Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮೀಣ ಸೊಗಡಿನಲ್ಲೇ ಯಲ್ಲಾಲಿಂಗನ ಆರಾಧನೆ: ಜಾತ್ರೆಯಲ್ಲಿ ಖಡಕ್ ರೊಟ್ಟಿಯ ಕಮಾಲ್

ಬೆಳಗಾವಿ: ಬಣ್ಣ ಬಣ್ಣದ ಸೀರೆಯುಟ್ಟು ಮಹಿಳೆಯರ ಭವ್ಯ ಮೆರವಣಿಗೆ. ಕಣ್ಣಾಯಿಸಿದಷ್ಟು ದೂರ ಜನಸಾಗರ. ಎಲ್ಲರ ತಲೆಯ ಮೇಲೊಂದು ಬಿಳಿ ಬಣ್ಣದ ಮೂಟೆ. ಇದರ ಜೊತೆ ಜೊತೆಗೆ ದೇವರ ನಾಮಸ್ಮರಣೆ. ಅರ್ರೆ ಇದೆನಪ್ಪಾ, ಎಲ್ರು ತಲೆ ಮೇಲೆ ಮೂಟೆ ಇಟ್ಕೊಂಡು ಬರ್ತಿದ್ದಾರೆ. 9ನೇ ದಿನ ನಡೆಯುವ ರೊಟ್ಟಿ ಜಾತ್ರೆ: ಇಂತಹ ವಿಭಿನ್ನ ಕಾರ್ಯಕ್ಕೆ ಸಾಕ್ಷಿ ಆಗಿದ್ದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿರುವ ಜಿಡಗಾ ಮಠ. ಇಲ್ಲಿ ಪ್ರತಿವರ್ಷ 11 ದಿನಗಳ ಕಾಲ ಅದ್ಧೂರಿಯಾಗಿ ಯಲ್ಲಾಲಿಂಗ ಪ್ರಭುಗಳ ಜಾತ್ರೆ […]

ಗ್ರಾಮೀಣ ಸೊಗಡಿನಲ್ಲೇ ಯಲ್ಲಾಲಿಂಗನ ಆರಾಧನೆ: ಜಾತ್ರೆಯಲ್ಲಿ ಖಡಕ್ ರೊಟ್ಟಿಯ ಕಮಾಲ್
Follow us
ಸಾಧು ಶ್ರೀನಾಥ್​
|

Updated on: Jan 20, 2020 | 8:20 PM

ಬೆಳಗಾವಿ: ಬಣ್ಣ ಬಣ್ಣದ ಸೀರೆಯುಟ್ಟು ಮಹಿಳೆಯರ ಭವ್ಯ ಮೆರವಣಿಗೆ. ಕಣ್ಣಾಯಿಸಿದಷ್ಟು ದೂರ ಜನಸಾಗರ. ಎಲ್ಲರ ತಲೆಯ ಮೇಲೊಂದು ಬಿಳಿ ಬಣ್ಣದ ಮೂಟೆ. ಇದರ ಜೊತೆ ಜೊತೆಗೆ ದೇವರ ನಾಮಸ್ಮರಣೆ. ಅರ್ರೆ ಇದೆನಪ್ಪಾ, ಎಲ್ರು ತಲೆ ಮೇಲೆ ಮೂಟೆ ಇಟ್ಕೊಂಡು ಬರ್ತಿದ್ದಾರೆ.

9ನೇ ದಿನ ನಡೆಯುವ ರೊಟ್ಟಿ ಜಾತ್ರೆ: ಇಂತಹ ವಿಭಿನ್ನ ಕಾರ್ಯಕ್ಕೆ ಸಾಕ್ಷಿ ಆಗಿದ್ದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿರುವ ಜಿಡಗಾ ಮಠ. ಇಲ್ಲಿ ಪ್ರತಿವರ್ಷ 11 ದಿನಗಳ ಕಾಲ ಅದ್ಧೂರಿಯಾಗಿ ಯಲ್ಲಾಲಿಂಗ ಪ್ರಭುಗಳ ಜಾತ್ರೆ ನಡೆಯುತ್ತೆ. ವಿಶೇಷವಾಗಿ 9ನೇ ದಿನ ರೊಟ್ಟಿ ಜಾತ್ರೆ ನಡೆಯುತ್ತೆ. ಅದ್ರಂತೆ ಇವತ್ತು ಭಕ್ತರು ಐದು ಲಕ್ಷಕ್ಕೂ ಅಧಿಕ ರೊಟ್ಟಿಗಳನ್ನ ದೇವರಿಗೆ ಸಮರ್ಪಿಸಿದ್ರು. ಇದ್ರಲ್ಲಿ ಬೇಕಾದಷ್ಟು ರೊಟ್ಟಿಯನ್ನ ಮಠದಲ್ಲೇ ಇಟ್ಕೊಂಡು ಉಳಿದ ರೊಟ್ಟಿಯನ್ನ ದಾಸೋಹ ನಡೆಸುವ ಮಠಕ್ಕೆ ಕಳುಹಿಸಲಾಗುತ್ತೆ.

ಪ್ರಸಾದ ಹಂಚಿ ತಿನ್ನುವುದೇ ಜಾತ್ರೆ ವಿಶೇಷ: ಇನ್ನು, ಖಡಕ್ ರೊಟ್ಟಿಯ ಕಮಾಲ್ ಒಂದ್ಕಡೆ ಆಗಿದ್ರೆ, ಮತ್ತೊಂದ್ಕಡೆ ಗ್ರಾಮೀಣ ಸೊಗಡಿನ ಲೋಕವೇ ಸೃಷ್ಟಿಯಾಗಿತ್ತು. ಗುಡಿಸಲಿನಲ್ಲಿ ರೊಟ್ಟಿ ಮಾಡುವುದು. ಗೋದಿಯನ್ನ ಕುಟ್ಟುವುದು. ಬಾವಿಯಿಂದ ನೀರು ಸೇದುವುದರ ಜೊತೆಗೆ ಹಳ್ಳಿ ಕಟ್ಟೆಯೂ ಸಿದ್ಧವಾಗಿತ್ತು. ಅದೇನೆ ಇರಲಿ, ಜಾತ್ರೆ ಅಂದ್ರೆ ಕೇವಲ ದೇವರ ಆರಾಧನೆ ಮಾಡಿ ಪ್ರಸಾದ ಸೇವಿಸುವುದಲ್ಲ. ಬದ್ಲಿಗೆ ಪ್ರಸಾದವನ್ನ ತಾವೇ ತಂದು ಹಂಚಿ ತಿನ್ಬೇಕು ಎನ್ನುವುದೇ ಈ ಜಾತ್ರೆಯ ವಿಶೇಷ.