆ 9 ಜನರಿಗೆ ಸೂಚನೆ ನೀಡಲಾಗಿತ್ತು.
ಟಗ್‌ನಲ್ಲಿ ಇರುವ 9 ಮಂದಿ ನೌಕರರು ಪ್ರಾಣ ಕೈಯಲ್ಲಿ ಹಿಡಿದು ನಿಂತಿದ್ದರು. ಎಲ್ಲರಿಗೂ ಚಂಡಮಾರುತದ ಮಧ್ಯೆ ಸಮುದ್ರದಲ್ಲಿ ಇರುವ ಪರಿಸ್ಥಿತಿ ಎದುರಾಗಿತ್ತು. ಸುರತ್ಕಲ್ನ 17 ನಾಟಿಕಲ್ ದೂರದಲ್ಲಿ ದುರಂತ ನಡೆದಿತ್ತು. ಸದ್ಯ ಈಗ ನೌಕಾಪಡೆ 9 ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ; ನಾಳೆ ಮುಂಜಾನೆವರೆಗೆ ಸಮುದ್ರದಲ್ಲೇ ಇರುವ ಅನಿವಾರ್ಯತೆ
Published On - 12:05 pm, Mon, 17 May 21