ರಾತ್ರಿ ಕರ್ಫ್ಯೂ | ಬೆಂಗಳೂರಿನಲ್ಲಿ ಬಸ್ ಸಂಚಾರದ ಗೊಂದಲ; ಮಾರ್ಗಸೂಚಿಗೆ ಕಾಯುತ್ತಿರುವ ಕೆಎಸ್ಆರ್ಟಿಸಿ, ಬಿಎಂಟಿಸಿ
ಸಂಜೆ 6ಗಂಟೆ ನಂತರ ಗೈಡ್ಲೈನ್ಸ್ ಬರಬಹುದು. ಸುಮಾರು 7ಗಂಟೆಗೆ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ ಎಂದು ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್ ಮತ್ತು ಬಿಎಂಟಿಸಿ ಎಂಡಿ ಸಿ.ಶಿಖಾ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿಯಾಗುತ್ತಿದ್ದು, ಬಸ್ ಸಂಚಾರದ ಬಗ್ಗೆ ಸರ್ಕಾರ ತಳೆದಿರುವ ನಿಲುವು ಇನ್ನೂ ಸ್ಪಷ್ಟವಾಗಿಲ್ಲ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಬಸ್ ಸಂಚಾರದ ಬಗ್ಗೆ ಈವರೆಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.
ಕರ್ಫ್ಯೂ ಸಮಯದಲ್ಲಿ ಬಸ್ ಸಂಚಾರದ ನಿಯಮಾವಳಿಗಳು ಹಾಗೂ ಬೆಳಗ್ಗೆ ಎಷ್ಟು ಗಂಟೆಯಿಂದ ಸಂಚಾರ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಮಗೆ ಇಲ್ಲಿಯವರೆಗೆ ರಾಜ್ಯಸರ್ಕಾರದಿಂದ ಮಾರ್ಗಸೂಚಿ ಬಂದಿಲ್ಲ. ಸಂಜೆ 6ರ ನಂತರ ಸೂಚನೆ ಬರಬಹುದು. ಸುಮಾರು 7 ಗಂಟೆಗೆ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ಧೇಶಕ ಶಿವಯೋಗಿ ಕಳಸದ್ ಮತ್ತು ಬಿಎಂಟಿಸಿ ಎಂಡಿ ಸಿ.ಶಿಖಾ ಮಾಹಿತಿ ನೀಡಿದ್ದಾರೆ.
ಮುಂಗಡ ಟಿಕೆಟ್ ಕಾಯ್ದಿರಿಸಿರುವ ಎಲ್ಲ ಪ್ರಯಾಣಿಕರು ರಾತ್ರಿ 10 ಗಂಟೆಯ ಒಳಗೆ ನಿಲ್ದಾಣಗಳನ್ನು ತಲುಪಬೇಕು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.
ಇಂದು ರಾತ್ರಿಯಿಂದಲೇ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ
ರಾತ್ರಿ 10 ಗಂಟೆಯ ಒಳಗೆ ಬಸ್ ನಿಲ್ದಾಣ ತಲುಪಿ: ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮನವಿ