Nandini Milk: ಎಫ್​ಎಂಸಿಜಿ ಬ್ರ್ಯಾಂಡ್ ರ‍್ಯಾಂಕಿಂಗ್​ನಲ್ಲಿ ಮೇಲೇರಿದ ನಂದಿನಿ, ಒಂದು ಸ್ಥಾನ ಕುಸಿದ ಅಮುಲ್

ಬ್ರ್ಯಾಂಡ್ ಫುಟ್‌ಪ್ರಿಂಟ್ ಎಂಬ ಬ್ರ್ಯಾಂಡ್ ರ‍್ಯಾಂಕಿಂಗ್ ಪಟ್ಟಿಯನ್ನು ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಗುಂಪಿನ ಕಾಂತಾರ್ ವರ್ಲ್ಡ್‌ಪ್ಯಾನೆಲ್ ಪ್ರಕಟಿಸಿದೆ.

Nandini Milk: ಎಫ್​ಎಂಸಿಜಿ ಬ್ರ್ಯಾಂಡ್ ರ‍್ಯಾಂಕಿಂಗ್​ನಲ್ಲಿ ಮೇಲೇರಿದ ನಂದಿನಿ, ಒಂದು ಸ್ಥಾನ ಕುಸಿದ ಅಮುಲ್
ನಂದಿನಿ & ಅಮುಲ್

Updated on: Jul 29, 2023 | 5:13 PM

ಬೆಂಗಳೂರು: ಫಾಸ್ಟ್ ಮೂವಿಂಗ್ ಕನ್​ಸ್ಯೂಮರ್ ಗೂಡ್ಸ್ (FMCG) ಬ್ರ್ಯಾಂಡ್ ರ‍್ಯಾಂಕಿಂಗ್​ನಲ್ಲಿ 2023ನೇ ಸಾಲಿನಲ್ಲಿ ಕರ್ನಾಟಕ ಸಹಕಾರಿ ಹಾಲು ಮಾರಾಟ ಮಹಾಮಂಡಳದ (KMF) ಡೈರಿ ಬ್ರ್ಯಾಂಡ್ ನಂದಿನಿ (Nandini) ಒಂದು ಸ್ಥಾನ ಮೇಲಕ್ಕೇರಿದೆ. 2022ರಲ್ಲಿ 7ನೇ ಸ್ಥಾನದಲ್ಲಿದ್ದ ನಂದಿನಿ ಬ್ರ್ಯಾಂಡ್ 2023ರಲ್ಲಿ ಒಂದು ಸ್ಥಾನ ಮೇಲೇರಿ 6ರಲ್ಲಿ ಗುರುತಿಸಿಕೊಂಡಿದೆ. ಮತ್ತೊಂದೆಡೆ, 2022 ರಲ್ಲಿ 2ನೇ ಸ್ಥಾನದಲ್ಲಿದ್ದ ಗುಜರಾತ್​​ನ ಅಮುಲ್ 3 ನೇ ಸ್ಥಾನಕ್ಕೆ ಕುಸಿದಿದೆ.

ಬ್ರ್ಯಾಂಡ್ ಫುಟ್‌ಪ್ರಿಂಟ್ ಎಂಬ ಬ್ರ್ಯಾಂಡ್ ರ‍್ಯಾಂಕಿಂಗ್ ಪಟ್ಟಿಯನ್ನು ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಗುಂಪಿನ ಕಾಂತಾರ್ ವರ್ಲ್ಡ್‌ಪ್ಯಾನೆಲ್ ಪ್ರಕಟಿಸಿದೆ.

ಅಮುಲ್ vs ನಂದಿನಿ

2023 ರ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗುಜರಾತ್​ನ ಅಮುಲ್ ಬ್ರ್ಯಾಂಡ್​​ನ ಹಾಲು ರಾಜ್ಯದ ಮಾರುಕಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ ಎಂಬ ವಿಚಾರ ಭಾರಿ ಗದ್ದಲಕ್ಕೆ ಕಾರಣವಾಗಿತ್ತು. ಅಮುಲ್ ವಿರುದ್ಧ ಭಾರಿ ಪ್ರತಿಭಟನೆಗಳೂ ನಡೆದಿದ್ದವು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಈ ಬ್ರ್ಯಾಂಡ್ ರ‍್ಯಾಂಕಿಂಗ್ ಕೆಎಂಎಫ್​ಗೆ ನಿರಾಳತೆ ಒದಗಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: Nandini Milk Price: ನಂದಿನಿ ಹಾಲಿನ ದರ ಲೀಟರ್​ಗೆ 3 ರೂ. ಹೆಚ್ಚಳ: ಆಗಸ್ಟ್ 1ರಿಂದ ಜಾರಿ

ಈ ಮಧ್ಯೆ, ಕರ್ನಾಟಕದ ಹೈನುಗಾರರಿಗೆ ಅವರ ಶ್ರಮಕ್ಕೆ ಉತ್ತಮ ಆದಾಯ ಖಾತರಿಪಡಿಸಿಕೊಳ್ಳುವ ದೃಷ್ಟಿಯಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಆಗಸ್ಟ್ 1 ರಿಂದ ಕೆಎಂಎಫ್ ಮಾರಾಟ ಮಾಡುವ ಹಾಲಿನ ಬೆಲೆಯನ್ನು ಲೀಟರ್‌ಗೆ 3 ರೂ. ಹೆಚ್ಚಿಸಲು ನಿರ್ಧರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ