ಗೆಳೆಯರ ಜೊತೆ ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು

|

Updated on: Jan 03, 2021 | 11:18 PM

ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಬೈಲಾಕೊನೆನಹಳ್ಳಿಯಲ್ಲಿ ನಡೆದಿದೆ. ಬಾವಿಯಲ್ಲಿ ಮುಳುಗಿ 18 ವರ್ಷದ ಯುವಕ ಕಿರಣ್ ಅಸುನೀಗಿದ್ದಾನೆ.

ಗೆಳೆಯರ ಜೊತೆ ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು
ಗೆಳೆಯರ ಜೊತೆ ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು
Follow us on

ಬೆಂಗಳೂರು: ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಬೈಲಾಕೊನೆನಹಳ್ಳಿಯಲ್ಲಿ ನಡೆದಿದೆ. ಬಾವಿಯಲ್ಲಿ ಮುಳುಗಿ 18 ವರ್ಷದ ಯುವಕ ಕಿರಣ್ ಅಸುನೀಗಿದ್ದಾನೆ.

ಕಿರಣ್​ ತನ್ನ ಮೂವರು ಸ್ನೇಹಿತರ ಜೊತೆ ಈಜಲು ತೆರಳಿದ್ದಾಗ ಅವಘಡ ಸಂಭವಿಸಿದೆ. ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಮೃತದೇಹವನ್ನು ಹೊರತೆಗೆದರು.

ಕೂಲಿ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದ ಮಹಿಳೆ ತಲುಪಿದ್ದು ಮಾತ್ರ ಮಸಣಕ್ಕೆ..