ನಿಟ್ಟುಸಿರು ಬಿಟ್ಟ ಮಂಗಳೂರು ಜನತೆ: ಕೊನೆಗೂ ಬಾಂಬ್​ ಸ್ಫೋಟಗೊಳಿಸಿದ ಬಾಂಬ್ ನಿಷ್ಕ್ರಿಯ ದಳ

|

Updated on: Jan 20, 2020 | 6:35 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಂಬ್​ ಅನ್ನು ಕೊನೆಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸ್ಫೋಟಗೊಳಿಸಿದ್ದಾರೆ. ಮಂಗಳೂರು ಏರ್​ಪೋರ್ಟ್​ನಿಂದ 1 ಕಿ.ಮೀ. ದೂರದಲ್ಲಿರುವ ಕೆಂಜಾರು ಮೈದಾನದಲ್ಲಿ ಮರಳು ಚೀಲಗಳ ನಡುವೆ ಬಾಂಬ್​ ಇರಿಸಿ ಸ್ಫೋಟಿಸಿದ್ದಾರೆ. ಬೆಳಗ್ಗೆಯಿಂದ ಇದ್ದ ಆತಂಕ ದೂರವಾಗಿ ಮಂಗಳೂರು ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ನಿರ್ಜನ ಪ್ರದೇಶಕ್ಕೆ ರವಾನೆ: ಮರಳು ಚೀಲಗಳ ನಡುವೆ ದೊಡ್ಡ ಮಟ್ಟದ ಶಬ್ಧದೊಂದಿಗೆ ಬಾಂಬ್ ಸ್ಫೋಟಗೊಂಡಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ​ ಟಿಕೆಟ್ […]

ನಿಟ್ಟುಸಿರು ಬಿಟ್ಟ ಮಂಗಳೂರು ಜನತೆ: ಕೊನೆಗೂ ಬಾಂಬ್​ ಸ್ಫೋಟಗೊಳಿಸಿದ ಬಾಂಬ್ ನಿಷ್ಕ್ರಿಯ ದಳ
Follow us on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಂಬ್​ ಅನ್ನು ಕೊನೆಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸ್ಫೋಟಗೊಳಿಸಿದ್ದಾರೆ. ಮಂಗಳೂರು ಏರ್​ಪೋರ್ಟ್​ನಿಂದ 1 ಕಿ.ಮೀ. ದೂರದಲ್ಲಿರುವ ಕೆಂಜಾರು ಮೈದಾನದಲ್ಲಿ ಮರಳು ಚೀಲಗಳ ನಡುವೆ ಬಾಂಬ್​ ಇರಿಸಿ ಸ್ಫೋಟಿಸಿದ್ದಾರೆ. ಬೆಳಗ್ಗೆಯಿಂದ ಇದ್ದ ಆತಂಕ ದೂರವಾಗಿ ಮಂಗಳೂರು ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ನಿರ್ಜನ ಪ್ರದೇಶಕ್ಕೆ ರವಾನೆ:
ಮರಳು ಚೀಲಗಳ ನಡುವೆ ದೊಡ್ಡ ಮಟ್ಟದ ಶಬ್ಧದೊಂದಿಗೆ ಬಾಂಬ್ ಸ್ಫೋಟಗೊಂಡಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ​ ಟಿಕೆಟ್ ಕೌಂಟರ್​ ಬಳಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ಈ ಬಗ್ಗೆ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬ್ಯಾಗ್ ಪರಿಶೀಲಿಸಿದಾಗ ಬಾಂಬ್​ ಇರುವುದು ಖಚಿತವಾಗಿತ್ತು. ಬಳಿಕ ಬಾಂಬ್​ ಇದ್ದ ಬ್ಯಾಗ್​ ಅನ್ನು ಸುರಕ್ಷತಾ ವಾಹನದಲ್ಲಿ ಇರಿಸಲಾಗಿತ್ತು. ಬಾಂಬ್​ ಪ್ರತಿರೋಧಕ ವಾಹನದಲ್ಲಿ ಬೇರೆಡೆಗೆ ಶಿಫ್ಟ್ ಮಾಡಲಾಯಿತು.

ಕೆಂಜಾರು ಮೈದಾನದಲ್ಲಿ ಸ್ಫೋಟ:
ಮಂಗಳೂರು ​ಏರ್​ಪೋರ್ಟ್​ನಿಂದ 1 ಕಿ.ಮೀ. ದೂರದಲ್ಲಿರುವ ಕೆಂಜಾರು ಮೈದಾನಕ್ಕೆ ಬಾಂಬ್​ ಸ್ಥಳಾಂತರ ಮಾಡಲಾಗಿತ್ತು. ಕೊನೆಗೆ ಸಂಜೆ 5.37ಕ್ಕೆ ಬಾಂಬ್​ ಅನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಫೋಟಿಸಿದ್ದಾರೆ. ಇದರಿಂದ ಮಂಗಳೂರು ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.




Published On - 6:21 pm, Mon, 20 January 20