ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ: ಹಣಕಾಸು ಕಂಪನಿಯ ಉದ್ಯೋಗಿ ವಿರುದ್ಧ FIR ರದ್ದು

ಹಣಕಾಸು ಕಂಪನಿಯ ಉದ್ಯೋಗಿಯಾದ ರೋಹಿತ್ ನಲಾವಾಡೆ, ಪ್ರಮೋದ್ ಚೌಹಾನ್ ಎಂಬುವವರಿಗೆ ಸಾಲವನ್ನು ಮರುಪಾವತಿಸಲು ತಿಳಿಸಿದ್ದರು. ರೋಹಿತ್ ನಲಾವಾಡೆರವರು ಕಿರುಕುಳ ನೀಡುತ್ತಿದ್ದಾರೆಂದು ಪ್ರಮೋದ್ ಚೌಹಾನ್ ಡೆತ್ ನೋಟ್​ನಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದರು.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ: ಹಣಕಾಸು ಕಂಪನಿಯ ಉದ್ಯೋಗಿ ವಿರುದ್ಧ FIR ರದ್ದು
ಸಾಂದರ್ಭಿಕ ಚಿತ್ರ
Updated By: ಸಾಧು ಶ್ರೀನಾಥ್​

Updated on: Jan 07, 2021 | 4:38 PM

ನಾಗ್ಪುರ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಹಣಕಾಸು ಕಂಪನಿಯ ಉದ್ಯೋಗಿಯೊಬ್ಬರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠ ರದ್ದುಪಡಿಸಿದೆ.

ಹಣಕಾಸು ಕಂಪನಿಯ ಹಿರಿಯ ಉದ್ಯೋಗಿ ರೋಹಿತ್ ನಲಾವಾಡೆ ಎಂಬುವವರು ಪ್ರಮೋದ್ ಚೌಹಾನ್ ಎಂಬುವವರಿಗೆ ಸಾಲವನ್ನು ಮರುಪಾವತಿಸಲು ತಿಳಿಸಿದ್ದರು. ಆದರೆ.. ರೋಹಿತ್ ನಲಾವಾಡೆರವರು ಕಿರುಕುಳ ನೀಡುತ್ತಿದ್ದಾರೆಂದು ಪ್ರಮೋದ್ ಚೌಹಾನ್ ಡೆತ್ ನೋಟ್​ನಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದರು.

ಈ ಕುರಿತು ಹಿರಿಯ ಉದ್ಯೋಗಿ ರೋಹಿತ್ ನಲಾವಾಡೆ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿ ಪ್ರಕರಣ ದಾಖಲಾಗಿತ್ತು. ಆದರೆ ಇದೀಗ ನ್ಯಾಯಮೂರ್ತಿ ವಿನಯ್ ದೇಶಪಾಂಡೆ ಮತ್ತು ನ್ಯಾಯಮೂರ್ತಿ ಅನಿಲ್ ಕಿಲೋರ್ ಅವರ ನ್ಯಾಯಪೀಠವು ಎಫ್‌ಐಆರ್ ರದ್ದುಪಡಿಸಿ, ಇದು ನೌಕರರ ಕರ್ತವ್ಯವೇ ಹೊರತು, ಕಿರುಕುಳವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

2018 ಆಗಸ್ಟ್ 8ರಲ್ಲಿ ವಾಶಿಮ್‌ನ ಶ್ರೀಪುರದಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ಹಣಕಾಸು ಕಂಪನಿಯು ಚೌಹಾನ್‌ಗೆ 6,21,000 ರೂ. ಸಾಲವನ್ನು ಮಂಜೂರು ಮಾಡಿತ್ತು. ನಂತರ ಆ ಹಣವನ್ನು ಮಾಸಿಕ ಕಂತುಗಳ ಮೂಲಕ ಮರು ಪಾವತಿಸಲು ಸೂಚಿಸಲಾಗಿತ್ತು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ ಚೌಹಾನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಸಿಕ್ಯೂಷನ್ ತಿಳಿಸಿದೆ.

ಸ್ವಾಧೀನಪಡಿಸಿಕೊಂಡ‌ ಜಮೀನಿಗೆ ಪರಿಹಾರ ಕೊಡಲು ಮೀನಮೇಷ: KIADBಗೆ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್